ಜನಸ್ಪಂದನ ನ್ಯೂಸ್, ಬೆಂಗಳೂರು : ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡುವ ಸಂದರ್ಭ ಪೊಲೀಸ್ ಸಿಬ್ಬಂದಿಯೊಬ್ಬ ಆಕಸ್ಮಿಕವಾಗಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಗೆ ಲಾಠಿಯಲ್ಲಿ ಬಾರಿಸಿದ ಘಟನೆ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಇದನ್ನು ಓದಿ : ಅಪ್ಪನನ್ನೇ ಬಂಧಿಸುವಂತೆ ಕಂಪ್ಲೆಂಟ್ ಕೊಟ್ಟ 5 ವರ್ಷದ ಮಗ ; ಅಂತ ಕಾರಣವಾದ್ರು ಏನು ಗೊತ್ತೇ.?
ಭಾರತ್ ಬಂದ್ ಪ್ರತಿಭಟನೆ ವೇಳೆ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸ್ ಸಿಬ್ಬಂದಿ ಆಕಸ್ಮಿಕವಾಗಿ ಜಿಲ್ಲಾಧಿಕಾರಿಗೆ ಲಾಠಿಯಲ್ಲಿ ಬಾರಿಸಿದ್ದಾರೆ.
ಎಸ್‌ಡಿಎಂ ಶ್ರೀಕಾಂತ್ ಕುಂಡ್ಲಿಕ್ ಖಂಡೇಕರ್ ಅವರು ರಸ್ತೆಯ ಮಧ್ಯದಲ್ಲಿ ನಿಂತಿದ್ದರು. ಇದೇ ಸಂದರ್ಭ ಆಕ್ರೋಶಗೊಂಡ ಪೊಲೀಸ್ ಸಿಬ್ಬಂದಿಯೊಬ್ಬರು ಅವರಿಗೆ ದೊಣ್ಣೆಯಿಂದ ಹೊಡೆದಿದ್ದಾರೆ.
ಇದನ್ನು ಓದಿ : ವಿದ್ಯುತ್ ಇಲಾಖೆ (ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ) ಯಲ್ಲಿ ಖಾಲಿ ಇರುವ 1,000+ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ರಸ್ತೆಯ ಮಧ್ಯದಲ್ಲಿ ನಿಂತು ಪ್ರತಿಭಟನಾಕಾರರನ್ನು ಚದುರಿಸುತ್ತಿದ್ದ ಎಸ್‌ಡಿಎಂ ಶ್ರೀಕಾಂತ್ ಕುಂಡ್ಲಿಕ್ ಖಾಂಡೇಕರ್ ಅವರನ್ನು ಪೊಲೀಸರು ತಪ್ಪಾಗಿ ಲಾಠಿ ಬೀಸಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಇತರ ಪೊಲೀಸರು ತಕ್ಷಣವೇ ಪೊಲೀಸ್ ಸಿಬ್ಬಂದಿಯನ್ನು ತಡೆದು ಆ ವ್ಯಕ್ತಿ ಯಾರು ಎಂದು ವಿವರಿಸಿದರು. ನಂತರ ಎಸ್‌ಡಿಎಂ ಅವರನ್ನು ಘಟನಾ ಸ್ಥಳದಿಂದ ದೂರ ಕರೆದೊಯ್ದರು.
ಇದನ್ನು ಓದಿ : BSNL : 229 ರೂ. ರೀಚಾರ್ಜ್ ಪ್ಲಾನ್ಗೆ ಭಾರೀ ಡಿಮ್ಯಾಂಡ್; ದಿನಕ್ಕೆ 2GB ಡೇಟಾ ಸೇರಿ ಹಲವು ಬೆನಿಫಿಟ್ಸ್.!
ಪಾಟ್ನಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ರಾಜೀವ್ ಮಿಶ್ರಾ, ಪ್ರತಿಭಟನಾಕಾರರು ಬಿಹಾರ ನ ಡಾಕ್ ಬಂಗಲೆ ಚೌಕ್‌ನಲ್ಲಿ ಸಂಚಾರವನ್ನು ನಿರ್ಬಂಧಿಸಿದ ಹಿನ್ನೆಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.
ಭಾರತ್ ಬಂದ್‌ಗೆ ಬೆಂಬಲವಾಗಿ ಪ್ರತಿಭಟನಾಕಾರರು ದಿಗ್ಬಂಧನ ಹಾಕಿದ್ದರಿಂದ ಬುಧವಾರ ಬಿಹಾರದ ಕೆಲವು ಭಾಗಗಳಲ್ಲಿ ವಾಹನ ಸಂಚಾರಕ್ಕೆ ಸ್ವಲ್ಪ ಸಮಯ ಅಡ್ಡಿಯಾಯಿತು ಎಂದು ಹೇಳಿದ್ದಾರೆ.
SDM saahab ko hi koot diya patna main 🤣🤣 (0.6 – 0.9) #BharatBandh pic.twitter.com/gCG8h9sK7Q
— Prayag (@theprayagtiwari) August 21, 2024