Saturday, July 13, 2024
spot_img
spot_img
spot_img
spot_img
spot_img
spot_img

Reel’s Madness : ಕಾರು ರಿವರ್ಸ್ ಗೇರ್‌ನಲ್ಲಿದ್ದಾಗ ಕ್ಲಚ್ ಬದಲು ಎಕ್ಸಲೇಟರ್ ಒತ್ತಿ 300 ಅಡಿ ಪ್ರಪಾತಕ್ಕೆ ಬಿದ್ದು ಯುವತಿ ಸಾವು.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್ : ಯುವತಿಯೋರ್ವಳು ಕಾರು ಚಲಾಯಿಸುತ್ತಾ ರಿವರ್ಸ್​ ಗೇರ್‌ನಲ್ಲಿದ್ದಾಗ ಎಕ್ಸಲೇಟರ್​​ ಒತ್ತಿದ ಪರಿಣಾಮ ಕಾರು 300 ಅಡಿ ಕಂದಕಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಯುವತಿ ಇತ್ತೀಚೆಗಷ್ಟೇ ಕಾರು ಕಲಿತಿದ್ದರು ಎನ್ನಲಾಗಿದೆ.

ಕಂದಕಕ್ಕೆ ಬಿದ್ದು ಸಾವನ್ನಪ್ಪಿದ ಯುವತಿಯನ್ನು ಛತ್ರಪತಿ ಶಂಭಾಜಿ ನಗರದ 23 ವರ್ಷದ ಶ್ವೇತಾ ಸುರ್ವಾಸೆ ಎಂದು ಗುರುತಿಸಲಾಗಿದ್ದು, ಯುವತಿಯು ಕಾರು ಚಾಲನೆ ಮಾಡುತ್ತಿದ್ದಾಗ 300 ಅಡಿ ಕಣಿವೆ (ಕಂದಕ) ಗೆ ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಇದನ್ನು ಓದಿ : ಬೈಕ್‌ನಲ್ಲಿ ಹೊರಟ ದಂಪತಿ : ಮಹಿಳೆಯನ್ನೇ ಗುರಿಯಾಗಿಸಿ ದಾಳಿ ಮಾಡಿದ ಬಿಡಾಡಿ ಹಸು ; ಭಯಾನಕ ವಿಡಿಯೋ ವೈರಲ್.!

ಮಹಾರಾಷ್ಟ್ರದ ಛತ್ರಿಪತಿ ಸಂಭಾಜಿನಗರದಲ್ಲಿ ಯುವತಿ ರಿವರ್ಸ್​ ಗೇರ್​ನಲ್ಲಿ ಎಕ್ಸಲೇಟರ್ ಒತ್ತಿದ ಕಾರಣ ಕಾರು ಹಿಂಬದಿಯ ಕ್ರ್ಯಾಶ್​ ಬ್ಯಾರಿಯರ್‌ನ್ನು ಮುರಿದು ಕಂದಕಕ್ಕೆ ಬಿದ್ದಿದೆ. ಸುಲಿಭಂಜನ್ ಪ್ರದೇಶದಲ್ಲಿ ಜೂ.17ರ ಮಧ್ಯಾಹ್ನ ಈ ಘಟನೆ ನಡೆದಿದೆ.

ಸ್ನೇಹಿತ ಶಿವರಾಜ್ ಮುಳೆ ಕಾರಿನಲ್ಲಿ ಸಂಭಾಜಿನಗರದಿಂದ ದತ್ ಮಂದಿರ ಪ್ರದೇಶಕ್ಕೆ ಬಂದಿದ್ದರು. ಶಿವರಾಜ್ ಇತ್ತೀಚೆಗಷ್ಟೇ ಶ್ವೇತಾಳಿಗೆ ಕಾರು ಓಡಿಸಲು ಕಲಿಸಿದ್ದ ಎನ್ನಲಾಗಿದೆ. ಶ್ವೇತಾಗೆ ಕಾರು ಓಡಿಸುವಾಗ (reels) ರೀಲ್‌ಗಳನ್ನು ತಯಾರಿಸುವ ಆಸೆ ಇತ್ತು. ಹೀಗಾಗಿ ಮೊಬೈಲನ್ನು ಶಿವರಾಜ್‌ಗೆ ಕೊಟ್ಟು ತನ್ನ ರೀಲ್ಸ್​ ಮಾಡುವಂತೆ ಕೇಳಿದ್ದಳು.

ಇದನ್ನು ಓದಿ : ಆನ್‌ಲೈನ್ ಪಾರ್ಸೆಲ್ ತೆರೆದಾಗ ಬಂತು ಬುಸುಗುಟ್ಟುತ್ತಿರುವ ಹಾವು ; ಬೆಚ್ಚಿಬಿದ್ದ ದಂಪತಿ.!

ರೀಲ್ಸ್‌ ಮಾಡುವಾಗ ಇದ್ದಕ್ಕಿದ್ದಂತೆ ಕಾರು ರಿವರ್ಸ್ ಗೇರ್‌ನಲ್ಲಿ ಚಲಿಸಲು ಪ್ರಾರಂಭಿಸಿತು ಮತ್ತು ಶ್ವೇತಾ ಏನು ಮಾಡಬೇಕೆಂದು ತೋಚದೆ ಮತ್ತೆ ಎಕ್ಸಲೇಟರ್‌ನ್ನು ಒತ್ತಿದ್ದಾಳೆ. ಈ ವೇಳೆ ಶಿವರಾಜ್​ ಕ್ಲಚ್ ಕ್ಲಚ್​ ಎಂದು ಎಷ್ಟೇ ಕೂಗಿದರೂ ಆಕೆಗೆ ಕೇಳಿಸಲೇ ಇಲ್ಲ. ಪರಿಣಾಮ ನಿಯಂತ್ರಣ ತಪ್ಪಿ ಹಿಂದೆ ಇದ್ದ 300 ಅಡಿ ಕಂದಕಕ್ಕೆ ಬಿದ್ದಿದೆ ಎಂದು ವರದಿ ತಿಳಿಸಿದೆ.

ಆಳವಾದ ಕಂದಕ್ಕೆ ಕಾರು ಬಿದ್ದ ಪರಿಣಾಮ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಅಪಘಾತದಲ್ಲಿ ಶ್ವೇತಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅವರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಕಂದಕಕ್ಕೆ ಬಿದ್ದಿದ್ದ ಕಾರನ್ನು ತೆಗೆದಿದ್ದಾರೆ ಮತ್ತು ಚಿಕಿತ್ಸೆಗಾಗಿ ಯುವತಿಯನ್ನ ಖುಲ್ತಾಬಾದ್ ಗ್ರಾಮಾಂತರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

spot_img
spot_img
- Advertisment -spot_img