ಜನಸ್ಪಂದನ ನ್ಯೂಸ್, ಡೆಸ್ಕ್ : ಹೆಡ್ ಕಾನ್‌ಸ್ಟೆಬಲ್ ಓರ್ವರು ಡ್ಯಾನ್ಸ್ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಉತ್ತರ ದೆಹಲಿಯ ರೂಪ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ನಾಗರ ಹಾವನ್ನು ಪ್ರೀತಿಯಿಂದ ಮುದ್ದಿಸಲು ಬಂದ ಎಮ್ಮೆ ; ಮುಂದೆನಾಯ್ತು.? ಈ ವಿಡಿಯೋ ನೋಡಿ.!
ಕಾನ್‌ಸ್ಟೆಬಲ್ ಡ್ಯಾನ್ಸ್ ಮಾಡಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ದೆಹಲಿಯ ರೂಪ ನಗರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿರುವ ರವಿಕುಮಾರ್ ಅವರು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ವರ್ಗಾವಣೆಯಾಗುತ್ತಿದ್ದಂತೆ ಬೀಳ್ಕೊಡುಗೆ ಪಾರ್ಟಿ ಆಯೋಜಿಸಿದ್ದರು.
ಇದನ್ನು ಓದಿ : Job : 10ನೇ ತರಗತಿ ಆಗಿದ್ರೆ ಸಾಕು ; ಟಾಟಾ ಸಮೂಹದಿಂದ 4,000 ಮಹಿಳೆಯರಿಗೆ ಉದ್ಯೋಗಾವಕಾಶ.!
ಅಂತೆಯೇ ಪೊಲೀಸ್ ಠಾಣೆಯಲ್ಲಿ ರಾತ್ರಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಹೆಡ್‌ಕಾನ್ಸ್‌ಟೇಬಲ್ ರವಿಕುಮಾರ್ ಎಲ್ಲರೊಂದಿಗೆ ಸಂತೋಷದಿಂದ ಕುಣಿದು ಕುಪ್ಪಳಿಸುತ್ತಿದ್ದರು.
ಆದರೆ ಡ್ಯಾನ್ಸ್ ಮಾಡುತ್ತಿದ್ದಾಗಲೇ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಸಹ ಸಿಬ್ಬಂದಿಗಳು ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ತಪಾಸಣೆ ನಡೆಸಿದ ವೈದ್ಯರು ರವಿಕುಮಾರ್ ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಇದನ್ನು ಓದಿ : Police ಪರೀಕ್ಷೆ ಬರೆಯಲು ಹೋದ ಪತಿ : ಬಾಯ್ ಫ್ರೆಂಡ್ ನನ್ನು ಮನೆಗೆ ಕರೆದ ಪತ್ನಿ; ಮುಂದೆನಾಯ್ತು ಗೊತ್ತಾ.?
ಉತ್ತರ ಪ್ರದೇಶದ ಬಾಗ್‌ಪತ್ ಮೂಲದ ರವಿಕುಮಾರ್ 2010ರಲ್ಲಿ ಪೊಲೀಸ್ ಆಗಿ ನೇಮಕಗೊಂಡಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.
ಹೆಡ್ ಕಾನ್‌ಸ್ಟೆಬಲ್ ರವಿಕುಮಾರ್ ಈಗಾಗಲೇ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು 45 ದಿನಗಳ ಹಿಂದೆ ಆಂಜಿಯೋಗ್ರಫಿಗೆ ಒಳಗಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
#Delhi: Head constable dies of #cardiacarrest while dancing in a farewell party. Om Shanti! https://t.co/uMiczVsaCN pic.twitter.com/yITy9AVarJ
— Dee (@DeeEternalOpt) August 29, 2024