Friday, September 13, 2024
spot_img
spot_img
spot_img
spot_img
spot_img
spot_img
spot_img

ಮಗನನ್ನು ಕೊಲ್ಲಲು ಯತ್ನಿಸಿದ ದುಷ್ಕರ್ಮಿಗಳನ್ನು ಕಲ್ಲೆಸೆದು ಓಡಿಸಿದ ತಾಯಿ ; ವಿಡಿಯೋ Viral.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ತಾಯಿ ಅಂದರೆನೆ ಹಾಗೆ ಎಂತಹ ಪರಿಸ್ಥಿತಿ ಬಂದರೂ ಹೆದರದೆ ತನ್ನ ಪ್ರಾಣವನ್ನು ನೀಡಿ ಮಕ್ಕಳ ರಕ್ಷಿಸುತ್ತಾಳೆ. ಅಂತಹ ಮಹಾನ್ ತಾಯಿಯೊಬ್ಬಳು ಇತ್ತೀಚೆಗೆ ತನ್ನ ಮಗನನ್ನು ದುಷ್ಕರ್ಮಿಗಳಿಂದ ಕಾಪಾಡಿದ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ನಡೆದಿದೆ.

ದುಷ್ಕರ್ಮಿಗಳು ಹಾಡಹಗಲೇ ಬೈಕ್‌ನಲ್ಲಿ ಬಂದು ವ್ಯಕ್ತಿಯೊಬ್ಬರ ಮೇಲೆ ಹಿಂದಿನಿಂದ ಹಲ್ಲೆ ನಡೆಸಿದ ಪರಿಣಾಮ ಅವರು ಗಾಯಗೊಂಡಿದ್ದಾರೆ.

ಇದನ್ನು ಓದಿ : ಪಾರ್ಕ್‌ನಲ್ಲಿ ಕುಳಿತಿದ್ದ ಯುವಕನ ಮೇಲೆ ಬೆತ್ತಲೆಯಾಗಿ ಬಂದ ಯುವತಿಯಿಂದ ಲೈಂಗಿಕ ದೌರ್ಜನ್ಯ ; ವಿಡಿಯೋ Viral.!

ವೈರಲ್ ಆಗಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ತನ್ನ ತಾಯಿಯ ಜೊತೆ ಮಾತನಾಡುತ್ತಾ ಸ್ಕೂಟರ್‌ನಲ್ಲಿ ರಸ್ತೆಯ ಬದಿಯಲ್ಲಿ ನಿಂತಿದ್ದಾರೆ. ಆಗ ಬೈಕ್‍ನಲ್ಲಿ ಬಂದ ಇಬ್ಬರು ಪುರುಷರು, ತಾಯಿಯೊಂದಿಗೆ ಮಾತನಾಡುತ್ತಿದ್ದ ವ್ಯಕ್ತಿಯ ಕಡೆಗೆ ಬಂದು ಅದರಲ್ಲಿ ಒಬ್ಬ ಹಿಂದಿನಿಂದ ವ್ಯಕ್ತಿಯ ಮೇಲೆ ದಾಳಿ ಮಾಡುತ್ತಾರೆ.

ಈ ವೇಳೆ ಭಯಪಡದೇ ಮಹಿಳೆ ಬೇಗನೆ ರಸ್ತೆಯ ಬದಿಯಲ್ಲಿ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ದಾಳಿಕೋರರನ್ನು ಬೆನ್ನಟ್ಟಲು ಪ್ರಾರಂಭಿಸುತ್ತಾಳೆ. ಇದನ್ನು ನೋಡಿದ ದಾಳಿಕೋರರು ಬೈಕ್‍ನಲ್ಲಿ ಆ ಜಾಗದಿಂದ ಎಸ್ಕೇಪ್ ಆಗಿದ್ದು, ಆಕೆಯ ಮಗ ಕೂಡ ಕಲ್ಲನ್ನು ಎತ್ತಿಕೊಂಡು ಅವರ ಹಿಂದೆ ಓಡಿದ್ದಾನೆ.

ಘಟನೆಯ ದೃಶ್ಯ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ವರದಿಯ ಪ್ರಕಾರ, ಸಿಸಿಟಿವಿ ದೃಶ್ಯಾವಳಿಗಳು ಕೊಲ್ಹಾಪುರದ ಶಾಹು ನಗರ ಪ್ರದೇಶದಿಂದ ಬಂದಿವೆ ಎನ್ನಲಾಗಿದೆ. ಹಗಲು ಹೊತ್ತಿನಲ್ಲಿ ಮಾರುಕಟ್ಟೆಯ ಜೆರಾಕ್ಸ್ ಅಂಗಡಿಯ ಮುಂದೆ ಈ ಘಟನೆ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಸುನಿಲ್ ರಾಮಪ್ಪ ಲಮಾಣಿ ಎಂದು ವರದಿಯಿಂದ ತಿಳಿದು ಬಂದಿದೆ. ಸದ್ಯ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಇದನ್ನು ಓದಿ : ಜಾಹೀರಾತಿನಲ್ಲಿ ಸಮವಸ್ತ್ರ ಧರಿಸಿ ಕಾಣಿಸಿಕೊಂಡ ಮಹಿಳಾ ಕಾನ್ಸ್‌ಟೇಬಲ್ ಸಸ್ಪೆಂಡ್ ; Video ನೋಡಿ.

ಅವರ ದೂರಿನ ಆಧಾರದ ಮೇಲೆ ಪೊಲೀಸರು ವಿನೋದ್ ಕಾಸು ಪವಾರ್, ಅರವಿಂದ್ ಕಾಸು ಪವಾರ್ ಮತ್ತು ವಿನೋದ್ ಬಾಬು ಜಾಧವ್ ಎಂಬ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img