ಜನಸ್ಪಂದನ ನ್ಯೂಸ್, ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದ A1 ಆರೋಪಿ ಆಗಿರುವ ಪವಿತ್ರಾ ಗೌಡಗೆ ಮೇಕಪ್ ಮಾಡಲು ಅವಕಾಶ ಕೊಟ್ಟಿದ್ದ ಮಹಿಳಾ ಪಿಎಸ್‌ಐಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಎ1 ಆರೋಪಿಯಾಗಿರುವ ಪವಿತ್ರಾ ಗೌಡಳನ್ನ ಜೂನ್ 15ರಂದು ಮನೆ ಮಹಜರು ಮಾಡಲು ಆರ್.ಆರ್ ನಗರದ ಮನೆಗೆ ಕರೆದುಕೊಂಡು ಹೋಗಿದ್ದರು.
ಇದನ್ನು ಓದಿ : RRB Recruitment : ರೈಲ್ವೆ ಇಲಾಖೆಯಲ್ಲಿ 18,799 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಮಹಜರು ವೇಳೆ ಮನೆಯಲ್ಲಿ ಪವಿತ್ರಾ ಗೌಡ ಲಿಪ್ಸ್ಸ್ಟಿಕ್ ಹಚ್ಚಿಕೊಂಡು, ಮುಖಕ್ಕೆ ಮೇಕಪ್ ಮಾಡಿಕೊಂಡು ಬಂದಿದ್ದರು.
ಮಹಜರು ವೇಳೆ ಆರೋಪಿ ಪವಿತ್ರಾ ಗೌಡ ಲಿಪ್ಸ್ಸ್ಟಿಕ್ ಹಚ್ಚಿಕೊಂಡು ಮೇಕಪ್ ಮಾಡಿಕೊಂಡು ಬಂದಿದ್ದಕ್ಕೆ ವಿಜಯನಗರದ ಮಹಿಳಾ ಪಿಎಸ್‌ಐಗೆ ನೋಟಿಸ್ ನೀಡಲಾಗಿದೆ. ಮಹಜರಿಗೆ ಕರೆದುಕೊಂಡು ಹೋಗಿದ್ದ ವೇಳೆ ಮಹಜರು ಮಾತ್ರ ಮಾಡಿಸಿಕೊಂಡು ಬರಬೇಕೆ ಹೊರತು ಇದಕ್ಕೆಲ್ಲಾ ಅವಕಾಶ ಕೊಟ್ಟದೇಕೆ ಎಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನು ಓದಿ : ಭೂಮಿ ಅಗೆಯುವಾಗ ಸಿಕ್ತು ಚಿನ್ನದ ನಿಧಿ : ಕಾವಲಿತ್ತು ನಾಗರಹಾವು ; ವಿಡಿಯೋ ನೋಡಿ.!
ಈ ಹಿನ್ನೆಲೆಯಲ್ಲಿ ಮಹಿಳಾ ಪಿಎಸ್‌ಐಗೆ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ನಾಯ್ಕ್ ಅವರು ನೋಟಿಸ್ ನೀಡಿದ್ದಾರೆ. ಈ ನೋಟಿಸ್ಗೆ ಸೂಕ್ತವಾದ ವಿವರಣೆ ಕೊಡಿ ಎಂದು ತಿಳಿಸಲಾಗಿದೆ. (ಎಜೇನ್ಸಿಸ್)