ಜನಸ್ಪಂದನ ನ್ಯೂಸ್, ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಅಪಹರಣ ಪ್ರಕರಣ ಬೆಳಕಿಗೆ ಬಂದಿದ್ದು ಈ ಪ್ರಕರಣದಲ್ಲಿ ಲೇಡಿ ಗ್ಯಾಂಗ್ ಜೊತೆ ಕನ್ನಡ ಪರ ಸಂಘಟನೆ ಅಧ್ಯಕ್ಷನ ಹೆಸರು ಸಹ ಕೇಳಿ ಬರುತ್ತಿದೆ.
ಘಟನೆ ಸಂಬಂಧ ಶಂಕರಪುರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ : RDPR : ಗ್ರಾಮ ಪಂಚಾಯತಿಗಳಲ್ಲಿ ಭರ್ಜರಿ ನೇಮಕಾತಿಗೆ ಸರ್ಕಾರ ಆದೇಶ.!
ಕನ್ನಡ ಪರ ಸಂಘಟನೆ ಅಧ್ಯಕ್ಷ & ಗ್ಯಾಂಗ್ ವಿರುದ್ಧ ಪ್ರಕರಣ ದಾಖಲಾಗಿದೆ. ಬ್ಯಾಂಕ್ ಉದ್ಯೋಗಿಯಾಗಿರುವ ಓರ್ವರನ್ನು ಕನ್ನಡ ಪರ ಸಂಘಟನೆ ಅಧ್ಯಕ್ಷ & ಗ್ಯಾಂಗ್ ಅಪಹರಿಸಿತ್ತು. ಕಿಡ್ನ್ಯಾಪ್ ಮಾಡಿದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ನು ಸಂಘಟನೆಯ ಅಧ್ಯಕ್ಷನಿಗೆ ಸೇರಿದ ಕಚೇರಿಯಲ್ಲಿ ಬ್ಯಾಂಕ್ ಉದ್ಯೋಗಿಯನ್ನು ಕರೆದುಕೊಂಡು ಬಂದು ಥಳಿಸಲಾಗಿತ್ತು. ಅಪಹರಿಸಿ ಹಣ, ಮನೆ ದಾಖಲೆಗಳನ್ನು ಕಸಿದುಕೊಂಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ : ಬೆಳಗ್ಗೆ ಎದ್ದಾಕ್ಷಣ ತುಂಬಾ ಬಾಯಾರಿಕೆ ಆಗುತ್ತಿದೆಯೇ.? ಇದು ಈ ರೋಗದ ಲಕ್ಷಣವಾಗಿರಬಹುದು.!
ಇನ್ನು ಮತ್ತೊಂದೆಡೆ ಅಪಹರಣಕ್ಕೊಳಗಾದ ಬ್ಯಾಂಕ್ ಉದ್ಯೋಗಿ ಅವರು ಓರ್ರವ ಮಹಿಳೆಯ ಬಳಿ 8 ಲಕ್ಷ ಸಾಲ ಪಡೆದಿದ್ದರು. ಆದರೆ ಸಾಲ ಪಡೆದಿದ್ದ ಹಣ ವಾಪಸ್ ನೀಡದೆ ಬ್ಯಾಂಕ್ ಉದ್ಯೋಗಿ ಸತಾಯಿಸಿದ್ದರು. ಹೀಗಾಗಿ ಮಹಿಳೆಯು ಸಂಘಟನೆಯ ಅಧ್ಯಕ್ಷನ ಜೊತೆ ಸೇರಿ ಕಿಡ್ನ್ಯಾಪ್ ಪ್ಲ್ಯಾನ್ ಮಾಡಿದ್ದರು.
ಬ್ಯಾಂಕ್ ಉದ್ಯೋಗಿಯ ಕಿಡ್ನ್ಯಾಪ್ ಮಾಡಿ ದಾಖಲೆ ಕಿತ್ತುಕೊಂಡ ಆರೋಪದ ಮೇಲೆ ಸದ್ಯ ಮಹಿಳೆ ಹಾಗೂ ಕನ್ನಡ ಪರ ಸಂಘಟನೆ ಅಧ್ಯಕ್ಷ ಸೇರಿ 6 ಆರೋಪಿಗಳ ವಿರುದ್ಧ FIR ದಾಖಲಾಗಿದೆ.