ಜನಸ್ಪಂದನ ನ್ಯೂಸ್, ಡೆಸ್ಕ್ : ಕಾಗೆಯೊಂದು ಮೂರ್ಛೆ ಹೋಗಿ ಚಿಂತಾಜನಕ ಸ್ಥಿತಿಯಲ್ಲಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಅದನ್ನು ರಕ್ಷಿಸಿದ ಘಟನೆ ನಡೆದಿದ್ದು, ಈ ಕುರಿತಾದ ವಿಡಿಯೋ ವೈರಲ್ ಆಗಿದೆ.
ಕೊಯಮತ್ತೂರಿನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ತಂದೆ ಇಲ್ಲದ ಮಕ್ಕಳಿಗೆ ಸಿಗುತ್ತೆ 24 ಸಾವಿರ ರೂ. ಸ್ಕಾಲರ್‌ಶಿಪ್; ಮಾನದಂಡಗಳೇನು ಗೊತ್ತಾ.?
ವಿದ್ಯುತ್ ಪ್ರವಹಿಸಿ ಕಾಗೆಯೊಂದು ಮೂರ್ಛೆ ಹೋಗಿ ನೆಲಕ್ಕೆ ಬಿದ್ದು ಪ್ರಜ್ಞೆ ತಪ್ಪಿ ಬಿದ್ದಿತು. ತಕ್ಷಣ ಅಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿ ಅದನ್ನು ಕೈಯಲ್ಲಿ ಇಟ್ಟುಕೊಂಡು, ಮೇಲೆತ್ತಿ ಸಿಪಿಆರ್ ನೀಡಿ ಜೀವ ಉಳಿಸಲು ಯತ್ನಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೇವಲ 10 ಸೆಕೆಂಡ್‌ಗಳ ವೀಡಿಯೋದಲ್ಲಿ ಪೊಲೀಸ್ ಅಧಿಕಾರಿಯು ತನ್ನ ಬಾಯಿಯ ಮೂಲಕ ಕಾಗೆಗೆ ಸಿಪಿಆರ್ ನೀಡಿದ್ದು, ಕಾಗೆ ಉಸಿರಾಡುತ್ತಿರುವುದನ್ನು ಕಾಣಬಹುದು. ಅದರೊಂದಿಗೆ ಕಾಗೆ ಮತ್ತೆ ಜೀವ ಪಡೆದುಕೊಂಡಿತು.
ಇದನ್ನು ಓದಿ : ಬಾಡಿಗೆ ಕೊಡು, ಇಲ್ಲಾಂದ್ರೆ ಶೆಡ್ಡಿಗ್ ಬಾ ಎಂದ ಜಡ್ಜ್ ; ವಿಡಿಯೋ Viral.!
ಕಾಗೆಯನ್ನು ರಕ್ಷಿಸಿದ ಅಗ್ನಿಶಾಮಕ ದಳದ ಅಧಿಕಾರಿಗೆ ಜನರಿಂದ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ಇದು ನಿಜವಾದ ಪ್ರಾಣಿ ಸೇವೆ ಎಂದು ನೆಟ್ಟಿಗರು ಹಾಡಿಹೊಗಳಿದ್ದಾರೆ.
कोयंबटूर में अग्निशमन और बचाव सेवा के एक अधिकारी ने बिजली का झटका लगने के बाद नीचे गिरे कौए की CPR देकर जान बचाई। #CPR #ViralVideo #Crow pic.twitter.com/bwmYbiR01V
— ज़िन्दगी गुलज़ार है ! (@Gulzar_sahab) September 20, 2024