ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಸಧ್ಯ ಪ್ರಯಾಗ್‌ರಾಜ್‌ನ (Prayagraj) ಮಹಾಕುಂಭಮೇಳದ ಪೋಟೋ, ವಿಡಿಯೋಗಳದ್ದೆ ಸದ್ದು. ಅವುಗಳಲ್ಲಿ ಕೆಲವೊಂದು ದೃಶ್ಯಗಳು ನೆಟ್ಟಿಗರನ್ನು ತಮ್ಮತ್ತ ಸೆಳೆಯುತ್ತಿವೆ. ಸದ್ಯ ಅಂತದ್ದೊಂದು ವಿಡಿಯೋ ವೈರಲ್ ಆಗಿದೆ.
ಪ್ರಯಾಗ್‌ರಾಜ್‌ನಲ್ಲಿ ಭಕ್ತಸಮೂಹದ ನಿಯಂತ್ರಣ ಹೇಗಿದೆ (How is the control of the devotees)? ಎಂಬುದನ್ನು ವಿವರಿಸುತ್ತಾ ತಾತನೊಬ್ಬ, ಆ ಸ್ಥಳದಲ್ಲಿ ಒಂದೆರೆಡು ಬಾರಿ ಅಲ್ಲ, ಬರೋಬ್ಬರಿ ಮೂರು ಸಲ ಕಳೆದೋದ ತಮ್ಮ ಪತ್ನಿಯನ್ನು ಕೇವಲ ಅರ್ಧ ಗಂಟೆಯೊಳಗೆ ಹುಡುಕಿಕೊಟ್ಟ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನು ಓದಿ : `SSLC’ ಪಾಸಾಗಿದ್ದೀರಾ.? ‘ಭಾರತೀಯ ಅಂಚೆ ಇಲಾಖೆ’ಯಲ್ಲಿ 65,200 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ವಿಡಿಯೋದಲ್ಲಿರುವ ದೃಶ್ಯ :
ನನ್ನ ಪತ್ನಿಯನ್ನು ಅಷ್ಟು ಬೇಗ ಹುಡುಕಿ ಕೊಟ್ಟಿದ್ದು ಸರಿಯೇ? ಇದೆಂಥಾ ವ್ಯವಸ್ಥೆ ಪೊಲೀಸ್ರೇ ಎಂದು ತಾತಪ್ಪ ಕೇಳುವುದನ್ನು ವಿಡಿಯೋದಲ್ಲಿ ನೋಡಬಹುದು.
ಅಜ್ಜನ (grandfather) ಈ ತಮಾಷೆಯ ಮಾತು ನೋಡುಗರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದೆ.
ಇದನ್ನು ಓದಿ : ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ವಂಚಕ ; ಮದುವೆ ಹೆಸರಲ್ಲಿ ಮೋಸ ಹೋದ ಮಹಿಳಾ Constable.!
ಈ ವ್ಯವಸ್ಥೆ ತುಂಬಾ ಕೆಟ್ಟದಾಗಿದೆ ಏಕೆಂದರೆ ಮೊದಲೆಲ್ಲಾ ಜನರು ಕುಂಭಮೇಳಕ್ಕೆ ಹೋದ ವೇಳೆ ಕಳೆದೋದರೆ (missing) ಅವರನ್ನು ಹುಡುಕಲು 10-15 ವರ್ಷಗಳೇ ಬೇಕಾಗುತ್ತಿತ್ತು. ಈ ಬಾರಿ ನಾವು ಕುಂಭಮೇಳಕ್ಕೆ ಹೋದ ಸಂದರ್ಭ ನನ್ನ ಹೆಂಡ್ತಿ ಮೂರು ಸಲ ಮಿಸ್ ಆಗಿದ್ದಳು.
ಆದ್ರೆ ಪೊಲೀಸರು ಪ್ರತಿ ಸಲವೂ ಆಕೆಯನ್ನು ಅರ್ಧಗಂಟೆ ಮುಗಿಯೊದ್ರೊಳಗೆ ಹುಡುಕಿಕೊಟ್ಟಿದ್ದಾರೆ (Every time she was found within half an hour). ನಾನು ಹೇಗಾದರೂ ಪ್ರಯತ್ನ ಪಟ್ಟು ಆಕೆಯಿಂದ ತಪ್ಪಿಸಿಕೊಳ್ಳಬೇಕೆಂದು ಬಯಸಿದ್ದೆ (I wanted to escape), ಆದ್ರೆ ಅದೂ ಆಗಲಿಲ್ಲ, ಈ ಸಿಸ್ಟಮ್ ಸರಿಯೇ ಇಲ್ಲ ಎಂದು ತಮಾಷೆಯಾಗಿ ಹೇಳಿದ್ದಾರೆ.
ಇದನ್ನು ಓದಿ : Alleged rape : ಪ್ರೆಸ್‌ಮೀಟ್ ನಡುವೆಯೇ ಕಾಂಗ್ರೆಸ್ ಸಂಸದನನ್ನು ಬಂಧಿಸಿದ ಪೊಲೀಸರು..!
ನಿತಿನ್ ಶುಕ್ಲಾ (Nitin Shukla) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಜನವರಿ 28 ರಂದು ಹಂಚಿಕೊಂಡ ಈ 3.6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.
ಒಬ್ಬರು ತಾತಪ್ಪನಿಗೆ ತುಂಬಾ ದುಃಖವಾದಂತೆ ಕಾಣುತ್ತಿದೆ ಎಂದು ಕಮೆಂಟ್ ಮಾಡಿದರೆ, ಅಯ್ಯೋ ಈ ವ್ಯಕ್ತಿ ತಮ್ಮ ಮಡದಿಯನ್ನು ಇಲ್ಲೇ ಬಿಟ್ಟು ಹೋಗುವ ಯೋಜನೆಯಲ್ಲಿದ್ದರೆಂದು ಅನಿಸುತ್ತಿದೆ ಎಂದು ಮತ್ತೊಬ್ಬರು ನಗೆಚಟಾಕಿ ಹಾರಿಸಿದ್ದಾರೆ.
ಇದನ್ನು ಓದಿ : ಪ್ರೀತಿಯಿಂದ ರೊಟ್ಟಿ ಕೊಡುತ್ತಿದ್ದ ಅಜ್ಜಿ ತೀರಿಕೊಂಡಾಗ ಹಸು ಮಾಡಿದ್ದೇನು ಗೊತ್ತೇ ; ಈ Vedio ನೋಡಿ.!
ಅಜ್ಜನ ತಮಾಷೆಯ ವಿಡಿಯೋ ಇಲ್ಲಿದೆ :
पूर्ण महाकुंभ में व्यवस्था बहुत खराब है, बुजुर्ग ने खोली व्यवस्थाओं को पोल 😂🤣 pic.twitter.com/2gJTiyn4uY
— Nitin Shukla 🇮🇳 (@nshuklain) January 28, 2025
ಹಿಂದಿನ ಸುದ್ದಿ : ವಿಡಿಯೋ : ಕುಂಭಮೇಳದಲ್ಲಿ ತಯಾರಿಸುತ್ತಿದ್ದ ಆಹಾರಕ್ಕೆ ಬೂದಿ ಬೆರೆಸಿದ ಪೊಲೀಸ್ ಸಸ್ಪೆಂಡ್.!
ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರಯಾಗ್ ರಾಜ್ ನ ಮಹಾ ಕುಂಭಮೇಳದಲ್ಲಿ (MahaKumbhMela of Prayag Raj) ಭಕ್ತರಿಗೆ ಸಮುದಾಯ ಭೋಜನ ತಯಾರಿಸುತ್ತಿದ್ದ ವೇಳೆ ಆಹಾರದಲ್ಲಿ ಬೂದಿ ಬೆರೆಸಿದ ವಿಡಿಯೋ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯೊಬ್ಬರನ್ನು ಅಮಾನತು ಮಾಡಿದ (A police officer was suspended) ಘಟನೆ ನಡೆದಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಇದನ್ನು ಓದಿ : ರೂ.500 ಕೊಟ್ಟ ಯೂಟ್ಯೂಬರ್ ; ‘ನಾನು ವ್ಯಾಪಾರಿ, ಭಿಕ್ಷುಕನಲ್ಲ’ ಎಂದ ಹಪ್ಪಳ ಮಾರುವ ಹುಡುಗ.!
ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ (social media) ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಶೇರ್ ಮಾಡದ್ದು, ಸಾರ್ವಜನಿಕರು ಇದನ್ನು ಗಮನಿಸುವಂತೆ ಒತ್ತಾಯಿಸಿದ್ದಾರೆ.
ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಬಳಿಕ, ಸೊರನ್‌ನ ಠಾಣಾಧಿಕಾರಿ (Station Officer of Soran) ಬ್ರಿಜೇಶ್ ಕುಮಾರ್ ತಿವಾರಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಗಂಗಾ ನಗರ ಡಿಸಿಪಿ ಕುಲದೀಪ್ ಸಿಂಗ್ ಗುಣವತ್ ಅವರು ತಿಳಿಸಿದ್ದಾರೆ.
