ಅತಿಯಾಗಿ ಯೋಚಿಸ್ತೀರಾ ? ಮನಶಾಸ್ತ್ರಜ್ಞರು ತಿಳಿಸುವ ಈ ಸಲಹೆಗಳಿಂದ ಕಮ್ಮಿ ಮಾಡ್ಕೊಳ್ಳಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ಅತಿಯಾಗಿ ಯೋಚಿಸುವುದು ಪಟ್ಟುಬಿಡದ ವೈರಿಯಾಗಿದೆ. ಹಳೆಯ ಕಹಿ ಘಟನೆ, ಕೆಲಸದ ಒತ್ತಡ, ಭಯ, ಒಂಟಿತನ ಸೇರಿದಂತೆ ನಾನಾ ಕಾರಣಗಳು ಅತಿಯಾಗಿ ಯೋಚನೆಗೆ ಕಾರಣಗಳಾಗಿವೆ.

ಅತಿಯಾದ ಯೋಚನೆಯಿಂದ ಅತಿಯಾದ ಭಯ ಆವರಿಸುತ್ತದೆ. ಇದು ಫೋಬಿಯಾದಂತಹ ಗಂಭೀರ ಸಮಸ್ಯೆಗೆ ನಮ್ಮನ್ನು ದೂಡಬಹುದು. ಹೀಗಾಗಿ ಆರಂಭದಿಂದಲೇ ಇದನ್ನು ತಡೆಗಟ್ಟುವುದು ಒಳ್ಳೆಯದು. ಅತಿಯಾಗಿ ಯೋಚಿಸುವುದನ್ನು ತಡೆಯಲು ಮನಶ್ಶಾಸ್ತ್ರಜ್ಞರು ನೀಡುವ ಪರಿಣಾಮಕಾರಿ​ ತಂತ್ರಗಳು ಇಲ್ಲಿವೆ.

1) ನಿಮ್ಮ ಭಯವನ್ನು ಗುರುತಿಸಿ, ಎದುರಿಸುವುದು :
ಯಾವೆಲ್ಲಾ ವಿಚಾರದಲ್ಲಿ ನಮಗೆ ಭಯ ಕಾಡುತ್ತಿದೆ ಎಂಬುದನ್ನು ಗುರುತಿಸಬೇಕು. ಭಯದ ಕೆಲಸಗಳನ್ನು ಚಾಲೆಂಜ್​ ಆಗಿ ತೆಗೆದುಕೊಳ್ಳಬೇಕು. ಅದರಿಂದ ಯಾವುದೇ ಅಪಾಯಗಳು ಆಗದಿದ್ದಾಗ ಇನ್ನು ಮುಂದೆ ಅದರ ಬಗ್ಗೆ ಯೋಚಿಸುವುದಿಲ್ಲ.

ಇದನ್ನು ಓದಿ : ಚುನಾವಣೆ ಗೆಲ್ಲಲು ಬಾಬಾನಿಂದ ‘ಚಪ್ಪಲಿ ಏಟು’ ತಿಂದ ಕಾಂಗ್ರೆಸ್ ಅಭ್ಯರ್ಥಿ ; ವಿಡಿಯೋ ವೈರಲ್.!

2) ಆಲೋಚನೆಗಳಿಗೆ ಸವಾಲು ಹಾಕಿ, ನಮ್ಮೊಡನೆ ನಾವು ಸ್ಪರ್ಧಿಸುವುದು :
ನಮ್ಮ ತಲೆಯಲ್ಲಿ ಅನಗತ್ಯ ಆಲೋಚನೆಗಳು ಬರುತ್ತಿದ್ದರೆ ಅದಕ್ಕೇ ಸವಾಲು ಹಾಕಬೇಕು. “ನಾನು ಹೇಳಿದಂತೆಲ್ಲಾ ಆಗೊಲ್ಲ, ನಾನು ಹಾಗೆ ಮಾಡೊಲ್ಲ, ಚಾಲೆಂಜಾ?” ಎಂದು ಕೆಟ್ಟ ಆಲೋಚನೆಗಳನ್ನು ಕಾಗದದ ಮೇಲೆ ಬರೆದು ಅದನ್ನು ಹರಿದು ಹಾಕಬೇಕು.

ಇದು ಸಿಂಪಲ್​ ಟ್ರಿಕ್​ ಆದ್ರೂ ಪರಿಣಾಮಕಾರಿ ಕ್ರಿಯೆಯಾಗಿದೆ. ಒಮ್ಮೆ ನೀವು ಪ್ರಯತ್ನಿಸಿ ನೋಡಿ. ನೀವು ಸ್ಪರ್ಧಿಸಬೇಕಿರುವುದು ನಿಮ್ಮೊಡನೆ, ನಿಮ್ಮ ಮನಸ್ಸಿನೊಡನೆ ಮಾತ್ರ. ಇತರರನ್ನು ಸ್ಫರ್ಧಿಗಳಾಗಿ ತೆಗೆದುಕೊಳ್ಳಬೇಡಿ.

3) ಈ ಕ್ಷಣದಲ್ಲಿ ಜೀವಿಸಬೇಕು :
ಕೇವಲ ಪ್ರಸ್ತುತ ಕ್ಷಣದ ಬಗ್ಗೆ ಯೋಚಿಸಿ. ನಿಮ್ಮ ಹೃದಯದ ಬಡಿತವನ್ನು ಕೇಳಿ. ಭೂತಕಾಲದ ಬಗ್ಗೆಯೂ ಯೋಚಿಸಬೇಡಿ, ಭವಿಷ್ಯದ ಬಗ್ಗೆ ಅತಿಯಾಗಿ ಯೋಚಿಸಬೇಡಿ. ವರ್ತಮಾನದಲ್ಲಿ ಮುಳುಗಿ. ಹಿಂದೆ ನಡೆದದ್ದು ಮತ್ತು ಮುಂದೆ ನಡೆಯುವುದು ನಿಮ್ಮ ನಿಯಂತ್ರಣಕ್ಕೆ ಮೀರಿದೆ ಎಂಬುದನ್ನು ತಿಳಿಯಿರಿ. ಪ್ರಸ್ತುತ ಕ್ಷಣವನ್ನು ಸಾರ್ಥಕಗೊಳಿಸಲು, ಈ ಕ್ಷಣದಲ್ಲಿ ಖುಷಿಯಾಗಿರಲು ಏನು ಮಾಡಬಹುದು ಅದನ್ನು ಮಾಡಿ.

4) ಆಲೋಚನೆಗಳ ರಿಪ್ಲೇಸ್ :
ನಾವು ಯಾವುದನ್ನು ಬೇಡ ಎಂದುಕೊಳ್ಳುತ್ತೇವೆಯೇ ಅದೇ ವಸ್ತು ಅಥವಾ ವಿಷಯಗಳ ಕುರಿತ ಆಲೋಚನೆಯೇ ಮನಸ್ಸನ್ನು ತುಂಬುತ್ತಿರುತ್ತದೆ. ಅದರ ಬದಲು ನಮಗೆ ಏನು ಬೇಕು ಎಂದು ಯೋಚಿಸಬೇಕು. ನಕಾರಾತ್ಮಕ, ಸೋಲಿನ ಆಲೋಚನೆಗಳನ್ನು ಸಕಾರಾತ್ಮಕ, ಗೆಲುವಿನ ಆಲೋಚನೆಗಳೊಂದಿಗೆ ಬದಲಿಸಬೇಕು. ಉಸಿರಾಟದ ಗತಿ ಗಮನಿಸುವುದು ಆಲೋಚನೆಗಳನ್ನು ನಿಯಂತ್ರಿಸುವ ಅತ್ಯುತ್ತಮ ಮಾರ್ಗವಾಗಿದೆ.

