ಜನಸ್ಪಂದನ ನ್ಯೂಸ್, ಕಲಬುರಗಿ : ಕಲಬುರಗಿಯ (Kalaburgi) ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತನ್ನ ಇಬ್ಬರು ಅಪ್ರಾಪ್ತ ವಯಸ್ಸಿನ ಗಂಡು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿದ (Behaved rudely) ಆರೋಪದಡಿ ಡಿಎಆರ್ ಕಾನ್ಸ್‌ಟೇಬಲ್ ವಿರುದ್ಧ ಪ್ರಕರಣ ದಾಖಲಾಗಿದೆ.
ಡಿಎಆರ್ ಕಾನ್ಸ್‌ಟೇಬಲ್ ತಾರಾಸಿಂಗ್ (40) ವಿರುದ್ಧ ಪೋಕ್ಸೊ ಕಾಯ್ದೆಯಡಿ (Under the POCSO Act) ಪ್ರಕರಣ (case) ದಾಖಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಬೆಳಗಾವಿ : LLB ಓದುತ್ತಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು.!
ಕಾನ್ಸ್‌ಟೇಬಲ್ ತಾರಾಸಿಂಗ್ ಅವರು ತನ್ನ ಅಪ್ರಾಪ್ತ ವಯೋಮಾನದ ಇಬ್ಬರು ಮಕ್ಕಳ ಮೇಲೆ ಹಲ್ಲೆ ಮಾಡಿ, ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಅವರ ಪತ್ನಿಯು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ (Filed a complaint).
ಇಬ್ಬರೂ ಬಾಲಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹಿಂದಿನ ಸುದ್ದಿ : ಕೈದಿಗೆ ಕೃಷಿ ಮಾಡಲು ಮೂರು ತಿಂಗಳು Parole; ಹೈಕೋರ್ಟ್‌ನಿಂದ ಅಪರೂಪದ ಆದೇಶ.!
ಜನಸ್ಪಂದನ ನ್ಯೂಸ್, ಬೆಂಗಳೂರು : ಹೈಕೋರ್ಟ್ (High Court) ಅಪರೂಪದ ಆದೇಶವೊಂದನ್ನು ನೀಡಿದೆ. ಕೃಷಿ ಚಟುವಟಿಕೆ ನೋಡಿಕೊಳ್ಳಲು 11 ವರ್ಷಗಳಿಂದ ಜೈಲಿನಲ್ಲಿರುವ ಸಜಾ ಕೈದಿಯೊಬ್ಬನಿಗೆ ಪೆರೋಲ್ ಮಂಜೂರು (Grant of parole) ಮಾಡಿದೆ.
ಇದನ್ನು ಓದಿ : Video : ಕಣ್ಣಿಗೆ ಕನ್ನಡಕ, ತಲೆಗೆ ಟವಲ್, ದೇಹಕ್ಕೆ ಬಾತ್ ಟವೆಲ್ ಧರಿಸಿ ಮೆಟ್ರೋಗೆ ಕಾಲಿಟ್ಟ ಯುವತಿಯರು.!
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ (Kanakpur Taluk of Ramnagar District) ಸಿದ್ದಿದೇವರಹಳ್ಳಿ ನಿವಾಸಿ ಚಂದ್ರ (36) ಎಂಬಾತ ಕೊಲೆ ಪ್ರಕರಣದಲ್ಲಿ (murder case) ಜೀವಾವಧಿ ಶಿಕ್ಷೆಗೆ (Life imprisonment) ಒಳಗಾಗಿದ್ದಾನೆ. ಹೀಗಾಗಿ ತನ್ನ ತಂದೆಯ ಜಮೀನಿನಲ್ಲಿ ಕೃಷಿ ಚಟುವಟಿಕೆ ನೋಡಿಕೊಳ್ಳಲು (take care of agricultural activity) ಪೆರೋಲ್ ನೀಡುವಂತೆ ಕೋರಿ ಹೈಕೋರ್ಟ್‌ಗೆ ಮೊರೆ ಹೋಗಿದ್ದ.
ಸದ್ಯ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರ ಪೀಠವು ಚಂದ್ರ ಅವರಿಗೆ 90 ದಿನಗಳ ಪೆರೋಲ್ (90 days parole) ನೀಡಿ ಆದೇಶಿಸಿದೆ (ordered) ಎಂದು ತಿಳಿದು ಬಂದಿದೆ.
ಕಳೆದ 11 ವರ್ಷಗಳಿಂದ ಚಂದ್ರ ಜೈಲಿನಲ್ಲಿದ್ದು, ಪೆರೋಲ್ ಮೇಲೆ ಯಾವತ್ತೂ ಬಿಡುಗಡೆಯಾಗಿಲ್ಲ (Never released). ಪ್ರಕರಣದ ಸತ್ಯಾಂಶ ಪರಿಶೀಲಿಸಿದಾಗ ಪೆರೋಲ್ ಮೇಲೆ ಬಿಡುಗಡೆಯಾಗುವ ಅಗತ್ಯವನ್ನು ಚಂದ್ರ ಮೇಲ್ನೋಟಕ್ಕೆ ಸಾಬೀತು ಪಡಿಸಿದ್ದಾರೆ (Apparently proved). ಆದ್ದರಿಂದ ಆತನನ್ನು 90 ದಿನ ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು ಎಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ (Parappana Agrahara Center jail in Bangalore) ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ (Chief Superintendent of Jails) ಹೈಕೋರ್ಟ್ ನಿರ್ದೇಶಿಸಿದೆ.
ಇದನ್ನು ಓದಿ : Health : ದೇಹದ ಮೇಲೆ ಕಂಡು ಬರುವ ಮುದ್ದೆಯಂತಹ ಈ ಗುಳ್ಳೆಗಳನ್ನು ಹೋಗಲಾಡಿಸುವುದು ಹೇಗೆ.?
2023ರ ಸೆ. 23ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು, ಚಂದ್ರಗೆ ಪೆರೋಲ್ ನೀಡಲು ನಿರಾಕರಿಸಿ (deny) ನೀಡಿದ್ದ ಹಿಂಬರಹವನ್ನು ಈ ವೇಳೆ ಹೈಕೋರ್ಟ್ ರದ್ದುಪಡಿಸಿದೆ (canceled).
ನ್ಯಾಯಾಲಯವು, ಚಂದ್ರ ಪೆರೋಲ್ ಅವಧಿಯಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ (illegal activity) ಭಾಗಿಯಾಗಬಾರದು, ಪ್ರತಿ ವಾರದ ಮೊದಲ ದಿನದಂದು (First day of every week) ಸ್ಥಳೀಯ ಪೊಲೀಸ್ ಠಾಣೆಗೆ ಆತ ಹಾಜರಾಗಬೇಕು.
ಆತ ಪೆರೋಲ್ ಮುಗಿಸಿ, ಜೈಲಿಗೆ ವಾಪಸ್ಸಾಗುವುದನ್ನು ಖಚಿತಪಡಿಸಿಕೊಳ್ಳಲು (confirm) ಮುಖ್ಯ ಅಧೀಕ್ಷಕರು ಅಗತ್ಯ ಷರತ್ತು ವಿಧಿಸಬಹುದು. ಒಂದು ವೇಳೆ ಷರತ್ತು ಉಲ್ಲಂಘಿಸಿದರೆ (Violate the condition), ಪೆರೋಲ್ ಮಂಜೂರಾತಿ ಆದೇಶ ತನ್ನಿಂದ ತಾನೇ ರದ್ದಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