ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಬೊಮ್ಮನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪುತ್ರಿಯೊಬ್ಬಳು ತನ್ನ ಪ್ರಿಯಕರನ ಜತೆ ಸೇರಿ ತಾಯಿಯ ಕುತ್ತಿಗೆ ಬಿಗಿದು ಕೊಲೆಗೈದಿರುವ ಘಟನೆ ನಡೆದಿದೆ.
ಹೊಂಗಸಂದ್ರ ನಿವಾಸಿ ಜಯಲಕ್ಷ್ಮೀ (48) ಎನ್ನುವವರನ್ನ ಪುತ್ರಿ ಪವಿತ್ರಾ (28) ಮತ್ತು ಆಕೆಯ ಪ್ರಿಯಕರ ನವನೀಶ್ (20) ಕೊಲೆ ಮಾಡಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನು ಓದಿ : Strange tradition : ಭಾರತದ ಈ ಸಂತೆಯಲ್ಲಿ ಹುಡುಗಿಯರು ಮತ್ತು ಮಹಿಳೆಯರ ಮಾರಾಟ.!
ಪವಿತ್ರಾಗೆ ಜಯಲಕ್ಷ್ಮೀ ಸಹೋದರ ಸುರೇಶ್ ಎಂಬುವರ ಜತೆ 11 ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಪತಿ ಸುರೇಶ್ ಮಳಿಗೆಯೊಂದನ್ನು ಇಟ್ಟುಕೊಂಡಿದ್ದಾರೆ.
ಇನ್ನು ಬಾಡಿಗೆ ಮನೆಯಲ್ಲಿ ನವನೀಶ್ ವಾಸವಾಗಿದ್ದ. ಈ ಮಧ್ಯೆ ನವನೀಶ್ ಮತ್ತು ಪವಿತ್ರಾ ನಡುವೆ ಪ್ರೀತಿಯಾಗಿದ್ದು, ಇದು ಅಕ್ರಮ ಸಂಬಂಧಕ್ಕೆ ತಿರುಗಿದೆ. ಈ ವಿಚಾರ ತಿಳಿದ ಗಂಡ ಸುರೇಶ್ ಮತ್ತು ತಾಯಿ ಜಯಲಕ್ಷ್ಮೀ ಆತನ ಮನೆ ಖಾಲಿ ಮಾಡಿಸಿದ್ದರು. ಆದರೆ ಆತ ಮನೆ ಸಮೀಪದಲ್ಲೇ ಮತ್ತೊಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದನಂತೆ.
ಆರೋಪಿ ಪವಿತ್ರಾ ಪತಿ ಸುರೇಶ್ ಮತ್ತು ತಾಯಿ ಜಯಲಕ್ಷ್ಮೀ ಯಾವುದೇ ಕೆಲಸದ ಮೇಲೆ ಹೊರಗೆ ಹೋಗಿದ್ದರು. ಈ ವೇಳೆ ಪ್ರಿಯಕರನನ್ನು ಪವಿತ್ರಾ ಮನೆಗೆ ಕರೆಸಿಕೊಂಡಿದ್ದಳು. ಅದೇ ವೇಳೆ ಮನೆಗೆ ಬಂದ ಜಯಲಕ್ಷ್ಮೀ ಪವಿತ್ರಾಗೆ ಹೊಡೆದು ಬುದ್ಧಿವಾದ ಹೇಳಿದ್ದು, ಲವನೀಶ್‌ಗೂ ಹೊಡೆದು ಎಚ್ಚರಿಕೆ ನೀಡಿ ಕಳುಹಿಸಿದ್ದರು.
ಇದನ್ನು ಓದಿ : ಬಾಯ್‌ಫ್ರೆಂಡ್ ಜೊತೆ ಓಡಿಹೋಗುತ್ತಿದ್ದ ಯುವತಿಗೆ ನೆನಪಾದ ತಂದೆ ; ಮುಂದೆನಾಯ್ತು? ಈ Video ನೋಡಿ.
ಇದರಿಂದ ಕೋಪಗೊಂಡಿದ್ದ ಪವಿತ್ರಾ, ತಾಯಿ ಮಲಗಿದ್ದ ವೇಳೆ ಆಕೆಯನ್ನು ಕೊಲ್ಲಬೇಕೆಂದು ಪ್ರಿಯಕರ ಲವನೀಶ್ ನನ್ನು ಕರೆಸಿಕೊಂಡಿದ್ದಾಳೆ. ಬಳಿಕ ಇಬ್ಬರು ಟವೆಲ್‌ನಿಂದ ಕುತ್ತಿಗೆ ಬಿಗಿದು ಜಯಲಕ್ಷ್ಮೀ ಕೊಲೆಗೈದು, ಶೌಚಾಲಯ ಸಮೀಪ ಮಲಗಿಸಿದ್ದಾರೆ. ನಂತರ ಲವನೀಶ್ ಮನೆಯಿಂದ ಎಸ್ಕೇಪ್ ಆಗಿದ್ದನು. ಬಳಿಕ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆದಿದಾಗ ಅಸಲಿ ವಿಚಾರ ಬಯಲಾಗಿದೆ.