Saturday, July 13, 2024
spot_img
spot_img
spot_img
spot_img
spot_img
spot_img

Scientific reason : ಪತ್ನಿ ಯಾವಾಗಲೂ ಪತಿಯ ಯಾವ ಭಾಗದಲ್ಲೇ ಮಲಗಬೇಕು ; ಏಕೆ ಗೊತ್ತೇ.?

spot_img

ಜನಸ್ಪಂದನ ನ್ಯೂಸ್‌, ವಿಶೇಷ : ಹಿಂದೂ ನಂಬಿಕೆಯ ಪ್ರಕಾರ ಪತ್ನಿ ಯಾವಾಗಲೂ ಪತಿಯ ಎಡಭಾಗದಲ್ಲಿ ಮಲಗಬೇಕು ಎಂದು ಹೇಳಲಾಗುತ್ತೆ. ಇದು ಯಾಕೆ.? ಕೆಲವರು ಬಲ ಬದಿಗೆ ತಿರುಗಿ ಮಲಗಲು ಇಷ್ಟ ಪಟ್ಟರೆ, ಇನ್ನು ಕೆಲವರು ಎಡಭಾಗಕ್ಕೆ ಮಲಗಿದರೆ ಚೆನ್ನ ಎನ್ನುತ್ತಾರೆ. ಆದರೆ ಹೆಂಡತಿ ಎಡಭಾಗದಲ್ಲಿ ಮಲಗುವುದರಿಂದ ಅನೇಕ ಪ್ರಯೋಜನಗಳಿವೆ. ಆ ಪ್ರಯೋಜನಗಳು ಏನು ಅನ್ನೋದನ್ನು ತಜ್ಞರಿಂದ ತಿಳಿದುಕೊಳ್ಳೋಣ.

ಹಿಂದೂ ಧರ್ಮದಲ್ಲಿ (Hindu Religion) ಅನೇಕ ನಂಬಿಕೆಗಳಿವೆ. ಅವುಗಳಲ್ಲಿ ಕೆಲವನ್ನು ನಾವು ನಂಬುತ್ತೇವೆ. ಕೆಲವು ಸುಮ್ಮನೆ ಎಂದು ಸುಮ್ಮನಾಗುತ್ತೇವೆ. ಆದರೆ ಪತ್ನಿ ಯಾವಾಗಲೂ ಪತಿಯ ಎಡಬದಿಯಲ್ಲಿ ಮಲಗಬೇಕು ಅನ್ನೋದನ್ನು ನಿವು ಕೇಳಿರುತ್ತೀರಿ. ಇದಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳು ಇಲ್ಲಿವೆ. ಅವುಗಳ ಬಗ್ಗೆ ತಿಳಿಯಿರಿ.

ಇದನ್ನು ಓದಿ : ನಿತಿನ್​ ಗಡ್ಕರಿಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯಿಂದ ಬೆಳಗಾವಿಯಲ್ಲಿ ಪಾಕ್ ಪರ ಘೋಷಣೆ.!

ಪೌರಾಣಿಕ ಕಥೆಯ ಪ್ರಕಾರ ಶಿವ ಅರ್ಧನಾರೀಶ್ವರನಾಗಿ ಕಾಣಿಸಿಕೊಂಡಾಗ, ಶಿವನ ಎಡ ಬದಿಯಲ್ಲಿ ಸ್ತ್ರೀ ಶಕ್ತಿ ಅಂದರೆ ಪಾರ್ವತಿ ಕಾಣಿಸಿಕೊಂಡಿದ್ದರು. ಹಾಗಾಗಿ ಹಿಂದೂಗಳಲ್ಲಿ ಪತ್ನಿಯನ್ನು ಅರ್ಧಾಂಗಿ ಎನ್ನಲಾಗುತ್ತೆ. ಹೆಂಡತಿಯನ್ನು ಗಂಡನ ದೇಹದ ಬೇರ್ಪಡಿಸಲಾಗದ ಭಾಗ ಎನ್ನಲಾಗುತ್ತೆ. ಹಾಗಾಗಿ ಆಕೆಯನ್ನು ಅರ್ಧಾಂಗಿ ಎನ್ನುತ್ತಾರೆ ಮತ್ತು ಗಂಡನ ಎಡಭಾಗ ಪತ್ನಿಯದ್ದು ಎನ್ನಲಾಗುತ್ತೆ. ಹಾಗಾಗಿ ಶುಭ ಕಾರ್ಯದಲ್ಲಿ ಪತ್ನಿ ಎಡಭಾಗದಲ್ಲಿ ಕುಳಿತುಕೊಳ್ಳುತ್ತಾಳೆ. 

