ಜನಸ್ಪಂದನ ನ್ಯೂಸ್, ಡೆಸ್ಕ್ : ತುಂಬಿ ಹರಿಯುವ ಹೊಳೆಯ ನೀರಿನಲ್ಲಿ ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬ ಬಾಣಂತಿಯನ್ನು ಹೆಗಲ ಮೇಲೆ ಹೊತ್ತೊಯ್ದಿದ್ದು, ಇನ್ನೋರ್ವ ವ್ಯಕ್ತಿ ನವಜಾತ ಶಿಶುವನ್ನು ನೀರಿನಲ್ಲಿ ಎತ್ತಿಕೊಂಡು ಹೋದ ಘಟನೆ ನಡೆದಿದೆ.
ಆಂಧ್ರದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಅಡ್ಡತೀಗಾಲ ಮಂಡಲದ ಪಿಂಜಾರ ಕೊಂಡ ತಾಂಡಾದಲ್ಲಿ ಇಂತದ್ದೊಂದು ಘಟನೆ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : Special news : ರಾತ್ರಿ ಮೊಸರಿಗೆ ಈರುಳ್ಳಿ ಸೇರಿಸಿ ತಿನ್ನಬಹುದೇ.? ತಿಂದರೆ ಏನಾಗಬಹುದು.!
ಪಿಂಜಾರಕೊಂಡದ ಮಹಿಳೆ ಮತ್ತು ನವಜಾತ ಶಿಶುವನ್ನು ಇತರರು ಬ್ಯಾರೇಜ್ ಮೇಲೆ ಧುಮ್ಮಿಕ್ಕಿ ರಭಸವಾಗಿ ಹರಿಯುವ ನೀರಿನಲ್ಲಿ ಹೊತ್ತುಕೊಂಡು ಹೋಗಿದ್ದಾರೆ.
ಪಿಂಜಾರಕೊಂಡ ಗ್ರಾಮದ ಬುಡಕಟ್ಟು ಮಹಿಳೆ ವೆಲುಗುಳ ಜ್ಯೋತಿಕಾ ರೆಡ್ಡಿ ಮೂರು ದಿನಗಳ ಹಿಂದೆ ಕಾಕಿನಾಡ ಜಿಲ್ಲೆಯ ಯಲೇಶ್ವರಂ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು.
ಡಿಸ್ಚಾರ್ಜ್ ಆದ ನಂತರ ಮಹಿಳೆಯ ಕುಟುಂಬ ಸದಸ್ಯರು ಉಕ್ಕಿ ಹರಿಯುವ ಹೊಳೆ ದಾಟುವುದನ್ನು ಬಿಟ್ಟು ಬೇರೆ ದಾರಿಯಿಲ್ಲದೆ, ಬ್ಯಾರೇಜ್ನ ಉದ್ದಕ್ಕೂ ರಭಸವಾಗಿ ಹರಿಯುವ ನೀರಿನಲ್ಲೇ ದಾಟುತ್ತಿದ್ದಾರೆ.
ಇದನ್ನು ಓದಿ : ಸಿನಿಮೀಯ ಶೈಲಿಯಲ್ಲಿ ಕಾರು ಸುತ್ತುವರೆದು 2.5 KG ತೂಕದ ಚಿನ್ನಾಭರಣ ದರೋಡೆ ; ವಿಡಿಯೋ Viral.!
ಇನ್ನೂ ಸಮರ್ಪಕ ರಸ್ತೆಯ ಕೊರತೆಯಿಂದ ಬಳಲುತ್ತಿರುವ ಗ್ರಾಮಗಳ ಜನರು ಅಪಾಯ ಲೆಕ್ಕಿಸದೆ ನೀರಿನಲ್ಲೇ ಮುಂದಕ್ಕೆ ಸಾಗುತ್ತಿದ್ದಾರೆ.
They know very well that crossing the overflowing stream carrying the pregnant woman on shoulder is highly risky.
They also know that not taking her to hospital is also equally risky.
Pinjarikonda village,
Addateegala block in Alluri district, #AndhraPradesh#TribalLivesMatter pic.twitter.com/YIeEpeaOoK— P Pavan (@PavanJourno) September 27, 2024