Saturday, July 13, 2024
spot_img
spot_img
spot_img
spot_img
spot_img
spot_img

ಅಂಚೆ ಇಲಾಖೆಯಲ್ಲಿ ಬೃಹತ್‌ ನೇಮಕಾತಿ ; 50,000ಕ್ಕೂ ಹೆಚ್ಚಿನ ಹುದ್ದೆಗೆ ಅರ್ಜಿ ಆಹ್ವಾನ.!

spot_img

ಜನಸ್ಪಂದನ ನ್ಯೂಸ್‌, ನೌಕರಿ : ದೇಶಾದ್ಯಂತ ಸುಮಾರು 50,000 ಗ್ರಾಮೀಣ ಡಾಕ್ ಸೇವಕ್ (Grameen Doc Sevak) ಹುದ್ದೆಗಳಿಗೆ ಭಾರತೀಯ ಅಂಚೆ ಇಲಾಖೆಯು (Indian post department) ಅರ್ಜಿಯನ್ನು ಆಹ್ವಾನಿಸಿದೆ.

ಯಾವುದೇ ಲಿಖಿತ ಪರೀಕ್ಷೆ, ಸಂದರ್ಶನ ನಿಯಮವಿಲ್ಲದೆ ಕೇವಲ ಎಸ್.ಎಸ್.ಎಲ್.ಸಿಯಲ್ಲಿ (SSLC) ಪಡೆದ ಅಂಕಗಳ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಇದನ್ನೂ ಓದಿ : ಈಶಾನ್ಯ ರೈಲ್ವೆಯಲ್ಲಿ ಖಾಲಿ ಇರುವ 1,104 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿಗೆ ಅರ್ಜಿ ಆಹ್ವಾನ.!

ಭಾರತೀಯ ಅಂಚೆ ಇಲಾಖೆಯು ಕಳೆದ ವರ್ಷ ಜನವರಿಯಲ್ಲಿ ಸುಮಾರು 40,000 ಹುದ್ದೆಗಳ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ತಡೆಹಿಡಿಯಲಾಗಿತ್ತು. ಹೊಸ ಸರ್ಕಾರ ರಚನೆಯಾಗಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಅಧಿಸೂಚನೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಹುದ್ದೆ ವಿವರ : ಅಂಚೆ ಇಲಾಖೆಯಲ್ಲಿ ಲಭ್ಯವಿರುವ ಹುದ್ದೆಗಳಲ್ಲಿ ಕೆಲವು ಈ ಕೆಳಗಿನಂತಿವೆ:

  • ಗ್ರಾಮೀಣ ಡಾಕ್ ಸೇವಕ.
  • ಬ್ರಾಂಚ್ ಪೋಸ್ಟ್‌ಮಾಸ್ಟರ್.
  • ಸಹಾಯಕ ಬ್ರಾಂಚ್ ಪೋಸ್ಟ್‌ಮಾಸ್ಟರ್.
  • ಮೇಲ್ ವಿತರಕ.
  • ಪೋಸ್ಟಲ್ ಅಸಿಸ್ಟೆಂಟ್.

ಇದನ್ನೂ ಓದಿ : ಇನ್ಫೋಸಿಸ್ ಹುಬ್ಬಳ್ಳಿ Campus ನಲ್ಲಿ ಕೆಲಸ ಮಾಡಲು ಬಯಸುವ ಉದ್ಯೋಗಿಗಳಿಗೆ ಆಕರ್ಷಕ ಪ್ಯಾಕೇಜ್.!

ವೇತನ :

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವೇತನ ಆರಂಭದಲ್ಲಿ 10,000 ರೂ.ಗಳಿಂದ 12,000 ರೂ.ಗಳವರೆಗೆ ಇರುತ್ತದೆ. ಬಡ್ತಿಗಳ ಮೂಲಕ ಉನ್ನತ ಸ್ಥಾನಗಳನ್ನ ತಲುಪಬಹುದು. ಭಾರತೀಯ ಅಂಚೆ ಪಾವತಿ ಬ್ಯಾಂಕ್ ಸೇವೆಗಳ ಮೂಲಕ ಪ್ರೋತ್ಸಾಹಕಗಳನ್ನ ಪಡೆಯಬಹುದು.

ಅರ್ಹತೆ ಏನು 😕

ಎಸ್ ಎಸ್ ಎಲ್ ಸಿ ಅಂಕಗಳ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18ರಿಂದ 40 ವರ್ಷದೊಳಗಿನವರಿಗಿರಬೇಕು. ಮೀಸಲಾತಿಯ ಆಧಾರದ ಮೇಲೆ ವಯಸ್ಸಿನ ಸಡಿಲಿಕೆಯೂ ಇದೆ.

ಆಯ್ಕೆ ಪ್ರಕ್ರಿಯೆ ಹೇಗೆ.?

10ನೇ ತರಗತಿ ಪೂರ್ಣಗೊಳಿಸಿರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ತಮ್ಮ ಪ್ರದೇಶದ ಸುತ್ತಮುತ್ತಲಿನ ಅಂಚೆ ಕಚೇರಿಗಳಲ್ಲಿ ಕೆಲಸ ಮಾಡುವ ಅವಕಾಶಕ್ಕೆ ಆಯ್ಕೆ ಮಾಡಬಹುದು. ಅರ್ಹತೆಯ ಆಧಾರದ ಮೇಲೆ ಹತ್ತಿರದ ಅಂಚೆ ಕಚೇರಿಗಳಲ್ಲಿ ಪೋಸ್ಟಿಂಗ್ ನೀಡಲಾಗುವುದು.

ಅರ್ಜಿ ಸಲ್ಲಿಸಿದ ಬಳಿಕ ಆಯ್ಕೆಯಾದ ಅಭ್ಯರ್ಥಿಗಳಿಗೆ 10ನೇ ತರಗತಿಯಲ್ಲಿ ಪಡೆದ ಅಂಕಗಳು ಮತ್ತು ಮೀಸಲಾತಿ ನಿಯಮದ ಆಧಾರದ ಮೇಲೆ ಹಂತ ಹಂತವಾಗಿ ಫಲಿತಾಂಶಗಳನ್ನು ಘೋಷಿಸಲಾಗುತ್ತದೆ.

ಇದನ್ನೂ ಓದಿ : PGCIL : ವಿದ್ಯುತ್ ಇಲಾಖೆಯಲ್ಲಿ 400+ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.! 

ಅರ್ಜಿ ಸಲ್ಲಿಸುವ ವಿಧಾನ :

ಭಾರತೀಯ ಅಂಚೆ ಇಲಾಖೆಯ ವೆಬ್‌ಸೈಟ್  https://indiapostgdsonline.gov.in/ ನಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸತಕ್ಕದ್ದು. ಆಯ್ಕೆಯಾಗುವ ಅಭ್ಯರ್ಥಿಗಳ ವಿವರವನ್ನೂ ಈ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.

Disclaimer : All information provided here is for reference purpose only. While we try to list all the scholarships for the convenience of students, this information is available on the internet. Please refer official website for official information.

spot_img
spot_img
- Advertisment -spot_img