ಈ ಮೇಲಿನ ಕಾರಣಗಳಿಂದಾಗಿ ಹೆಂಡತಿ ಗಂಡನ ಎಡ ಭಾಗದಲ್ಲಿ ಮಲಗಬೇಕು ಎನ್ನಲಾಗುತ್ತೆ. ಅಲ್ಲದೇ ಹೀಗೆ ಮಲಗೋದು ಶುಭ. ಇದರಿಂದ ಮನೆಯಲ್ಲು ಸುಖ, ಸಂತೋಷ, ನೆಮ್ಮದಿ, ಜೊತೆಗೆ ವೈವಾಹಿಕ ಜೀವನ ಆನಂದದಿಂದ ಕೂಡಿರುತ್ತೆ.

ಇದನ್ನು ಓದಿ : Instant ಕರ್ಮ ; ಅಲ್ಲೇ ಡ್ರಾ, ಅಲ್ಲೇ ಬಹುಮಾನ ; ಹೇಗಂತ್ತಿರಾ.? ಈ ವಿಡಿಯೋ ನೋಡಿ.!

ಆಯುರ್ವೇದದಲ್ಲಿ ಮಹಿಳೆಯರು ಪುರುಷರ ಎಡಭಾಗದಲ್ಲಿ ಮಲಗಬೇಕು ಎಂದು ಹೇಳಲಾಗಿದೆ. ಈ ಬದಿಯಲ್ಲಿ ಮಲಗುವುದು ತುಂಬಾ ಪ್ರಯೋಜನಕಾರಿ. ಇದು ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರ ಆರೋಗ್ಯದ ಮೇಲೆ ಕೂಡಾ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಭಂಗಿಯಲ್ಲಿ ಮಲಗುವುದರಿಂದ ಮಹಿಳೆಯ ದೇಹದ ಎಲ್ಲಾ ಭಾಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.  

ಪತ್ನಿಯು ಪತಿಯ ಎಡಬದಿಯಲ್ಲಿ ಮಲಗೋದು ವೈವಾಹಿಕ ಜೀವನಕ್ಕೆ ಉತ್ತಮ ಮತ್ತು ಪತಿಗೆ ಸೌಭಾಗ್ಯವನ್ನು ನೀಡುತ್ತೆ ಎಂದು ನಂಬಲಾಗಿದೆ. ಇನ್ನು ಹೀಗೆ ಮಲಗೋದರಿಂದ ಗ್ರಹಗಳಿಂದಲೂ ದಾಂಪತ್ಯ ಜೀವನದ (married life) ಮೇಲೆ ಯಾವುದೇ ರೀತಿಯಲ್ಲಿ ಕೆಟ್ಟದಾಗೋದಿಲ್ಲ ಎಂದು ನಂಬಲಾಗುತ್ತೆ.

ಇದನ್ನು ಓದಿ : 10 ನೇ ತರಗತಿ ಪಾಸಾದವರಿಗೆ ಭಾರತೀಯ ಅಂಚೆ ಇಲಾಖೆ‌ಯಲ್ಲಿ ಉದ್ಯೋಗ ; ತಿಂಗಳಿಗೆ ರೂ. 63,000 ವೇತನ.!

ಸತ್ಯವಾನ್ ಸಾವಿತ್ರಿಯ ಕತೆಯಲ್ಲಿ ಸಾವಿತ್ರಿ ಗಂಡನ ಎಡಬದಿಯಲ್ಲಿ ಮಲಗಿದ್ದಳು. ಯಮರಾಜನು ಎಡಬದಿಯಲ್ಲಿಯೇ ಬಂದಾಗ ಸಾವಿತ್ರಿ ಯಮನನ್ನು ಬೇಡಿಕೊಂಡು ತನ್ನ ಪತಿಯನ್ನು ರಕ್ಷಿಸಿದಳು. ಹಾಗಾಗಿ ಎಡಬದಿಯಲ್ಲಿ ಮಲಗೋದರಿಂದ ಗಂಡನಿಗೆ ರಕ್ಷೆ ಸಿಗುತ್ತೆ ಎನ್ನಲಾಗುತ್ತೆ. 

ಎಡಭಾಗದಲ್ಲಿ ಮಲಗುವ ಮಹಿಳೆಯರ ಜೀರ್ಣಾಂಗ ವ್ಯವಸ್ಥೆಯು ಬಲವಾಗಿರುತ್ತದೆ. ಈ ಭಾಗದಲ್ಲಿ ಮಲಗುವುದರಿಂದ ದೇಹದಲ್ಲಿನ ತ್ಯಾಜ್ಯ ವಸ್ತುಗಳು ಸಣ್ಣ ಕರುಳಿನಿಂದ ದೊಡ್ಡ ಕರುಳಿಗೆ ಬಹಳ ಆರಾಮವಾಗಿ ಚಲಿಸುತ್ತವೆ. ಇದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. (ಸಂಗ್ರಹ)

spot_img
spot_img
- Advertisment -spot_img