ಜನಸ್ಪಂದನ ನ್ಯೂಸ್, ಡೆಸ್ಕ್ : ವಕೀಲರೊಬ್ಬರು ಬರೋಬ್ಬರಿ 17 ವರ್ಷಗಳ ಬಳಿಕ ತನ್ನ ಪ್ರಕರಣದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಕೊಡಿಸಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
7 ವರ್ಷದವನಾಗಿದ್ದಾಗ ಕಿಡ್ನ್ಯಾಪ್ ಆಗಿದ್ದ ಹರ್ಷ್ ಗಾರ್ಗ್ ಎಂಬುವವರು ಈಗ ವಕೀಲರಾಗಿದ್ದು, ತನ್ನ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಕೊಡಿಸಿದ್ದಾರೆ.
ಇದನ್ನು ಓದಿ : Video : ವಿಮಾನದಲ್ಲಿ ಮತ್ತೊಬ್ಬನ ಜೊತೆ ಸಿಕ್ಕಿಬಿದ್ದ ಯುವತಿ; ಮುಂದೆನಾಯ್ತು ನೋಡಿ.
ಘಟನೆಯ ಹಿನ್ನೆಲೆ :
2007 ಫೆಬ್ರವರಿಯಲ್ಲಿ ಹರ್ಷ್ ಗಾರ್ಗ್ಗೆ 7 ವರ್ಷ ವಯಸ್ಸು. ಹರ್ಷ್ ಗಾರ್ಗ್ ತನ್ನ ತಂದೆ ರವಿ ಗಾರ್ಗ್ ಜತೆಗೆ ಮೆಡಿಕಲ್ ಸ್ಟೋರ್ನಲ್ಲಿ ಕುಳಿತಿದ್ದರು, ಆ ದಿನ ಸಂಜೆ 7 ಗಂಟೆ ಸುಮಾರಿಗೆ ರಾಜಸ್ಥಾನ ನೋಂದಣಿ ಇರುವ ಕಾರು ಅವರ ಬಳಿಗೆ ಬಂದು ನಿಂತಿತ್ತು.
ಕಾರು ನಿಲ್ಲಿಸಿ ಗುಡ್ಡನ್ ಕಚ್ಚಿ ಎಂಬಾತ ಹರ್ಷ್ ತಂದೆ ಹಣೆಗೆ ಗನ್ ಇಟ್ಟು ಹರ್ಷ್ನನ್ನು ಅಪಹರಿಸಿದ್ದರು. ಆಗ ಹರ್ಷ್ ತಂದೆಗೆ ಗುಂಡು ಹಾರಿಸಲಾಗಿತ್ತು, ಅವರು ಗಂಭೀರವಾಗಿ ಗಾಯಗೊಂಡಿದ್ದರು. ಇನ್ನೂ ಹರ್ಷ್ನನ್ನು ಸುರಕ್ಷಿತವಾಗಿ ಕಳುಹಿಸಬೇಕೆಂದರೆ 55 ಲಕ್ಷ ರೂ. ಹಣ ಕೊಡುವಂತೆ ಕಿಡ್ನ್ಯಾಪರ್ಸ್ ಡಿಮ್ಯಾಂಡ್ ಮಾಡಿದ್ದರು.
ಇದನ್ನು ಓದಿ : Health : ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಸ್ಪೂನ್ ತುಪ್ಪ ತಿನ್ನಬೇಕು.? ಜಾಸ್ತಿ ತಿಂದ್ರೆ ಏನಾಗುತ್ತೆ ಗೊತ್ತಾ.?
ಮಾರ್ಚ್ 6, 2007ರಂದು ಆರೋಪಿಗಳಾದ ಭೀಮ್ ಸಿಂಗ್ ಹಾಗೂ ರಾಮ್ ಪ್ರಕಾಶ್ ಹರ್ಷ್ನನ್ನು ಬೇರೆಡೆಗೆ ಕರೆದೊಯ್ಯುತ್ತಿದ್ದಾಗ ಹರ್ಷ್ ಅಪಹರಣಕಾರರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.
ಆಬಳಿಕ ಪೊಲೀಸರು ಗುಡ್ಡನ್ ಕಚ್ಚಿ, ರಾಜಕುಮಾರ್, ಫತೇ ಸಿಂಗ್, ಅಮರ್ ಸಿಂಗ್, ಬಲ್ವೀರ್, ರಾಜೇಶ್ ಶರ್ಮಾ, ಭೀಮ್ ಸಿಂಗ್ ಮತ್ತು ರಾಮ್ ಪ್ರಕಾಶ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. 2014ರಲ್ಲಿ ವಿಚಾರಣೆ 2018ರವರೆಗೂ ನಡೆಯಿತು.
ಇದನ್ನು ಓದಿ : ಮೈಕ್ರೋಸ್ಕೋಪ್‌ನಲ್ಲಿ ನವಿಲು ಗರಿ ಹೇಗೆ ಕಾಣಿಸುತ್ತೆ.? Video ನೋಡಿದ್ರೆ wow ಅಂತೀರಾ.!
ಹರ್ಷ್ ಅವರ ತಂದೆ ಕೂಡ ವಕೀಲರಾಗಿದ್ದರು. ಹರ್ಷ್ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುತ್ತಿದ್ದರು. ವಿಚಾರಣೆಯ ಸಮಯದಲ್ಲಿ ಅವರು ಸ್ವತಃ ವಕೀಲರಾಗಲು ನಿರ್ಧರಿಸಿದರು. ಪದವಿಯ ನಂತರ, ಹರ್ಷ್ 2022 ರಲ್ಲಿ ಆಗ್ರಾ ಕಾಲೇಜಿನಿಂದ ಎಲ್‌ಎಲ್‌ಬಿಯನ್ನು ಪೂರ್ಣಗೊಳಿಸಿದರು ಮತ್ತು ಮುಂದಿನ ವರ್ಷ ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿಸಿಕೊಂಡರು.
ಹರ್ಷ್ ಅವರು ಪ್ರಾಸಿಕ್ಯೂಷನ್ ತಂಡವನ್ನು ಸೇರಿಕೊಂಡರು ಮತ್ತು ಜೂನ್ 2024 ರಲ್ಲಿ ಕೇಳಿದ ಅಂತಿಮ ವಾದಗಳನ್ನು ಸ್ವತಃ ಮಂಡಿಸಿದರು. ಸೆಪ್ಟೆಂಬರ್ 17 ರಂದು ವಿಶೇಷ ನ್ಯಾಯಾಧೀಶ ನ್ಯಾಯಾಲಯವು ಅಪಹರಣ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತು.