ಭಾರತ ಫೈನಲ್‌ಗೆ ತಲುಪಿರುವುದನ್ನು ಜೀರ್ಣಿಸಿಕೊಳ್ಳಲಾಗದೇ ಹೊಟ್ಟೆ ಉರಿತಿದೆ ಈ ನಟಿಗೆ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತವು ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದೆ. ಸದ್ಯ ಫೈನಲ್ ತಲುಪಿರುವ ಟೀಂ ಇಂಡಿಯಾಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ‌.

ಆದರೆ ಟೀಂ ಇಂಡಿಯಾವನ್ನು ಯಾವಾಗಲೂ ತೆಗಳುವ ಪಾಕಿಸ್ತಾನಿ ನಟಿ ಸೆಹರ್ ಶಿನ್ಸಾರಿ, ಮತ್ತೊಮ್ಮೆ ಭಾರತದ ಬಗೆಗೆ ತಮಗಿರುವ ಹೊಟ್ಟೆಉರಿಯನ್ನು ಹೊರಹಾಕಿದ್ದಾರೆ. ಇದನ್ನು ಓದಿ : ನಾನು ಕೊಟ್ಟ ಲಿಸ್ಟ್​​ ಮಾತ್ರ ಕೊಡಿ :  ಸಿಎಂ ಸಿದ್ಧರಾಮಯ್ಯ ಪುತ್ರನ ಎಡವಟ್ಟು ವಿಡಿಯೋ ವೈರಲ್.!

ಭಾರತ 2023ರ ವಿಶ್ವಕಪ್‌ನ ಫೈನಲ್‌ಗೆ ತಲುಪಿರುವುದನ್ನು ನನಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸೆಹರ್ ಶಿನ್ಸಾರಿ ಟ್ವಿಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಭಾರತ ಎಲ್ಲದರಲ್ಲೂ ಪಾಕಿಸ್ತಾನಕ್ಕಿಂತ ಏಕೆ ಮುಂದಿದೆ? ಎಂದು ಟ್ವೀಟ್ ಮಾಡುವ ಮೂಲಕ ಶಿನ್ಸಾರಿ ಮತ್ತೆ ತಮ್ಮ ಕುತಂತ್ರಿ ಬುದ್ದಿಯನ್ನು ತೋರಿಸಿದ್ದಾರೆ. ಅಷ್ಟೆ ಅಲ್ಲದೆ ಬಿಸಿಸಿಐ ಮತ್ತು ಬಿಜೆಪಿ ಶೀಘ್ರದಲ್ಲೇ ಸರ್ವನಾಶ ಆಗುತ್ತದೆ ಎಂಬ ಉದ್ಧಟತನದ ಪೋಸ್ಟ್ ಕೂಡ ವೈರಲ್ ಆಗುತ್ತಿದೆ. ಇದನ್ನು ಓದಿ : ಇಂಡಿಯಾ ವಿಶ್ವಕಪ್ ಗೆದ್ದರೆ ಬೀಚ್‌ನಲ್ಲಿ ಬೆತ್ತಲಾಗುವೆ ಎಂದ ನಟಿ.!

ಇನ್ನೂ ಭಾರತದ ಕ್ರಿಕೆಟ್ ಅಭಿಮಾನಿಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯವ ಹಾಗೆ ನಟಿಯ ಕಾಲೆಳೆಯುತ್ತಿದ್ದಾರೆ. ನಿಮ್ಮ ನರಿ ಬುದ್ದಿ ನಿಮ್ಮನ್ನೇ ಕೊಲ್ಲುತ್ತದೆ. ಭಾರತ ತಂಡದ ಮೇಲೆ ಈ ರೀತಿಯ ದಾಳಿ ನಡೆದಿರುವುದು ಇದೇ ಮೊದಲಲ್ಲ. ನಮ್ಮ ವಿರುದ್ಧ ನೀವು ಏನೇ ಪಿತೂರಿ ಮಾಡಿದರೂ ಗೆಲುವು ಸಾಧಿಸಲು ಆಗಲ್ಲ ಎಂದು ಕಮೆಂಟ್‌ಗಳನ್ನು ಮಾಡಿದ್ದಾರೆ.