ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ರೈಲ್ವೆ ಬೋಗಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ.!

ಜನಸ್ಪಂದನ ನ್ಯೂಸ್, ಕಲಬುರಗಿ : ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್‌ನಲ್ಲಿ (Plat form) ನಿಂತಿದ್ದ ರೈಲ್ವೆ ಬೋಗಿಗೆಯೇ  ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ (Wadi) ಪಟ್ಟಣದ ರೈಲ್ವೆ ಜಂಕ್ಷನ್‌ನಲ್ಲಿ ನಡೆದಿದೆ‌‌.

ನೇಣಿಗೆ ಶರಣಾದ ವ್ಯಕ್ತಿಯನ್ನು ಸೋಲಾಪುರ (Solapur) ನಿವಾಸಿಯಾದ 38 ವರ್ಷದ ಸಿದ್ದಪ್ಪ ದೋಶಟ್ಟಿ ಎಂದು ತಿಳಿದು ಬಂದಿದೆ. ಇದನ್ನು ಓದಿ : ಪಟಾಕಿ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ : 9 ಮಂದಿ ಸಜೀವ ದಹನ ; 7 ಅಂಗಡಿಗಳು ಭಸ್ಮ.!

ವಾಡಿ ರೈಲ್ವೆ ಜಂಕ್ಷನ್‌ನಲ್ಲಿ ನಿಲ್ಲಿಸಲಾಗಿದ್ದ ಕರ್ಮಚಾರಿ ರೈಲ್ವೆ ಬೋಗಿಗೆ ಸಿದ್ದಪ್ಪ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಮೃತ ಸಿದ್ದಪ್ಪ ವಾಡಿ ರೈಲ್ವೆಯ ಎಸ್‌.ಎನ್‌.ಟಿ ವಿಭಾಗದಲ್ಲಿ ಕೆಲಸ (Work) ಮಾಡುತ್ತಿದ್ದ ಎನ್ನಲಾಗಿದೆ.

ಮೃತ ಸಿದ್ದಪ್ಪ ಕೆಲ ದಿನಗಳಿಂದ ಕರ್ತವ್ಯಕ್ಕೆ ಗೈರಾಗಿ ಅಕ್ಟೋಬರ್ 17 ರಂದು ನಾಪತ್ತೆಯಾಗಿದ್ದ. ನಂತರ ಪೊಲೀಸರು ಆತನನ್ನು ಪತ್ತೆ ಮಾಡಿ ವಾಡಿಯಲ್ಲಿದ್ದ ಪೋಷಕರಿಗೆ ಒಪ್ಪಿಸಿದ್ದರು.

ಆದರೆ ಮೃತ ಸಿದ್ದಪ್ಪ ನಿನ್ನೆ (ದಿ.12) ವಾಡಿ ರೈಲ್ವೆ ಪ್ಲಾಟ್ ಫಾರ್ಮ್ 1 ರಲ್ಲಿ ಕರ್ಮಚಾರಿ ರೈಲು ಬೋಗಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ‌. ಇದನ್ನು ಓದಿ : ಗೋಕಾಕ : ಯುವಕನ ಬರ್ಬರ ಹತ್ಯೆ ; ಆರೋಪಿ ಮನೆ ಮೇಲೆ ಕಲ್ಲು ತೂರಾಟ.!

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.