ಜನಸ್ಪಂದನ ನ್ಯೂಸ್, ಬೆಂಗಳೂರು : ತನ್ನ ಗಂಡನನ್ನು ಬಿಟ್ಟ ಮಹಿಳೆಯೊಬ್ಬಳು ತನ್ನ ಸಂಬಂಧಿ ಮಹಿಳೆಯೊಂದಿಗೆ ಮದುವೆಯಾದ ಘಟನೆ ನಡೆದಿದೆ.
ಇಂತದ್ದೊಂದು ವಿಚಿತ್ರ ಘಟನೆ ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ 400 ಹುದ್ದೆಗಳಿಗೆ ಇಂದಿನಿಂದ ಅರ್ಜಿ ಆಹ್ವಾನ.!
ಗಂಡನನ್ನು ಬಿಟ್ಟು ಬಂದ ಮಹಿಳೆ ಶೋಭಾ ಹಾಗೂ ಸುಮನ್ ಸಂಬಂಧಿಕರಾಗಿದ್ದು, ಕಳೆದ ಮೂರು ವರ್ಷಗಳಿಂದ ಇಬ್ಬರು ಪರಸ್ಪರ ಲವ್ ಮಾಡುತ್ತಿದ್ದರು.
ಇನ್ನೂ ಅತ್ತೆ ಶೋಭಾ ಇನ್ನೊಬ್ಬರ ಜತೆ ವಿವಾಹವಾಗಿರುವುದು ಸೊಸೆಯಾದ ಸುಮನ್ ಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಈ ಕಾರಣದಿಂದ ಸುಮನ್ ಗಂಡನ ಮನೆಬಿಟ್ಟು ಶೋಭಾಳ ಜತೆ ಓಡಿ ಹೋಗಿ ಮದುವೆ ಆಗಿದ್ದಾರೆ.
ಇಬ್ಬರು ಬೆಳವ ಗ್ರಾಮದ ದೇವಸ್ಥಾನವೊಂದಕ್ಕೆ ಹಾರ ಬದಲಾಯಿಸಿಕೊಂಡು, ತಾಳಿ ಕಟ್ಟಿ ಸಪ್ತಪದಿ ತುಳಿದಿದ್ದಾರೆ ಎಂದು ವರದಿಯಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ದಂಪತಿ ತಮ್ಮ ಮದುವೆಯನ್ನು ಘೋಷಿಸಿದರು. ಪರಸ್ಪರ ಮತ್ತು ಅವರು ಜೀವನದುದ್ದಕ್ಕೂ ಒಟ್ಟಿಗೆ ಇರಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ : Health : ಶೇಂಗಾವನ್ನು ನೆನಸಿಟ್ಟು ತಿನ್ನವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು.?
ಆದರೆ ಅನೇಕ ನೆಟ್ಟಿಗರು ಮದುವೆಯನ್ನು ಖಂಡಿಸಿದ್ದಾರೆ, ಇದು ಕಾನೂನುಬಾಹಿರ ಮತ್ತು ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.