ಜನಸ್ಪಂದನ ನ್ಯೂಸ್, ಡೆಸ್ಕ್ : ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ದಿನಾಂಕಗಳಂದು ಜನಿಸಿದ ಜನರು ಬಹಳ ಸಿಟ್ಟು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಈ ಸಂಖ್ಯೆಗಳು ಯಾವುವು ಅಂತ ತಿಳಿಯೋಣ.
ಇನ್ನೂ ಗುಣಲಕ್ಷಣಗಳು ನಿರ್ದಿಷ್ಟ ರಾಶಿಗಳೊಂದಿಗೆ ಸಂಬಂಧ ಹೊಂದಿದ್ದರೂ, ಪ್ರತಿ ರಾಶಿಯವರು ವೈಯಕ್ತಿಕ ವ್ಯಕ್ತಿತ್ವಗಳು ಬದಲಾಗಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಸೂಕ್ತ.
ಇದನ್ನು ಓದಿ : ಬಾಲಕಿಯನ್ನು ಹೊತ್ತೊಯ್ಯಲು ಯತ್ನಿಸಿದ ದೈತ್ಯಾಕಾರದ ಹದ್ದು ; ಮೈ ನಡುಗಿಸುವ ವಿಡಿಯೋ Viral.!
9 ನೇ ತಾರೀಖು :
9 ನೇ ತಾರೀಖು ಹುಟ್ಟಿರುವ ಜನರಿಗೆ ಹೆಚ್ಚು ಕೋಪ ಬರುತ್ತದೆ. ಇವರಿಗೆ ಬಹಳ ಬೇಗ ಸಿಟ್ಟು ಬರುವುದರಿಂದ ಇವರು ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.
ಈ ಜನರು ಬಹಳ ಸಿಟ್ಟು ಹೊಂದಿರುತ್ತಾರೆ. ಇವರು ಜೀವನದ ಸಣ್ಣ ಸಣ್ಣ ವಿಷಯಕ್ಕೂ ಹೆಚ್ಚು ಕೋಪ ಮಾಡಿಕೊಳ್ಳುತ್ತಾರೆ ಮತ್ತು ಇವರಿಗೆ ತಮ್ಮನ್ನು ತಾವು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಸಂಬಂಧಗಳಲ್ಲಿ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ.
18 ನೇ ತಾರೀಖು :
18 ನೇ ತಾರೀಖಿನಲ್ಲಿ ಜನಿಸಿದವರು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. ಆದರೆ ಇವರಿಗೆ ಹೆಚ್ಚು ಕೋಪ ಬರುತ್ತದೆ. ಇದು ಇವರ ಬಹಳ ದೊಡ್ಡ ದೌರ್ಬಲ್ಯವಾಗಿದೆ. ಈ ಜನರಿಗೆ ತಮ್ಮ ಭಾವನೆಗಳ ಮೇಲೆ ನಿಯಂತ್ರಣ ಹರಿಸಲು ಸಾಧ್ಯವಿಲ್ಲ. ಇವರು ಸ್ವಲ್ಪ ಭಾವುಕ ಜೀವಿಗಳಾಗಿರುತ್ತಾರೆ. ತಮ್ಮ ಸಂಬಂಧಗಳಲ್ಲಿ ಯಾವಾಗಲೂ ಮನಸ್ತಾಪ ಮತ್ತು ತಪ್ಪು ತಿಳುವಳಿಕೆ ಉಂಟಾಗುತ್ತದೆ. ಈ ಸಂಖ್ಯೆಯವರ ಯಾವುದೇ ಸಂಬಂಧ ತುಂಬ ಸಮಯದವರೆಗೆ ಇರುವುದಿಲ್ಲ.
ಇದನ್ನು ಓದಿ : Health : ಡೊಳ್ಳು ಹೊಟ್ಟೆಯನ್ನು 1 ತಿಂಗಳಿನಲ್ಲಿ ಚಪ್ಪಟೆಯಾಗಿ ಮಾಡುತ್ತದೆ ಈ ಪದಾರ್ಥ.!
27 ನೇ ತಾರೀಖು :
ಕೋಪ ಇವರಿಗೆ ಬಹಳ ಬೇಗ ಬರುತ್ತದೆ. ಇವರು ಕೋಪಗೊಳ್ಳುವುದರಿಂದ ಯಾವುದೇ ವ್ಯಕ್ತಿಯ ಮಾತನ್ನು ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಇರುವುದಿಲ್ಲ. ಇದರಿಂದಾಗಿ ಈ ಜನರು ಜೀವನದಲ್ಲಿ ಹೆಚ್ಚಿನ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಕೋಪದಿಂದಾಗಿ ನಿಮ್ಮ ಸಂಬಂಧಗಳಲ್ಲಿ ಯಾವಾಗಲೂ ಮನಸ್ತಾಪ ಮತ್ತು ತಪ್ಪು ತಿಳುವಳಿಕೆ ಉಂಟಾಗುತ್ತದೆ ಮತ್ತು ಸಂಗಾತಿಯೊಂದಿಗಿನ ಸಂಬಂಧ ಹದಗೆಡುವುದು.