ಜನಸ್ಪಂದನ ನ್ಯೂಸ್, ಚಿಕ್ಕಮಗಳೂರು : ವ್ಯಕ್ತಿಯೋರ್ವ ಪಿತೃ ಪಕ್ಷದ ಊಟಕ್ಕೆ ಮಾವನ ಮನೆಗೆ ಹೋಗಲು ಗಾಡಿ ವ್ಯವಸ್ಥೆ ಇಲ್ಲ ಎಂದು ಪೊಲೀಸ್ ಠಾಣೆಗೆ ಕರೆ ಮಾಡಿ ಪೊಲೀಸರನ್ನೇ ಕರೆಸಿದ ವಿಚಿತ್ರ ಘಟನೆ ನಡೆದಿದೆ.
ಇದನ್ನು ಓದಿ : CM ಸಿದ್ದರಾಮಯ್ಯ ವಿರುದ್ಧ FIR ದಾಖಲಿಸಿ ತನಿಖೆ ನಡೆಸುವಂತೆ ಕೋರ್ಟ್ ಆದೇಶ.!
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ತರುವೆ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ.
ಪಿತೃ ಪಕ್ಷದ ಊಟಕ್ಕೆ ಮಾವನ ಮನೆಗೆ ಹೋಗಲು ಯಾವುದೇ ವಾಹನ ಸಿಗದಿದ್ದಕ್ಕೆ ಭೂಪನೊಬ್ಬ ಸಖತ್ ಐಡಿಯಾವೊಂದನ್ನು ಮಾಡಿದ್ದು, 112 ಗೆ ಫೋನ್ ಮಾಡಿ ಸರ್ ಗಲಾಟೆ ಆಗ್ತಿದೆ ಬೇಗ ಬನ್ನಿ ಅಂತ ಮನವಿ ಮಾಡಿದ್ದಾನೆ.
ಕರೆ ನಂಬಿ ಸ್ಥಳಕ್ಕೆ ಹೋದ ಪೊಲೀಸರಿಗೆ ಶಾಕ್ ಎದುರಾಗಿತ್ತು. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿ ಗಲಾಟೆ ಆಗುತ್ತಿದೆ ಬೇಗ ಬನ್ನಿ ಸಾರ್ ಎಂದು ಕರೆ ಮಾಡಿದ್ದ ಆಸಾಮಿ ಪೊಲೀಸರು ಬರುತ್ತಿದ್ದಂತೆ ಮಾವನ ಮನೆಗೆ ಡ್ರಾಪ್ ಮಾಡುವಂತೆ ಕೇಳಿ ಕೊಂಡಿದ್ದಾನೆ. ಗಾಡಿ ಯಾವೂ ಸಿಗ್ತಾ ಇಲ್ಲ, ಮಳೆ ಬೇರೆ, ಪಲ್ಗುಣಿ ಗ್ರಾಮಕ್ಕೆ ಡ್ರಾಪ್ ಮಾಡಿ ಎಂದು ರಿಕ್ವೆಸ್ಟ್ ಮಾಡಿದ್ದಾನೆ.
ಈ ವ್ಯಕ್ತಿಯ ಮಾತನ್ನು ಒಂದು ಕ್ಷಣ ಪೊಲೀಸರಿಗೆ ಇತನನ್ನು ಹಿಗ್ಗಾಮುಗ್ಗಾ ಬೈಯ್ಯಬೇಕೋ ಅಥವಾ ಈತ ಮಾಡಿದ ಕೆಲಸಕ್ಕೆ ನಗಬೇಕೋ ಎಂದು ತಿಳಿಯದಾಗಿದೆ.
ಇದನ್ನು ಓದಿ : Health : ಈ ಎಲೆಯನ್ನು ಮೂಸಿದರೆ ಸಾಕು; ಕ್ಷಣದಲ್ಲೇ ಕೆಮ್ಮು, ನೆಗಡಿ ಗುಣವಾಗುತ್ತದೆ.!
ಕೊನೆಗೆ ಇನ್ಯಾವತ್ತೂ ಪೊಲೀಸರಿಗೆ ಈ ರೀತಿ ಸುಳ್ಳು ಕರೆ ಮಾಡದಂತೆ ಬುದ್ದಿವಾದ ಹೇಳಿದ ಪೊಲೀಸರು ಕೊನೆಗೆ ತಾವೇ ಲಾರಿಯನ್ನು ಅಡ್ಡಹಾಕಿ ಆ ವ್ಯಕ್ತಿಯನ್ನ ಮಾವನ ಮನೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.