Friday, September 13, 2024
spot_img
spot_img
spot_img
spot_img
spot_img
spot_img
spot_img

Lokayukta ಪೊಲೀಸರನ್ನು ಕಂಡು‌ ಲಂಚದ ಹಣದೊಂದಿಗೆ ಪರಾರಿಯಾದ ಅಧಿಕಾರಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು ಗ್ರಾಮಾಂತರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕಂದಾಯ ಇಲಾಖೆಯ ಅಧಿಕಾರಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರನ್ನು ಕಂಡ ತಕ್ಷಣ ಹಣದ ಸಮೇತ ಪರಾರಿಯಾದ ಘಟನೆ ನಡೆದಿದೆ.

ಕಂದಾಯ ಇಲಾಖೆಯ ವಿಷಯ ನಿರ್ವಾಹಕ ಅಧಿಕಾರಿ ಮಹೇಶ್ ಈ ರೀತಿ ಎಸ್ಕೇಪ್ ಆಗಿದ್ದಾರೆ.

ಇದನ್ನು ಓದಿ : ನಿಮ್ಮ ಹೃದಯ ರೇಖೆಯಿಂದ ತಿಳಿಯಬಹುದು ನಿಮ್ಮ personality ; ನಿಮ್ಮ ಅಂಗೈ ರೇಖೆ ಯಾವ ರೀತಿ ಇದೆ.!

ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬೆನ್ನಟ್ಟಿದ್ದರೂ ಅವರ ಕೈಗೂ ಸಿಗದೆ ತಪ್ಪಿಸಿಕೊಂಡು ಓಟ ಕಿತ್ತಿದ್ದಾನೆ.

ಆರೋಪಿಗಾಗಿ ಹುಡುಕಿ ವಾಪಸ್ ಆದ ಪೊಲೀಸರು ಕಂದಾಯ ಇಲಾಖೆ ಕಚೇರಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಕಲೆ ಹಾಕಿಕೊಂಡು ಬಳಿಕ ಅಲ್ಲಿಂದ ತೆರಳಿದ್ದಾರೆ.

ಇದನ್ನು ಓದಿ : ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್‌ ಯೋಜನೆಯಡಿ 300 ಯುನಿಟ್‌ ವಿದ್ಯುತ್‌ ಫ್ರೀ ; ಡೈರೆಕ್ಟ್ Link ಇಲ್ಲಿದೆ.!

ಚಿಕ್ಕಬಳ್ಳಾಪುರದ ಜಯಸೂರ್ಯ ಎಂಬುವರು, ದೇವನಹಳ್ಳಿ ತಾಲ್ಲೂಕಿನ ವೆಂಕಟಗಿರಿ ಕೋಟೆ ಬಳಿ ಪೆಟ್ರೋಲ್ ಬಂಕ್ ಆರಂಭಿಸಲು ಅಗತ್ಯ ಪರವಾನಗಿ ಪಡೆಯಲು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.

ಈ ವೇಳೆ ಕಂದಾಯ ಇಲಾಖೆಯ ವಿಷಯ ನಿರ್ವಾಹಕ ಅಧಿಕಾರಿ ಮಹೇಶ್, ಜಯಸೂರ್ಯ ಅವರಿಗೆ ₹2.50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಇದನ್ನು ಓದಿ : Health : ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು.!

ಈ ಬಗ್ಗೆ ಜಯಸೂರ್ಯ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು ಎಂದು ತಿಳಿದು ಬಂದಿದೆ.

ಅಂತೆಯೇ ಜಯಸೂರ್ಯ ಮುಂಗಡವಾಗಿ ನೀಡಲು ₹50 ಸಾವಿರ ಹಣದೊಂದಿಗೆ ಕಂದಾಯ ಇಲಾಖೆಗೆ ಬಂದಿದ್ದರು. ಮಹೇಶ್‌ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಇದು ಗೊತ್ತಾಗುತ್ತಲೇ ಮಹೇಶ್ ಹಣದ ಸಮೇತ ಕಚೇರಿಯಿಂದ ಓಡಿ ಹೋದರು ಎನ್ನಲಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img