ಇದನ್ನು ಓದಿ : ಬಸ್‌ನಿಂದ ತಲೆ ಹೊರಹಾಕಿದ ಮಹಿಳೆ ; Lorry ಡಿಕ್ಕಿಯಾಗಿ ದೇಹದಿಂದ ಬೇರ್ಪಟ್ಟ ರುಂಡ.!
ಈ ಪೊಲೀಸ್ ಅಧಿಕಾರಿಯು ಒಲೆಯ ಮೇಲೆ ತಯಾರಿಸಲಾಗುತ್ತಿದ್ದ ಆಹಾರಕ್ಕೆ ಬೂದಿಯನ್ನು ಸೇರಿಸುತ್ತಿರುವುದು (Adding ash to food) ವಿಡಿಯೋದಲ್ಲಿ ಕಂಡುಬಂದಿದೆ.
ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಎಕ್ಸ್‌ನಲ್ಲಿ ಡಿಸಿಪಿ ಗಂಗಾ ನಗರ ಅವರ ಖಾತೆಗೆ ಟ್ಯಾಗ್ ಮಾಡುವ ಮೂಲಕ ಪೋಸ್ಟ್ ಮಾಡಿದ್ದರು.
ಇದನ್ನು ಓದಿ : Government Job ಸಿಗುತ್ತಿದಂತೆಯೇ ಪತ್ನಿ ಎಸ್ಕೇಪ್ ; ಪತಿಯ ಈ ಕಾರ್ಯಕ್ಕೆ ಕೆಲಸ ಕಳೆದುಕೊಂಡ ಪತ್ನಿ.!
ಅಲ್ಲದೇ ಈ ನಾಚಿಕೆಗೇಡಿನ ಕೃತ್ಯಕ್ಕಾಗಿ ಅಧಿಕಾರಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು. ಈ ಸಂಬಂಧ ಕ್ರಮ ಕೈಗೊಂಡು ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ DCP, ACP ವರದಿ ಆಧರಿಸಿ ಅಧಿಕಾರಿಯನ್ನು ಸಸ್ಪೆಂಡ್ ಮಾಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಘಟನೆಯ ಹಿನ್ನೆಲೆ :
ಮೌನಿ ಅಮಾವಾಸ್ಯೆ ಹಿನ್ನೆಲೆ ಪ್ರಯುಕ್ತ ಕುಂಭಮೇಳಕ್ಕೆ ಸಹಸ್ರಾರು ಭಕ್ತರು ಭೇಟಿ ನೀಡಿದ್ದು, ಈ ವೇಳೆ ಸಂಭವಿಸಿದ ಕಾಲ್ತುಳಿತದ ಪರಿಣಾಮ ಪೊಲೀಸರು ಕೆಲ ಸಮಯ ವಾಹನಗಳನ್ನು ತಡೆದು ನಿಲ್ಲಿಸಿದ್ದರು (They stopped the vehicles for some time). ಈ ಕಾರಣದಿಂದಾಗಿ ಸೊರವಾನ್‌ನ ಭಾವಾಪುರ ಟೋಲ್ ಪ್ಲಾಜಾ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದನ್ನು ಕಂಡ ಸ್ಥಳೀಯರು ಅವರಿಗಾಗಿ ಅಡುಗೆ ತಯಾರಿಸಿದ್ದರು.
ಇದನ್ನು ಓದಿ : ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 1,036 ವಿವಿಧ ಹುದ್ದೆಗೆ ನೇರ ನೇಮಕಾತಿ.!
ಇದನ್ನು ಗಮನಿಸಿದ ಇನ್ಸ್ಪೆಕ್ಟರ್ ಬ್ರಿಜೇಶ್ ತಿವಾರಿ ಬೇರೆ ಕಡೆ ಹೋಗಿ ಅಡುಗೆ ಮಾಡುವಂತೆ ಸ್ಥಳೀಯರಿಗೆ ಸೂಚಿಸಿದ್ದಾರೆ. ಸ್ಥಳೀಯರು ತೆರಳಲು ನಿರಾಕರಿಸಿದ್ದು (Refused), ಆಕ್ರೋಶ ಗೊಂಡ ಅಧಿಕಾರಿಯು ಅಡುಗೆಗೆ ಬೂದಿಯನ್ನು ಹಾಕಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.