ಜನಸ್ಪಂದನ ನ್ಯೂಸ್, ಬೀದರ್ : ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಬಂಬುಳಗಿ ಗ್ರಾಮದಲ್ಲಿ ಪತ್ನಿಯ ಜತೆ ಅನೈತಿಕ ಸಂಬಂಧ ಹೊಂದಿದ್ದ ಯುವಕನ ಮರ್ಮಾಂಗ ಕತ್ತರಿಸಿದ ಘಟನೆ ನಡೆದಿದೆ.
ಬಂಬುಳಗಿ ಗ್ರಾಮದ ಸುನೀಲ್ (28) ಎಂಬಾತ ಹಲ್ಲೆಗೊಳಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಇದನ್ನು ಓದಿ : ಪಶ್ಚಿಮ ರೈಲ್ವೆಯಲ್ಲಿ 3,624 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ.!
ರಾತ್ರಿ ಮಹಿಳೆಯ ಜತೆ ಆಕೆಯ ಮನೆಯಲ್ಲಿ ಸಿಕ್ಕಿ ಬಿದ್ದಿರುವ ಯುವಕನಿಗೆ ಪತಿ ರಾತ್ರಿಯಿಡೀ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾನ.
ಬಳಿಕ ಮರ್ಮಾಂಗವನ್ನು ಕತ್ತರಿ ಮೂಲಕ ಘಾಸಿಗೊಳಿಸಿ ಕತ್ತರಿಸಿದ್ದಾನೆ ಎನ್ನಲಾಗಿದೆ.
ಚಿಟಗುಪ್ಪ ಪೊಲೀಸರು ಕೃತ್ಯ ಎಸಗಿದ ವ್ಯಕ್ತಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ..