Saturday, July 13, 2024
spot_img
spot_img
spot_img
spot_img
spot_img
spot_img

ಬಂಗಾರದ ಬೈಕ್‌ನಲ್ಲಿ 5 ಕೆಜಿ ಚಿನ್ನ ತೊಟ್ಟು ಓಡಾಡೋ ಗೋಲ್ಡ್‌ಮ್ಯಾನ್ ; ವಿಡಿಯೋ ನೋಡಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ವಿಶೇಷ ಕಾರಣಗಳಿಂದಾಗಿ ವೈರಲ್ ಆಗುತ್ತವೆ.

ಸದ್ಯ ಬಿಹಾರದ ಗೋಲ್ಡ್ ಮ್ಯಾನ್ ಎಂದು ಕರೆಯಲ್ಪಡುವ ಪ್ರೇಮ್ ಸಿಂಗ್ ಅವರ ಕುರಿತಾದ ವಿಡಿಯೋವೊಂದು ವೈರಲ್ ಆಗಿದೆ. ಅವರು ತಮ್ಮ ದೇಹದ ಮೇಲೆ ಸುಮಾರು ಐದು ಕಿಲೋಗ್ರಾಂಗಳಷ್ಟು ಮತ್ತು 400 ಗ್ರಾಂ ಚಿನ್ನ ಧರಿಸುವುದರ ಜತೆಗೆ ಬೈಕ್​ ಕೂಡಾ ಬಂಗಾರದ್ದೆ ಆಗಿದೆ.

ಇದನ್ನು ಓದಿ : ಓರ್ವ ಮಹಿಳೆ 3 ದಿನದಲ್ಲಿ ಎಷ್ಟು ಮದುವೆಯಾಗಿದ್ದಾಳೆ ಗೊತ್ತಾ.? ಕೇಳಿದ್ರೆ ಶಾಕ್‌ ಆಗ್ತೀರಾ.?

ಇದು ವಿಚಿತ್ರ ಎನ್ನಿಸಿದ್ರೂ ಅಷ್ಟೇ ಸತ್ಯ ಕೂಡಲೇ. ಈ ಕುರಿತಾದ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಸದ್ಯ ಪ್ರೇಮ್ ಸಿಂಗ್ ಈಗ ತಮ್ಮ ಬೈಕಿಗೂ ಚಿನ್ನ ತೊಡಿಸಿ ಸುದ್ದಿಯಾಗಿದ್ದಾರೆ. ಇವರ ಬೈಕಿನ ಕೆಲ ಭಾಗಗಳು ಚಿನ್ನದ್ದಾಗಿವೆ. ಇದನ್ನು ಬೆಂಗಳೂರಿನಲ್ಲಿ ಮಾಡಿಸಲಾಗಿದೆ ಎನ್ನಲಾಗಿದೆ. ಸುಮಾರು ಏಳರಿಂದ ಎಂಟು ತಿಂಗಳ ಅವಧಿಯಲ್ಲಿ ಈ ಬಂಗಾರದ ಬೈಕ್ ತಯಾರಾಗಿದೆ. ಇದರ ಬೆಲೆ 11 ರಿಂದ 12 ಲಕ್ಷ ರೂ. ಎನ್ನಲಾಗಿದೆ.

ಸ್ವರ್ಣದ ಮೇಲಿನ ಮೋಹದಿಂದಾಗಿ ಪ್ರೇಮ್ ಸಿಂಗ್‌ ಬಿಹಾರದ ಬಂಗಾರದ ಮನುಷ್ಯ ಎಂದೇ ಫೇಮಸ್ ಆಗಿದ್ದಾರೆ. ಇವರು ತೊಡುವ ಸರ, ಬಳೆ, ಉಂಗುರಗಳು ಒಟ್ಟು ಐದು ಕೆಜಿ ಇವೆ ಎನ್ನಲಾಗಿದೆ.

ಇದನ್ನು ಓದಿ : ಯುವತಿ ರೀಲ್ಸ್ ಮಾಡುವಾಗಲೇ ಬಡಿದ ಸಿಡಿಲು ; ಬೆಚ್ಚಿಬೀಳಿಸುವ ವಿಡಿಯೋ Viral.!

ನನ್ನನ್ನು ಜನ ಬಂಗಾರದ ಮನುಷ್ಯ ಎಂದು ಕರೆಯುತ್ತಾರೆ. ಬಿಹಾರದಲ್ಲಿ ಪ್ರಸ್ತುತ ನಿತೀಶ್ ಕುಮಾರ್ ಅವರ ಸರ್ಕಾರವು ಉತ್ತಮ ಆಡಳಿತ ನಡೆಸುತ್ತಿದೆ. ಆದ ಕಾರಣ ನನಗೆ ಯಾವುದೇ ಅಂಜಿಕೆ ಇಲ್ಲ.

ನನ್ನ ಬೈಕಿನಲ್ಲಿ 150 ರಿಂದ 200 ಗ್ರಾಂ ಚಿನ್ನವಿದೆ ಎಂದಿರುವ ಪ್ರೇಮ್ ಸಿಂಗ್ ಇದು ಬಿಹಾರ ಸರ್ಕಾರ ಹಾಗೂ ಬಿಹಾರ ಪೊಲೀಸರ ಪಾಲಿಗೆ ಇದು ಗೌರವದ ಸಂಗತಿ ಎಂದಿದ್ದಾರೆ ಎಂದು ವರದಿ ತಿಳಿಸಿದೆ.

spot_img
spot_img
- Advertisment -spot_img