ಜನಸ್ಪಂದನ ನ್ಯೂಸ್, ಡೆಸ್ಕ್ : ಶಾಲೆಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದರ ಜೊತೆ ಮಕ್ಕಳಿಗೆ ಬೋಧನೆ ಮಾಡುತ್ತ ಮೌಲ್ಯಗಳನ್ನು ತುಂಬಬೇಕಾಗಿರುವುದು ಶಿಕ್ಷಕ/ಕಿಯರ ಧರ್ಮ. ಆದರೆ, ಇತ್ತೀಚೆಗೆ ಕೆಲ ಶಾಲೆಗಳಲ್ಲಿ ಶಿಕ್ಷಕರು ತಪ್ಪು ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಪ್ರಾಂಶುಪಾಲ ಹಾಗೂ ಮಹಿಳಾ ಟೀಚರ್ ರೊಮ್ಯಾನ್ಸ್ ಮಾಡಿದ ಫೋಟೊ ಈಗ ವೈರಲ್ ಆಗಿದೆ.
ಉತ್ತರ ಪ್ರದೇಶದ ಜೌನ್‌ಪುರದಲ್ಲಿರುವ ಶಾಲೆಯೊಂದರಲ್ಲಿ ಪ್ರಾಂಶುಪಾಲ ಹಾಗೂ ಮಹಿಳಾ ಟೀಚರ್ ತಬ್ಬಿಕೊಂಡು, ಮುದ್ದಾಡಿರುವ ಫೋಟೊ ವೈರಲ್ ಆಗಿದೆ. ರೊಮ್ಯಾನ್ಸ್ ಮಾಡುತ್ತಿರುವ ಶಾಲಾ ಕೋಣೆಯ ಗೋಡೆಯ ಮೇಲೆ ದೇಶಭಕ್ತರ ಹಾಗೂ ನಾಯಕರುಗಳ ಫೋಟೊಗಳನ್ನು ನೇತುಹಾಕಲಾಗಿದೆ.
ಇದನ್ನು ಓದಿ : Missing : ಅಕಾಡೆಮಿಯಿಂದ ಇಬ್ಬರು ಮಹಿಳಾ ಕಾನ್ಸ್ಟೇಬಲ್ಗಳು ನಾಪತ್ತೆ.!
ಇಂಥ ನಾಯಕರುಗಳ ಫೋಟೋ ಇರುವ ಗೋಡೆಯ ಕೆಳಗೆ ಇವರಿಬ್ಬರೂ ರೊಮ್ಯಾನ್ಸ್ ಮಾಡಿದ್ದಾರೆ. ಖಾಸಗಿ ಶಾಲೆಯಲ್ಲಿ ಇಂತಹದ್ದೊಂದು ಅನಾಚಾರದ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ. ಸದ್ಯ ಫೋಟೊಗಳನ್ನು ನೋಡಿದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಭಾನುವಾರ (ದಿ. 7) ಫೋಟೊ ವೈರಲ್ ಆಗಿದ್ದು, ಶಿಕ್ಷಕರ ಕುಲಕ್ಕೆ ಇವರು ಅವಮಾನ ಇದ್ದ ಹಾಗೆ, ಇಂತವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇವರನ್ನು ಅಮಾನತುಗೊಳಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಮಳೆಗಾಲದಲ್ಲಿ ಪುಂಡಿ ಪಲ್ಲೆ ತಿನ್ನುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.
ಕಾನ್ವೆಂಟ್ ಶಾಲೆಯ ಪ್ರಾಂಶುಪಾಲ ಹಾಗೂ ಮಹಿಳಾ ಟೀಚರ್ ತುಂಬ ದಿನಗಳಿಂದ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಇವರು ಶಾಲೆಯಲ್ಲಿಯೇ ರೊಮ್ಯಾನ್ಸ್ ಮಾಡಿರುವುದು ಭಾರಿ ಆಕ್ರೋಶಕ್ಕೆ ಗುರಿಯಾಗಿದೆ.