Sunday, December 8, 2024
HomeLocal Newsಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ ಹಾಗೂ ದೈಹಿಕ ಶಿಕ್ಷಕ Suspend.!
spot_img

ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ ಹಾಗೂ ದೈಹಿಕ ಶಿಕ್ಷಕ Suspend.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ದಾವಣಗೆರೆ : ಮಕ್ಕಳಿಗೆ ಮೊಟ್ಟೆ ವಿತರಣೆಯಲ್ಲಿ ಲೋಪವೆಸಗಿದ ಆರೋಪದ ಮೇಲೆ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ದೈಹಿಕ ಶಿಕ್ಷಕನನ್ನು ಸಸ್ಪೆಂಡ್ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ಅರೇಹಳ್ಳಿ- ಕದರನಹಳ್ಳಿಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಇದನ್ನು ಓದಿ : BPNL : ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಮುಖ್ಯ ಶಿಕ್ಷಕಿ (head teacher) ಶೋಭಾ ಮೊಹಿತೆ ಹಾಗೂ ಇದಕ್ಕೆ ಸಹಕರಿಸಿದ ದೈಹಿಕ ಶಿಕ್ಷಣ (physical teacher) ಶಿಕ್ಷಕ ಮಂಜುನಾಥ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (Zilla Panchayat Chief Executive Officer) ಸುರೇಶ್ ಬಿ. ಇಟ್ನಾಳ್ ಅವರು ಆದೇಶಿಸಿದ್ದಾರೆ.

ವಾರದ ಎಲ್ಲ ದಿನಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಲೆಂದು ಶಾಲಾ ಮಕ್ಕಳಿಗೆ ಸರ್ಕಾರ ಹಾಗೂ Azim Premji Foundation ವತಿಯಿಂದ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಿಸಲಾಗುತ್ತದೆ.

ಇದನ್ನು ಓದಿ : Belagavi : ಬೆಳಗಾವಿಯಲ್ಲಿ ಹೀನ ಕೃತ್ಯ ; ಸಾರ್ವಜನಿಕವಾಗಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ.!

ವಿತರಣೆ ಮಾಡಿದ ಬಗ್ಗೆ ಆಯಾ ದಿನದಂದು SATS (Student Achievement Tracking System) ತಂತ್ರಾಂಶದಲ್ಲಿ ದಾಖಲು ಮಾಡಲಾಗುತ್ತದೆ.

ನ.13 ರಂದು ಶಾಲೆಯಲ್ಲಿ 87 ಮಕ್ಕಳಿದ್ದು, ಇದರಲ್ಲಿ 79 ಮೊಕ್ಕಳಿಗೆ ಮೊಟ್ಟೆ ವಿತರಣೆ ಮಾಡಿ ಉಳಿದ 8 ಮಕ್ಕಳಿಗೆ ಬಾಳೆಹಣ್ಣು ವಿತರಣೆ ಮಾಡಲಾಗಿರುತ್ತದೆ. ಆದರೆ SATS ತಂತ್ರಾಂಶದಲ್ಲಿ 104 ಮಕ್ಕಳಿರುತ್ತಾರೆ ಎಂದು ದಾಖಲು ಮಾಡಲಾಗಿತ್ತು. ಇದರಿಂದ ಮೊಟ್ಟೆ ವಿತರಣೆಯಲ್ಲಿ ದೋಷವಾಗಿದೆ ಎಂದು ಶಾಲೆಗೆ ಭೇಟಿ ನೀಡಿದ ವೇಳೆ ಸಮೂಹ ಸಂಪನ್ಮೂಲ ವ್ಯಕ್ತಿಗೆ ಕಂಡುಬಂದಿತ್ತು.

 

ಹಿಂದಿನ ಸುದ್ದಿ ಓದಿ : ರಾತ್ರಿ 10 ಗಂಟೆಯ ನಂತರ ದೇಹವು ಈ ಸೂಚನೆಯನ್ನು ನೀಡುತ್ತಿದೆಯೇ? ಇದು stroke ಆಗಿರಬಹುದು.!

ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚೆಗೆ ಯುವ ಪೀಳಿಗೆಯವರಿಗೆ ಹೃದಯಾಘಾತ (heart attack), ಪಾರ್ಶ್ವವಾಯು, ಕ್ಯಾನ್ಸರ್‌ನಂತಹ ಸಮಸ್ಯೆಗಳು ಕಾಡಿಸುತ್ತೀವೆ.

ಅದರಲ್ಲಿಯೂ ಪಾರ್ಶ್ವವಾಯು (stroke) ಹಿಂದೆ ಹಿರಿಯರಿಗೆ ಕಾಡುವ ಕಾಯಿಲೆ ಎಂಬ ನಂಬಿಕೆ ಇತ್ತು. ಆದರೆ ಚಿಕ್ಕ ವಯಸ್ಸಿನಲ್ಲಿಯೇ ಸ್ಟ್ರೋಕ್ ಸಮಸ್ಯೆ ಹೆಚ್ಚಾಗುತ್ತಿರುವುದು ಕೂಡ ಆತಂಕ ಹೆಚ್ಚಲು ಕಾರಣವಾಗಿದೆ. ಇದಕ್ಕೆ ಹಲವಾರು ರೀತಿಯ ಕಾರಣಗಳಿರಬಹುದು.

ಇದನ್ನು ಓದಿ : Health : ಯಾವುದೇ ಕೆಲಸ ಮಾಡದಿದ್ದರೂ ದಣಿವಾಗುತ್ತಿದೆಯೇ? ನಿಮಗೆ ಈ ಆರೋಗ್ಯ ಸಮಸ್ಯೆ ಇರಬಹುದು.!

ಸಾಮಾನ್ಯವಾಗಿ ನಮ್ಮ ಮೆದುಳಿಗೆ ರಕ್ತ ಸಂಚಾರದಲ್ಲಿ (blood circulation to brain) ಏರುಪೇರಾದಾಗ ಸ್ಟ್ರೋಕ್ ಸಮಸ್ಯೆ ಬರುತ್ತದೆ. ಮೆದುಳಿಗೆ ರಕ್ತ ಸಂಚಾರ ಏರುಪೇರು ಉಂಟಾಗಲು ಹಲವು ಕಾರಣಗಳಿವೆ ಎಂಬುದು ಕೂಡ ಸಾಬೀತಾಗಿದೆ. ಕೊಲೆಸ್ಟ್ರಾಲ್ ಹೆಚ್ಚಾಗಿರುವುದು, ಮೆದುಳಿಗೆ ರಕ್ತ ಸಂಚಾರಕ್ಕೆ ಕಾರಣವಾದ ರಕ್ತನಾಳವು ಅಶಕ್ತ ಆಗಿರುವುದು. ಹೀಗೆ ಇವು ಪ್ರಮುಖ ಕಾರಣಗಳಾಗಿವೆ.

ಆದರೆ ಪಾರ್ಶ್ವವಾಯು ಬರುವ ಮುಂಚೆ ನಮ್ಮ ದೇಹವು ಹಲವು ರೀತಿಯ ಸೂಚನೆಗಳನ್ನು ನೀಡುತ್ತದೆ. ಅದರಲ್ಲಿಯೂ ರಾತ್ರಿ ಮಲಗಿದ ವೇಳೆ ಈ ರೀತಿಯ ಸೂಚನೆಗಳನ್ನು ನಿಮ್ಮ ದೇಹ ನೀಡುತ್ತಿದೆ ಎಂದಾದರೆ ಖಂಡಿತವಾಗಿಯೂ ನೀವು ಅದನ್ನು ನಿರ್ಲಕ್ಷಿಸಬಾರದು (neglected).

ಇದನ್ನು ಓದಿ : ಅಪ್ರಾಪ್ತ ಪತ್ನಿ ಜೊತೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸುವುದು ಸಹ ಅತ್ಯಾಚಾರಕ್ಕೆ ಸಮ; Highcourt.!

ಹೆಚ್ಚಿನ ಜನರು ರಾತ್ರಿ ಮಲಗಿದ್ದಾಗಲೇ ಸ್ಟ್ರೋಕ್‌ಗೆ ಒಳಗಾಗುತ್ತಾರೆ ಎಂದು ಸಂಶೋಧನೆಗಳು ಹೇಳುತ್ತವೆ. ರಾತ್ರಿ 10 ಗಂಟೆಯ ಬಳಿಕ ದೇಹದಲ್ಲಿ ಯಾವ ಬದಲಾವಣೆಗಳು ಪಾರ್ಶ್ವವಾಯುವಿನ ಸೂಚನೆ ನೀಡುತ್ತವೆ ಅಂತ ಮುಂದೆ ಓದಿ.

