ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಹೊಂಗಸಂದ್ರದ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದರ ಕುರಿತು ಮಾಹಿತಿ ಮೇರೆಗೆ ಸಿಸಿಬಿ ಮಹಿಳಾ ಸಂರಕ್ಷಣಾ ದಳ ದಾಳಿ ನಡೆಸಿದ್ದು, ಈ ವೇಳೆ ಮನೆಯಲ್ಲಿ ಇಬ್ಬರು ಹುಡುಗಿಯರು ಪತ್ತೆಯಾಗಿದ್ದಾರೆ.
ಇದನ್ನು ಓದಿ : ಬ್ಯೂಟಿ ಪಾರ್ಲರ್ ಬಂದ್ ಮಾಡಿಸಿ ಎಂದು ಪ್ರತಿಭಟನೆ ನಡೆಸಿದ ಯುವಕರು; ವಿಡಿಯೋ Viral.!
ಈ ವೇಳೆ ಅಪ್ರಾಪ್ತ ಹೆಣ್ಣು ಮಕ್ಕಳ ಕಳ್ಳಸಾಗಣೆ ಮಾಡಿ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ದಾಳಿ ವೇಳೆ ಬಾಂಗ್ಲಾ ಮೂಲದ ಇಬ್ಬರು ಅಪ್ರಾಪ್ತೆಯರನ್ನು ರಕ್ಷಿಸಲಾಗಿದ್ದು, ಓರ್ವ ಮಹಿಳೆ ಸೇರಿದಂತೆ ಮೂವರನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬಂಧಿತರಲ್ಲಿ ಇಬ್ಬರು ಒರಿಸ್ಸಾ ಮೂಲದವರು, ಒಬ್ಬ ಸ್ಥಳೀಯ ನಿವಾಸಿ.
ಇದನ್ನು ಓದಿ : ಡ್ಯಾನ್ಸ್ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಪೊಲೀಸ್ ಕಾನ್ಸ್‌ಟೇಬಲ್ ಸಾವು ; ವಿಡಿಯೋ Viral.!
15 ಹಾಗೂ 16 ವಯಸ್ಸಿನ ಹುಡುಗಿಯರನ್ನು ಬಾಂಗ್ಲಾದೇಶದಿಂದ ಕಳ್ಳಸಾಗಣೆ ಮಾಡಿ ಕರೆತಂದಿದ್ದು ಪತ್ತೆಯಾಗಿದೆ. ನಂತರ ಅವರನ್ನು ಹೊಂಗಸಂದ್ರದ ಬಾಡಿಗೆ ಮನೆಯಲ್ಲಿ ಇರಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ವಿಚಾರಣೆ ವೇಳೆ ಬಂಧಿತರು ತಿಳಿಸಿದ್ದಾರೆ.
ಸ್ಥಳೀಯ ಆರೋಪಿ ಎಳೆ ಹುಡುಗಿಯರೇ ಬೇಕು ಎಂದು ಕರೆಸಿಕೊಂಡಿದ್ದ. ಹೀಗಾಗಿ ಇನ್ನಿಬ್ಬರು ಆರೋಪಿಗಳು ಅಪ್ರಾಪ್ತೆಯರನ್ನು ಕರೆತಂದಿದ್ದರು ಎನ್ನಲಾಗಿದೆ.
ಇದನ್ನು ಓದಿ : ಗಂಡನನ್ನು ಫಾರಿನ್ ಗೆ ಕಳುಹಿಸಿ ಮಾವನೊಂದಿಗೆ ರೊಮ್ಯಾನ್ಸ್; YouTubeನಲ್ಲಿದೆ ಈ ಮೂವಿ.!
ಅಪ್ರಾಪ್ತೆಯರ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ಸಂಬಂಧ ಬೊಮ್ಮನಹಳ್ಳಿ ಠಾಣೆಯಲ್ಲಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆದರೆ ಈಗ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ತಿಳಿದು ಬಂದಿದೆ.