ಜನಸ್ಪಂದನ ನ್ಯೂಸ್, ರಾಯಚೂರು : ಆದರ್ಶ ವಿದ್ಯಾಲಯದ ಪ್ರಭಾರಿ ಪ್ರಿನ್ಸಿಪಾಲ್ ಓರ್ವ ತರಬೇತಿಗೆ ಬಂದಿದ್ದ ಶಿಕ್ಷಕಿ ಜತೆ ಅನುಚಿತವಾಗಿ ವರ್ತಿಸಿ ಥಳಿತಕ್ಕೊಳಗಾದ ಘಟನೆ ರಾಯಚೂರು ನಗರ ಸಮೀಪ ಯರಮರಸ್ ನಲ್ಲಿ ನಡೆದಿದೆ.
ಏಟು ತಿಂದ ಪ್ರಭಾರಿ ಪ್ರಾಚಾರ್ಯ ಮೆಹಬೂಬ್ ಅಲಿ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ 400 ಹುದ್ದೆಗಳಿಗೆ ಇಂದಿನಿಂದ ಅರ್ಜಿ ಆಹ್ವಾನ.!
ಶಿಕ್ಷಕಿಯ ಮೊಬೈಲ್‌ಗೆ ಅಶ್ಲೀಲ ಮೆಸೇಜ್‌ಗಳನ್ನು ಕಳಿಸುತ್ತಿದ್ದ ಈತ, ರಾತ್ರಿ ಮಲಗಲು ಬಾ ಎಂದೂ ಕರೆದಿದ್ದ ಎನ್ನಲಾಗಿದೆ.
ಇದರಿಂದ ನೊಂದ ಶಿಕ್ಷಕಿ ತಮ್ಮವರಿಗೆ ಮಾಹಿತಿ ತಿಳಿಸಿದ್ದರು. ಶಾಲೆಗೆ ಬಂದ ಶಿಕ್ಷಕಿಯ ಕಡೆಯವರು, ಸಾರ್ವಜನಿಕರು ಪ್ರಭಾರ ಪ್ರಾಚಾರ್ಯನಿಗೆ ಮನಸೋ ಇಚ್ಛೆ ಧರ್ಮದೇಟು ನೀಡಿ ಬುದ್ಧಿ ಕಲಿಸಿದ್ದಾರೆ.
ಇನ್ನೂ ತಾನು ಮಾಡಿದ್ದು ತಪ್ಪಾಗಿದೆ. ಇನ್ನು ಮುಂದೆ ಹಾಗೆ ಮಾಡುವುದಿಲ್ಲ ಎಂದು ಪ್ರಭಾರಿ ಪ್ರಾಚಾರ್ಯ ಮೆಹಬೂಬ್ ಅಲಿ ಮುಚ್ಚಳಿಕೆ ಬರೆದುಕೊಟ್ಟಿದ್ದಾನೆ. ಅಲ್ಲದೇ ಶಿಕ್ಷಕಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ.
ಇದನ್ನು ಓದಿ : Health : ಶೇಂಗಾವನ್ನು ನೆನಸಿಟ್ಟು ತಿನ್ನವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು.?
ಘಟನೆಯ ಕುರಿತು ಗ್ರಾಮೀಣ ಠಾಣೆ ಅಥವಾ ಮಹಿಳಾ ಠಾಣೆಯಲ್ಲಾಗಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.