* ರಾತ್ರಿ ವೇಳೆ ಏಕಾಏಕಿ (suddenly) ತಲೆನೋವು (headache) ಕಾಣಿಸಿಕೊಳ್ಳುವುದು. ಸ್ಟ್ರೋಕ್‌ಗೆ ಕಾರಣವಾಗುವ ತಲೆನೋವು ಸ್ವಲ್ಪ ಭಿನ್ನವಾಗಿರುತ್ತದೆ. ತಲೆ ಸಿಡಿಯುವಂತೆ ನೋವು ಉಂಟಾಗುವುದು, ಗಾಢ ನಿದ್ರೆಯಲ್ಲೂ ತಲೆ ನೋವು ಉಲ್ಬಣಗೊಳ್ಳುವುದು, ಒಮ್ಮೊಮ್ಮೆ ತಲೆನೋವಿನಿಂದ ನರಳುವ (suffering) ಪರಿಸ್ಥಿತಿ ಬರುವುದು.

ಇದನ್ನು ಓದಿ : Lokayukta Raid : ರೆಡ್ ಹ್ಯಾಂಡ್ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಪುರಸಭೆ ಮುಖ್ಯಾಧಿಕಾರಿ.!

* ರಾತ್ರಿ ವೇಳೆ ಮಲಗಿದ ಬಳಿಕ ಎಚ್ಚರವಾದಾಗ ಮಾತನಾಡಲು ನೀವು ಕಷ್ಟಪಡುತ್ತಿದ್ದರೆ ಅಥವಾ ಮಾತನಾಡುವಾಗ ತೊದಲುತ್ತಿದ್ದರೆ ಇದು ಕೂಡ ಸ್ಟ್ರೋಕ್‌ನ ಸೂಚನೆಯಾಗಿದೆ. ಅಂತಹ ರೋಗ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.

* ದೇಹದ ಒಂದು ಭಾಗದಲ್ಲಿ ಹಠಾತ್ ಆಗಿ ಮರುಗಟ್ಟುವಂತೆ (recap) ಆಗುವುದು ಅಥವಾ ದೌರ್ಬಲ್ಯ ಉಂಟಾಗಬಹುದು.

* ಪಾರ್ಶ್ವವಾಯುವಿನ ಮುನ್ಸೂಚನೆಗಳಲ್ಲಿ ಹಠಾತ್ ತಲೆ ತಿರುಗುವಿಕೆ (vertigo) ಒಂದು. ಬಹಳಷ್ಟು ಜನರಲ್ಲಿ ಬೇರೆ ಬೇರೆ ಕಾರಣಕ್ಕೆ ಕಾಣಿಸಿಕೊಳ್ಳಬಹುದು. ಆದರೆ ಎಚ್ಚರಿಕೆ ವಹಿಸುವುದು ಒಳ್ಳೆಯದು.

ಇದನ್ನು ಓದಿ : ಈ blood ಗುಂಪು ಇರುವವರು ಅದೃಷ್ಟವಂತರು; ಇವರಿಗೆ ಕ್ಯಾನ್ಸರ್, ಹೃದ್ರೋಗ ಅಪಾಯ ಕಡಿಮೆ.!

* ರಾತ್ರಿ ಮಲಗಿದ ಸಮಯದಲ್ಲಿ ದೃಷ್ಟಿ ಸಮಸ್ಯೆ ಎದುರಾಗುವುದು ಕೂಡ ಪಾರ್ಶ್ವವಾಯುವಿನ ಸೂಚನೆಯಾಗಿದೆ. ದೃಷ್ಟಿ ಮಸುಕಾಗುವಂತೆ (Blurred vision) ಆಗುವುದು, ಒಂದು ವಸ್ತು ಎರಡು ಮೂರು ರೀತಿ ಕಾಣಿಸುವುದು.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಗಳು ಮತ್ತು ವರದಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ (Janaspandhan News), ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments