ಜನಸ್ಪಂದನ ನ್ಯೂಸ್, ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಜೋಡಿ ಹಕ್ಕಿಗಳ ವಿಡಿಯೋ ವೈರಲ್ ಆಗುತ್ತಿರುತ್ತವೆ. ಇದರಲ್ಲಿ ನಡು ರಸ್ತೆಯಲ್ಲಿಯೇ ಮೈಮರೆತು ಎಲ್ಲೆಂದರಲ್ಲಿ ಸ್ವಲ್ಪ ನಾಚಿಕೆ, ಮುಜುಗರ ಇಲ್ಲದೇ ಜೋಡಿಗಳು ಕಿಸ್ಸಿಂಗ್, ಹಗ್ಗಿಂಗ್ ಮಾಡುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
ಇದನ್ನು ಓದಿ : Onlineನಲ್ಲಿ ಖರೀದಿಸಿದ ಅಂಡರ್ವೇರ್ ಧರಿಸಿದ್ಮೇಲೆ ನನ್ನ ಮಗಳು ಪ್ರೆಗ್ನೆಂಟ್ ಆಗಿದ್ದಾಳೆ ಎಂದು ಕೋರ್ಟ್ ಮೆಟ್ಟಿಲೇರಿದ ತಾಯಿ.!
ಲಜ್ಜೆಯಿಲ್ಲದೇ ಈ ಪ್ರೇಮಿಗಳು ತೋರುವ ಹುಚ್ಚಾಟಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚಲಿಸುತ್ತಿರುವ ರೈಲಿನಲ್ಲಿ ರೊಮ್ಯಾನ್ಸ್ ಮಾಡಿದ, ಕಾಲೇಜ್ ಕ್ಯಾಂಪಸ್‌ನಲ್ಲಿ ಮೈ ಮರೆತು ಅಸಭ್ಯವಾಗಿ ವರ್ತಿಸಿದ ಕೆಲವಷ್ಟು ವಿಡಿಯೋಗಳು ಈ ಹಿಂದೆಯೂ ವೈರಲ್ ಆಗಿದ್ದವು.
ಬೆಂಗಳೂರಿನ ರಸ್ತೆಯಲ್ಲಿ ಜೋಡಿಯೊಂದು ಮಿತಿ ಮೀರಿ ವರ್ತನೆ ಮಾಡುತ್ತಾ ಬೈಕ್ ಚಲಾಯಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಜೋಡಿಯ ಈ ಅತಿರೇಕದ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇದನ್ನು ಓದಿ : ಬಿಎಸ್ಎನ್ಎಲ್ ಗ್ರಾಹಕರಿಗೆ ಗುಡ್ ನ್ಯೂಸ್ : ʼಬಿಎಸ್ಎನ್ಎಲ್ʼನಿಂದ 4G ಸೇವೆ ಆರಂಭ ; ಎಂದಿನಿಂದ ಗೊತ್ತೇ.?
ವೈರಲ್ ವಿಡಿಯೋದಲ್ಲಿ ಯುವಕ ಬೈಕ್ ಚಾಲನೆ ಮಾಡುತ್ತಿದ್ದು, ಯುವತಿ ಟ್ಯಾಂಕ್ ಮೇಲೆ ಕೂತಿರುವುದನ್ನು ಕಾಣಬಹುದು. ಯುವಕನ ಜೊತೆ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯಗಳನ್ನು ವಿಡಿಯೋದಲ್ಲಿ ನೋಡಬಹುದು.
ಬೈಕ್ ಚಲಾಯಿಸುತ್ತಿರುವ ಯುವಕ ಕೂಡ ಹೆಲ್ಮೆಟ್ ಧರಿಸದೆ ಅಜಾಗರೂಕತೆಯಿಂದ ಯುವತಿಯನ್ನು ಮುದ್ದಾಡುತ್ತಾ ಬೈಕ್ ಚಾಲನೆ ಮಾಡುತ್ತಿದ್ದಾನೆ. ಸಾರ್ವಜನಿಕವಾಗಿ ಈ ರೀತಿ ಅಸಭ್ಯವಾಗಿ ವರ್ತಿಸುತ್ತಿರುವುದು ಅಲ್ಲದೆ, ಟ್ರಾಫಿಕ್ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿದ್ದಾರೆ.
ಇದನ್ನು ಓದಿ : ವಿದ್ಯುತ್ ಇಲಾಖೆ (ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ) ಯಲ್ಲಿ ಖಾಲಿ ಇರುವ 1,000+ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಈ ವಿಡಿಯೋ ನೋಡಿದ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದು, ಹೀಗೆ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿದರೆ ಅಪಘಾತವಾಗದೆ ಇನ್ನೇನಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
A Follower shared a video of a couple who were seen violating traffic rules by performing dangerous stunts by doing intimate scenes publicly Two-Wheeler in Bengaluru 📍@BlrCityPolice is requested to curb these acts immediately https://t.co/oIDfotGyPI pic.twitter.com/iSGwpe9nvv
— Bengaluru Updates (@BengaluruU86103) August 23, 2024