Saturday, July 13, 2024
spot_img
spot_img
spot_img
spot_img
spot_img
spot_img

Renukaswamy murder case : ಪೊಲೀಸರ ಮುಂದೆ ನಟ ದರ್ಶನ್ ವಿರುದ್ಧವೇ ಹೇಳಿಕೆ ಕೊಟ್ರಾ ನಟಿ ಪವಿತ್ರಾಗೌಡ .?

spot_img

ಜನಸ್ಪಂದನ ನ್ಯೂಸ್, ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿಗೆ ಸಂಬಂಧಿಸಿದಂತೆ ಜೈಲು ಸೇರಿರುವ ನಟ ದರ್ಶನ್ ಹಾಗೂ ನಟಿ  ಪವಿತ್ರಾಗೌಡ ಸೇರಿದಂತೆ 17 ಜನರ ಗ್ಯಾಂಗ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ.

ಇದೇ ವೇಳೆ ಆರೋಪಿ ನಟಿ ಪವಿತ್ರಾಗೌಡ ಆರೋಪಿ ನಟ ದರ್ಶನ್ ವಿರುದ್ಧವಾಗಿಯೇ ಹೇಳಿಕೆಯನ್ನು ನೀಡಿದ್ದಾರೆಂಬ ವಿಷಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಕಾಲಿನ ಚಿಕಿತ್ಸೆಗೆ ದಾಖಲಾದ ಬಾಲಕ ; ಖಾಸಗಿ ಅಂಗಕ್ಕೆ ಕತ್ತರಿ ಇಟ್ಟ Doctor.!

ಆರೋಪಿ ಪವಿತ್ರಾಗೌಡ ವಿಚಾರಣೆ ಮಾಡಿದಾಗ, ಕೊಲೆಯಾಗಿರುವ ರೇಣುಕಾಸ್ವಾಮಿಯ ಮೇಲೆ ಹಲ್ಲೆ ಮಾಡಿದ್ದಾಗಿ ಕೊಲೆ ಆರೋಪಿ ನಟ ದರ್ಶನ್ ವಿರುದ್ಧವಾಗಿಯೇ ಹೇಳಿಕೆಯನ್ನು ಪೊಲೀಸರ ತನಿಖೆಗೆ ವೇಳೆ ನೀಡಿದ್ದಾರಂತೆ. ನಾನು ಚಪ್ಪಲಿಯಲ್ಲಿ ಒಮ್ಮೆ ಹೊಡೆದು ಸುಮ್ಮನೆ ನಿಂತಿರುವಾಗ ದರ್ಶನ್, ರೇಣುಕಾಸ್ವಾಮಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾಗಿ ತನಿಖೆಯ ವೇಳೆ ಹೇಳಿದ್ದಾರೆ ಎನ್ನಲಾಗಿದೆ.

ನಾನು ಶೆಡ್‍ಗೆ ಹೋಗುವುದಕ್ಕೂ ಮುಂಚನೇ ದರ್ಶನ್ ಶೆಡ್‍ನಲ್ಲಿದ್ದರು ಎಂಬುದಾಗಿ ಪವಿತ್ರಾ ಗೌಡ (Pavithra Gowda) ಅವರು ಪೊಲೀಸ್ ಕಸ್ಟಡಿಯಲ್ಲಿದ್ದಾಗ ಪೊಲೀಸರ ಮುಂದೆ ಹೇಳಿದ್ದಾರೆ ಅಂತಾ ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ : RDPR : ಗ್ರಾಮ ಪಂಚಾಯತಿಗಳಲ್ಲಿ ಭರ್ಜರಿ ನೇಮಕಾತಿಗೆ ಸರ್ಕಾರ ಆದೇಶ.!

ನಟಿ ಪವಿತ್ರಾಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ್ದಾನೆ ಎಂಬ ಕೋಪಕ್ಕೆ ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಆತನನ್ನು ಕಿಡ್ನಾಪ್ ಮಾಡಿಕೊಂಡು ಕರೆತಂದು ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ದೊಡ್ಡ ಸಾಕ್ಷಿ ಸಿಕ್ಕಿದೆ.

ಇನ್ನು ಜೈಲಿನಲ್ಲಿ ಪ್ರತಿನಿತ್ಯ ಸಂಕಟ ಅನುಭವಿಸುತ್ತಿರುವ ನಟಿ ಪವಿತ್ರಾಗೌಡ ಒಂದು ವಾರದಲ್ಲಿಯೇ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಈ ಮೂಲಕ ತನಗಾಗಿ ರೇಣುಕಾಸ್ವಾಮಿ ಕೊಲೆ ಮಾಡಿದ ನಟ ದರ್ಶನ್ ವಿರುದ್ಧ ಹೇಳಿಕೆ ಕೊಟ್ಟಿದ್ದಾಳೆ. (ಎಜೇನ್ಸಿಸ್)

spot_img
spot_img
- Advertisment -spot_img