ಜನಸ್ಪಂದನ ನ್ಯೂಸ್, ಡೆಸ್ಕ್ : ವ್ಯಕ್ತಿಯೋರ್ವ ನ್ಯಾಯ ಕೇಳಲು (hear justice) ಪೊಲೀಸ್ ಠಾಣೆಗೆ ತೆರಳಿದ ವೇಳೆ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಓರ್ವ ಆ ವ್ಯಕ್ತಿಗೆ ಬರೋಬ್ಬರಿ 31 ಸಲ ಕಪಾಳಮೋಕ್ಷ ಮಾಡಿರುವ ಘಟನೆ ಝಾನ್ಸಿಯಲ್ಲಿ (Jhansi) ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social media) ಹರಿದಾಡಿದ್ದು, ಝಾನ್ಸಿ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡು ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನು ಓದಿ : ಲಂಚ ಪಡೆಯುತ್ತಿದ್ದ Revenue Inspector ಲೋಕಾಯುಕ್ತ ಬಲೆಗೆ.!
ಮೌರಾನಿಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಸುಧಾಕರ್ ಕಶ್ಯಪ್ 41 ಸೆಕೆಂಡುಗಳಲ್ಲಿ ಬರೋಬ್ಬರಿ 31 ಸಲ ಕಪಾಳಮೋಕ್ಷ (A total of 31 slaps in 41 seconds) ಮಾಡಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
ಸದ್ಯ ಈ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋವನ್ನು ಥಳಿತಕ್ಕೆ ಒಳಗಾದ ವ್ಯಕ್ತಿಯೇ ಚಿತ್ರೀಕರಿಸಿದ್ದಾನೆ (record) ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಇದನ್ನು ಓದಿ : Health : ಈ ಹಣ್ಣಿನಲ್ಲಿದೆ ಮಧುಮೇಹ, ಕ್ಯಾನ್ಸರ್ ತಡೆಯುವ ಶಕ್ತಿ ; ಬೆಳಿಗ್ಗೆ ತಿಂದ್ರೆ ಆರೋಗ್ಯದಲ್ಲಿ ಚಮತ್ಕಾರ.!
ವೈರಲ್ ವಿಡಿಯೋದಲ್ಲಿ ಕಂಡುಬಂದ ದೃಶ್ಯ :
ಪೊಲೀಸ್ ಠಾಣೆಗೆ ಹೋದ ವ್ಯಕ್ತಿ, ತನಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾನೆ. ಆದರೆ, ವ್ಯಕ್ತಿಯ ಮನವಿಯನ್ನು ಆಲಿಸದೇ ಕೋಪದಲ್ಲಿ ಅಧಿಕಾರಿ ಆತನನ್ನು ಏಕಾಏಕಿ (suddenly) ಮನಬಂದಂತೆ ಥಳಿಸಿದ್ದಾನೆ.
ಸುಧಾಕರ್ ಯುವಕನನ್ನು ಎಳೆದೊಯ್ಯುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ನನಗ್ಯಾಕೆ ಹೊಡೆಯುತ್ತಿದ್ದೀರಿ, ನಾನೇನು ಮಾಡಿದೆ ಎಂದು ಯುವಕ ಕೇಳಿಕೊಂಡಿರುವುದು ವಿಡಿಯೋದಲ್ಲಿ ನೋಡಬಹುದು.
ವೈರಲ್ ಆಗಿರುವ ವಿಡಿಯೋ ಇಲ್ಲಿದೆ :
41 सेकंड में 31 थप्पड़!#झांसी के एक थाने में न्याय मांगने आए फरियादी को थानेदार सुधाकर कश्यप ने ताबड़तोड़ थप्पड़ों की बरसात कर दी
शिकायत के बाद थानेदार सस्पेंड हुए है
वीडियो देखिए👇 pic.twitter.com/ZCn1NJGVMI
— Narendra Pratap (@hindipatrakar) December 19, 2024
ಹಿಂದಿನ ಸುದ್ದಿ : 4 ಲಕ್ಷ ರೂ. ಲಂಚ ಪಡೆಯುತ್ತಿದ್ದ Revenue Inspector ಲೋಕಾಯುಕ್ತ ಬಲೆಗೆ.!
ಜನಸ್ಪಂದನ ನ್ಯೂಸ್, ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ (Mulki of Dakshina Kannada district) ಕಂದಾಯ ನಿರೀಕ್ಷಕರೊಬ್ಬರು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ಗುರುವಾರ (ಡಿ.19) ನಡೆದಿದೆ.
ಮುಲ್ಕಿಯ ಕಂದಾಯ ನಿರೀಕ್ಷಕ (Inspector of Revenue) ಜಿ.ಎಸ್ ದಿನೇಶ್ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಇದನ್ನು ಓದಿ : ವೃದ್ದರನ್ನು ಬಹಳ ಹೊತ್ತು ಕಾಯಿಸಿದ ಅಧಿಕಾರಿಗಳಿಗೆ ನಿಂತು ಕೆಲಸ ಮಾಡುವ ಶಿಕ್ಷೆ ನೀಡಿದ IAS ಆಫೀಸರ್.!
ಆಸ್ತಿಗೆ ಸಂಬಂಧಿಸಿದ ಪಹಣಿಯಲ್ಲಿ ವಾರಸುದಾರರುಗಳ ಹೆಸರುಗಳನ್ನು ಸೇರಿಸಲು (To include names of heirs in Pahani) ಮಾಡಲು 4 ಲಕ್ಷ ರೂ. ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.
ಈ ಕುರಿತು ದೂರುದಾರರು ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಈ ಹಿನ್ನಲೆ ಡಿ.19ರ ಗುರುವಾರ ಸುರತ್ಕಲ್ ಜಂಕ್ಷನ್ ಬಳಿ ದೂರುದಾರರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಇದನ್ನು ಓದಿ : ವೃದ್ದರನ್ನು ಬಹಳ ಹೊತ್ತು ಕಾಯಿಸಿದ ಅಧಿಕಾರಿಗಳಿಗೆ ನಿಂತು ಕೆಲಸ ಮಾಡುವ ಶಿಕ್ಷೆ ನೀಡಿದ IAS ಆಫೀಸರ್.!
ಈ ವೇಳೆ ಕಂದಾಯ ನಿರೀಕ್ಷಕ ದಿನೇಶ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಲೋಕಾಯುಕ್ತ ತಂಡ ಅವರನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ (Mangalore Divisional Superintendent of Police) ಎಂ.ಎ ನಟರಾಜ ಅವರ ಮಾರ್ಗದರ್ಶನದಲ್ಲಿ (Guidance) ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಡಾ. ಗಾನ ಪಿ. ಕುಮಾರ್, ಪೊಲೀಸ್ ನಿರೀಕ್ಷಕ ಅಮಾನುಲ್ಲಾ. ಎ., ಸುರೇಶ್ ಕುಮಾರ್ ಪಿ., ಚಂದ್ರಶೇಖರ್ ಕೆ.ಎನ್. ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದರು ಎಂದು ತಿಳಿದು ಬಂದಿದೆ.