Wednesday, November 6, 2024
spot_img
spot_img
spot_img
spot_img
spot_img
spot_img

ಠಾಣೆಯಲ್ಲೇ ಪೊಲೀಸರ ಎಣ್ಣೆ ಪಾರ್ಟಿ ; ವಿಡಿಯೋ viral..!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಪೊಲೀಸ್ ಠಾಣೆಯೊಳಗೆ ಕರ್ತವ್ಯನಿರತ ಪೊಲೀಸ್​ ಅಧಿಕಾರಿಗಳು ಎಣ್ಣೆ ಪಾರ್ಟಿ ಮಾಡುತ್ತ ಸಂಭ್ರಮಿಸುತ್ತಿರುವ ಘಟನೆ ನಡೆದಿದೆ.

ಈ ಘಟನೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಆದರ್ಶ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಡಯಲ್ 112 ಕಚೇರಿಯಲ್ಲಿ (ರೈಲ್​ಪಾರ್​ ಕಂಟ್ರೋಲ್​ ರೂಮ್​ನಲ್ಲಿ) ಮದ್ಯದ ಪಾರ್ಟಿಯ ವಿಡಿಯೋ ವೈರಲ್ ಆಗುತ್ತಿದೆ.

ಇದನ್ನು ಓದಿ : ಪೊಲೀಸ್​ ಠಾಣೆ ಆವರಣದಲ್ಲಿಯೇ ಮಗನಿಂದ ಬೆಂಕಿಗಾಹುತಿಯಾದ ಹೆತ್ತ ತಾಯಿ ; ದೃಶ್ಯ CCTVಯಲ್ಲಿ ಸೆರೆ.!

ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ವಿಡಿಯೋದಲ್ಲಿರುವ ದೃಶ್ಯ :
ಮೂವರು ಅಧಿಕಾರಿಗಳು ಠಾಣೆಯೊಳಗೆ ಮದ್ಯ ಸೇವಿಸುತ್ತಾ (ಇಬ್ಬರು ಸಮವಸ್ತ್ರದಲ್ಲಿ ಮತ್ತು ಇನ್ನೋರ್ವ ಸಾಮಾನ್ಯ ವಸ್ತ್ರದಲ್ಲಿ) ಆರಾಮಾಗಿ ಕುಳಿತುಕೊಂಡು ಮಾತನಾಡುತ್ತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ಕಾಣಬಹುದು.

ಈ ವೇಳೆ ಅಧಿಕಾರಿಯೋರ್ವ ತನ್ನ ಸಹೋದ್ಯೋಗಿಗಳನ್ನು ಕಿಚ್ಚಾಯಿಸುತ್ತಿರುವುದನ್ನು ಸಹ ನೋಡಬಹುದು.

ಇದನ್ನು ಓದಿ : ನಡು ಬೀದಿಯಲ್ಲೇ ಪುಟ್ಟ ಬಾಲಕನ ಮೇಲೆ ಮಂಗಗಳ ದಾಳಿ : ಸಹಾಯಕ್ಕೆ ಬಾರದ ಮಹಿಳೆಯರ ನಡೆಗೆ ನೆಟ್ಟಿಗರ ಆಕ್ರೋಶ ; Video ವೈರಲ್.!

ಮೂವರನ್ನು ಕರ್ತವ್ಯಲೋಪ ಆರೋಪದಡಿ ಅಮಾನತು ಮಾಡಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img