5) ಪರಿಹಾರಗಳನ್ನು ರೆಕಾರ್ಡ್​ ಮಾಡಿ :
ಯಾವುದೇ ವಿಚಾರದ ಕುರಿತು, ಸಮಸ್ಯೆಯ ಕುರಿತು ನಿಮಗೆ ಪರಿಹಾರ-ಐಡಿಯಾ ಹೊಳೆದರೆ ಅದನ್ನು ಒಂದು ನೋಟ್​ಬುಕ್​​ನಲ್ಲಿ ಬರೆದಿಡಿ. ಪರಿಹಾರಗಳನ್ನು ರೆಕಾರ್ಡ್​ ಮಾಡುವ ಈ ಪೂರ್ವಭಾವಿ ವಿಧಾನವು ಸಮಸ್ಯೆಯನ್ನು ಪರಿಹರಿಸುವ ಕಡೆಗೆ ನಿಮ್ಮ ಗಮನವನ್ನು ಕೇಂದ್ರೀಕರಿಸುತ್ತದೆ ಸವಾಲುಗಳನ್ನು ಜಯಿಸಲು ನಿಮ್ಮ ಸಾಮರ್ಥ್ಯದ ಸ್ಪಷ್ಟವಾದ ದಾಖಲೆಯನ್ನು ಒದಗಿಸುತ್ತದೆ. ಇದನ್ನು ಓದಿ : ಭವಿಷ್ಯ : ಶಾಂತ ಮನಸ್ಸು ಹೊಂದಿರುವ ಟಾಪ್ 4 ರಾಶಿಯವರು ಯಾರು ಗೊತ್ತೇ.?

6) ಹಿಂದಿನದನ್ನು ಬಿಟ್ಟು ಬಿಡುವುದು :
ಅತಿಯಾಗಿ ಯೋಚಿಸುವುದನ್ನು ನಿಗ್ರಹಿಸುವ ಮೂಲಭೂತ ಕ್ರಮಗಳಲ್ಲಿ ಒಂದು ಎಂದರೆ ಅದು ಭೂತಕಾಲವು ಬದಲಾಗುವುದಿಲ್ಲ ಎಂದು ಒಪ್ಪಿಕೊಳ್ಳುವುದು. ಹಿಂದೆ ನಿಮ್ಮ ಜೀವನದಲ್ಲಿ ಏನೇ ನಡೆದಿದ್ದರೂ ಅದನ್ನು ಒಪ್ಪಿಕೊಂಡು ವಾಸ್ತವದಲ್ಲಿ ಬದುಕಬೇಕು. ಭೂತಕಾಲದ ಬಗ್ಗೆ ಯೋಚಿಸುವ ಬದಲು ಅದರಿಂದ ಕಲಿತ ಪಾಠವನ್ನು ಮನದಟ್ಟು ಮಾಡಿಕೊಳ್ಳಿ. ಹಿಂದೆ ನಡೆದ ತಪ್ಪನ್ನೇ ಅವಕಾಶವನ್ನಾಗಿ ಪರಿವರ್ತಿಸಿ. ಭವಿಷ್ಯದಲ್ಲಿ ಹಿಂದೆ ನಡೆದ ಕಹಿ ಘಟನೆ ಮರುಕಳಿಸದಂತೆ ಎಚ್ಚರ ವಹಿಸುವುದು ಒಳಿತು.

7) ಮನಸ್ಸನ್ನು ಮಗುವಿನಂತೆ ಸಂಭಾಳಿಸುವುದು :
ಯಾವುದೇ ಕೆಲಸದ ವಿಚಾರದಲ್ಲಿ, ಹೊಸ ಹವ್ಯಾಸ ರೂಢಿಸಿಕೊಳ್ಳುವ ವಿಚಾರದಲ್ಲಿ ಹಟ ಹಿಡಿಯುವ ನಿಮ್ಮ ಮನಸ್ಸನ್ನು ಮಗುವಿನ ರೀತಿ ಸಂಭಾಳಿಸಬೇಕು. ನೀವೂ ನಿಮ್ಮ ಮನಸ್ಸಿನೊಂದಿಗೆ ಪದೇಪದೆ ಒರಟಾಗಿ ನಡೆದುಕೊಂಡರೆ ಅದು ಬಂಡೇಳುತ್ತೆ. ನಿಮ್ಮ ನಿಯಂತ್ರಣದಿಂದ ಜಾರುತ್ತೆ. ನೀವು ಎಲ್ಲಿಗೇ ಹೋದರೂ ನಿಮ್ಮ ಮನಸ್ಸು ಸದಾ ನಿಮ್ಮೊಂದಿಗೇ ಇರುತ್ತೆ ಅಲ್ವಾ.