ವೈರಲ್ ಆಗ್ತಿದೆ ಕಾಜೋಲ್ ಡೀಪ್‍ಫೇಕ್ ವಿಡಿಯೋ.!

ಜನಸ್ಪಂದನ ನ್ಯೂಸ್, ಡೆಸ್ಕ್ : ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್​ ನಂತರ ಇದೀಗ ಬಾಲಿವುಡ್​ ನಟಿ ಕಾಜೋಲ್​ ಅವರ ಡೀಪ್​ಫೇಕ್​ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಮಹಿಳೆಯೊಬ್ಬರು ಕ್ಯಾಮರಾ ಮುಂದೆ ಬಟ್ಟೆ ಬದಲಾಯಿಸುತ್ತಿದ್ದು, ಆಕೆಯ ಮುಖಕ್ಕೆ ಕಾಜೋಲ್​ ಅವರ ಮುಖವನ್ನು ಎಡಿಟ್​ ಮಾಡಲಾಗಿದೆ.

ವೈರಲ್​ ಆಗಿರುವ ವಿಡಿಯೋವನ್ನು ಫ್ಯಾಕ್ಟ್​ ಚೆಕ್​ ಮಾಡಿಸಿದ್ದು, ಅಸಲಿ ಮಹಿಳೆಯನ್ನು ಬ್ರಿಟಿಷ್​ ಸೋಶಿಯಲ್​ ಮೀಡಿಯಾ ಪ್ರಭಾವಿ ರೋಸಿ ಬ್ರೀನ್​​ ಎಂದು ಗುರುತಿಸಲಾಗಿದೆ.

ಇದನ್ನು ಓದಿ : ಭೀಕರ ರಸ್ತೆ ಅಪಘಾತ : ಬೆಳಗಾವಿ ಮೂಲದ ಇಬ್ಬರ ಸಾವು (ವಿಡಿಯೋ).

ರೋಸಿ ಬ್ರೀನ್​ ಅವರು 2023ರ ಜೂನ್​ 5ರಂದು ‘ಗೆಟ್​ ರೆಡಿ ವಿತ್​ ಮಿ’ (GRWM) ಟ್ರೆಂಡ್​ನ ಭಾಗವಾಗಿ ಟಿಕ್​ ಟಾಕ್​ನಲ್ಲಿ ತಮ್ಮ ವಿಡಿಯೋವನ್ನು ಹಂಚಿಕೊಂಡಿದ್ದರು.

ಸದ್ಯ ಅದೇ ವಿಡಿಯೋಗೆ ಆರ್ಟಿಫಿಶಿಯಲ್​ ಇಂಟಲಿಜೆನ್ಸ್​ ಬಳಸಿ, ರೋಸಿಯ ಮುಖಕ್ಕೆ ಕಾಜೋಲ್​ ಅವರ ಮುಖವನ್ನು ಎಡಿಟ್​ ಮಾಡಲಾಗಿದೆ.

ಇದನ್ನು ಓದಿ : ಬ್ರೇಕಪ್ ಮಾಡಿಕೊಂಡ ಯುವತಿಗೆ ಯುವಕ ಮಾಡಿದ್ದೇನು.?

ಖ್ಯಾತ ಬಾಲಿವುಡ್ ನಟಿ ಕ್ಯಾಮರಾ ಮುಂದೆ ಬಟ್ಟೆ ಬದಲಾಯಿಸುತ್ತಿರುವಂತೆ ಬಿಂಬಿಸಲಾದ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.