Saturday, July 13, 2024
spot_img
spot_img
spot_img
spot_img
spot_img
spot_img

ಪ್ಲೀಸ್ ಇವತ್ತು ಬೇಡ್ವೆ ಬೇಡ ; ಕುಡಿದ ಮತ್ತಲ್ಲಿ ಉರ್ಫಿ ಜಾವೇದ್ ಮಾಡಿದ್ದೇನು ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮಾಡೆಲ್ ಕಮ್ ನಟಿ ಉರ್ಫಿ ಜಾವೇದ್ ಎಂದರೆ ಸಾಕು ತಮ್ಮ ಫ್ಯಾಶನ್ ಸೆನ್ಸ್ ಮೂಲಕ ಸುದ್ದಿಯಾಗುತ್ತಾರೆ. ಬೋಲ್ಡ್ ಫ್ಯಾಶನ್ ಡ್ರೆಸ್ ಮೂಲಕವೇ ಮನೆ ಮಾತಾಗಿರುವ ಉರ್ಫಿ, ವೀಕೆಂಡ್ ಪಾರ್ಟಿಗಳಲ್ಲೂ ಮುಂದಿರುತ್ತಾರೆ.

ಸದ್ಯ ಮುಂಬೈನ ಪಬ್‌ನಲ್ಲಿ ಪಾರ್ಟಿ ಮುಗಿಸಿ ಹೊರಬಂದ ಉರ್ಫಿಯ ಬ್ಯಾಕ್‌ಲೆಸ್ ಫೋಟೋಗಾಗಿ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಇವತ್ತು ನಾನು ತುಂಬಾ ಕುಡಿದಿದ್ದೇನೆ. ಇಲ್ಲಿಂದ ತೆರಳಲು ಅವಕಾಶ ಕೊಡಿ ಎಂದು ಉರ್ಫಿ ಮನವಿ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಇದನ್ನು ಓದಿ : Renukaswamy murder case : ಪೊಲೀಸರ ಮುಂದೆ ನಟ ದರ್ಶನ್ ವಿರುದ್ಧವೇ ಹೇಳಿಕೆ ಕೊಟ್ರಾ ನಟಿ ಪವಿತ್ರಾಗೌಡ .?

ಉರ್ಫಿ ಜಾವೇದ್ ಪಾರ್ಟಿ ಮಾಡುತ್ತಿರುವ ಮಾಹಿತಿ ಫ್ಯಾನ್ಸ್‌ಗೆ ಸಿಕ್ಕಿದೆ. ಹೀಗಾಗಿ ಪಬ್ ಹೊರಗಡೆ ಕಾಯುತ್ತಾ ನಿಂತಿದ್ದಾರೆ. ಉರ್ಫಿ ಆಪ್ತರ ಜೊತೆ ಹೊರಬರುತ್ತಿದ್ದಂತೆ ಫೋಟೋಗೆ ಪೋಸ್ ನೀಡಲು ಹೇಳಿದ್ದಾರೆ. ಬ್ಯಾಕ್‌ಲೆಸ್ ಗೌನ್ ಹಾಕಿಕೊಂಡಿದ್ದೀರಿ. ಒಂದು ಬಾರಿ ತಿರುಗಿ ಫೋಸ್ ನೀಡಿ ಎಂದು ಸೂಚಿಸಿದ್ದಾರೆ.

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಉರ್ಫಿ ಜಾವೇದ್, “ಇವತ್ತು ಬೇಡ, ಇಂದು ನಾನು ತುಂಬಾ ಕುಡಿದಿದ್ದೇನೆ. ಪಾರ್ಟಿ ಮಾಡಿ ಹೊರಬರುತ್ತಿದ್ದೇನೆ. ಹೀಗಾಗಿ ಇವತ್ತು ಬೇಡ, ಇಲ್ಲಿಂದ ಹೊರಡಲು ಅವಕಾಶ ಮಾಡಿಕೊಡಿ” ಎಂದು ಉರ್ಫಿ ಜಾವೇದ್ ಹೇಳಿದ್ದಾರೆ.

ಇದನ್ನು ಓದಿ : ಓರ್ವ ಮಹಿಳೆ 3 ದಿನದಲ್ಲಿ ಎಷ್ಟು ಮದುವೆಯಾಗಿದ್ದಾಳೆ ಗೊತ್ತಾ.? ಕೇಳಿದ್ರೆ ಶಾಕ್‌ ಆಗ್ತೀರಾ.?

ಉರ್ಫಿ ಜಾವೇದ್ ಈ ಮಾತು ಹೇಳುತ್ತಿದ್ದಂತೆ ಸರಿ ಹೊರಡಿ, ಹೊರಡುವಾಗ ಒಂದು ಬಾರಿ ತಿರುಗಿ ಎಂದು ಮತ್ತೆ ಸೂಚಿಸಿದ್ದಾರೆ. ಹೀಗಾಗಿ ಉರ್ಫಿ ಕೊನೆಗೆ ತಮ್ಮ ಬ್ಯಾಕ್‌ಲೆಸ್ ಡ್ರೆಸ್ ಸೌಂದರ್ಯ ತೋರಿಸಿ ಹೊರಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಬಹುತೇಕ ಸೆಲೆಬ್ರೆಟಿಗಳು ಪಾರ್ಟಿ ಬಳಿಕ ಫ್ಯಾನ್ಸ್ ಕಣ್ಣಿಗೆ ಬೀಳದಂತೆ ತೆರಳಲು ಯತ್ನಿಸುತ್ತಾರೆ. ಆದರೆ ಉರ್ಫಿ ಹಾಗಲ್ಲ, ಫ್ಯಾನ್ಸ್ ಮುಂದೆ ಬಂದು ನಾನು ಇವತ್ತು ಕುಡಿದಿದ್ದೇನೆ ಎಂದಿದ್ದಾರೆ. ಉರ್ಫಿ ಈ ನಡೆಗೆ ಅಭಿಮಾನಿಗಳು ಶಹಬ್ಬಾಷ್ ಎಂದಿದ್ದಾರೆ.

 

View this post on Instagram

 

A post shared by Viral Bhayani (@viralbhayani)

spot_img
spot_img
- Advertisment -spot_img