ಜನಸ್ಪಂದನ ನ್ಯೂಸ್, ಡೆಸ್ಕ್ : ಎಲ್ಲೆಡೆ ದೀಪಾವಳಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ರಜೆಗೆ ತಮ್ಮ ಮನೆಗಳಿಗೆ ಹೋಗದೇ ಹಾಸ್ಟೆಲ್‌ನಲ್ಲಿ ಉಳಿದ ವಿದ್ಯಾರ್ಥಿಗಳು ಆ ಕಟ್ಟಡದಿಂದ ಈ ಕಟ್ಟಡಕ್ಕೆ ಒಂದಾದ ಮೇಲೆ ಒಂದರಂತೆ ರಾಕೆಟ್ ಪಟಾಕಿಯನ್ನು ಹಾರಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಘರ್ ಕಲೇಶ್ ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದೆ. 7 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಸ್ಟಷ್ಟತೆ ಇಲ್ಲ. ಇದನ್ನು ಓದಿ : ಚಲಿಸುತ್ತಿದ್ದ ಬೈಕ್‌ನಲ್ಲಿ ಪಟಾಕಿ ಇಟ್ಟು ವ್ಹೀಲಿಂಗ್ ಮಾಡಿದ ಪುಂಡ ; ಮುಂದೆನಾಯ್ತು ಈ ವಿಡಿಯೋ ನೋಡಿ.!
ವಿಡಿಯೋದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳು ತಾವಿದ್ದ ಕಟ್ಟಡದಿಂದ ಸಮೀಪದ ಕಟ್ಟಡಕ್ಕೆ ಪರಸ್ಪರ ರಾಕೆಟ್ ಪಟಾಕಿಗಳನ್ನು ಹಾರಿಸುತ್ತಿರುವುದನ್ನು ಕಾಣಬಹುದಾಗಿದೆ.
ಇದು ಒಂದು ರೀತಿಯ ಯುದ್ಧದಂತೆ ಭಾಸವಾಗಿದೆ. ಒಬ್ಬರಾದ ಮೇಲೆ ಒಬ್ಬರು ಪರಸ್ಪರ ಆ ಕಟ್ಟಡದಿಂದ ಈ ಕಟ್ಟಡಕ್ಕೆ ಪಟಾಕಿ ಹಾರಿಸುತ್ತಿದ್ದು, ಯುದ್ಧದಲ್ಲಿ ರಾಕೆಟ್ ದಾಳಿಯಂತೆ ಗೋಚರಿಸುತ್ತಿದೆ.
19 ಸೆಕೆಂಡ್‌ಗಳ ಈ ವಿಡಿಯೋ ನೋಡಿದ ಅನೇಕರು ಇಸ್ರೇಲ್ ಹಮಾಸ್ ಯುದ್ಧವನ್ನು ಭಾರತದಲ್ಲಿ ರಿಕ್ರಿಯೇಟ್ ಮಾಡಲಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಈ ವೀಡಿಯೋ ನಮಗೆ ಹಾಸ್ಟೆಲ್ ದಿನಗಳನ್ನು ನೆನಪಿಸಿತು ಎಂದು ಕೆಲವರು ಕಮೆಂಟ್ ಮಾಡಿದರೆ, ಮತ್ತೆ ಕೆಲವರು ಬಹುಶಃ ಹಾಸ್ಟೆಲ್‌ನಲ್ಲಿ ವಾರ್ಡನ್ ಇರಲಿಲ್ಲ ಎನಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನು ಓದಿ : ವಿಡಿಯೋ : ಬಸ್‌ನಲ್ಲಿ ಸೀಟ್‌ಗಾಗಿ ಇಬ್ಬರು ನಾರಿಯರ ಮಧ್ಯೆ ಜಗಳ ; ಚಪ್ಪಲಿಯಿಂದ ಹೊಡೆದಾಟ.!
Kalesh b/w Two groups of Hostel boys with Crackers during Diwali Celebration pic.twitter.com/6AUjNIB9FB
— Ghar Ke Kalesh (@gharkekalesh) November 13, 2023