ಕನ್ನಡದ ಸ್ವಾಮೀಜಿ ಎಂದೇ ಖ್ಯಾತಿ ಪಡೆದಿದ್ದ ಅಲ್ಲಮಪ್ರಭು ಶ್ರೀಗಳು ಲಿಂಗೈಕ್ಯ.!

ಜನಸ್ಪಂದನ ನ್ಯೂಸ್, ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಚಿಂಚಣಿ ಮಠದ ಅಲ್ಲಮಪ್ರಭು (Allamapravhu) ಶ್ರೀಗಳು ಅನಾರೋಗ್ಯದಿಂದ ಇಂದು ಬೆಳಗ್ಗೆ ಲಿಂಗೈಕ್ಯರಾಗಿದ್ದಾರೆ.

ಗಡಿಭಾಗದಲ್ಲಿ ಕನ್ನಡದ ಸ್ವಾಮೀಜಿ ಎಂದೇ ಖ್ಯಾತಿ ಗಳಿಸಿದ ಚಿಂಚಣಿ ಶ್ರೀಗಳು, ಹಲವು ದಶಕಗಳಿಂದ ಕನ್ನಡದ ಕುರಿತು ಕಾರ್ಯಕ್ರಮಗಳನ್ನು ನಡೆಸಿ ರಾಜ್ಯದ ಗಮನ ತಮ್ಮತ್ತ ಸೆಳೆದಿದ್ದರು.  

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದಲ್ಲಿ ಇರುವ ಚಿಂಚಣಿ ಸಿದ್ದಪ್ರಭು ಸಂಸ್ಥಾನ ಮಠವು ಕನ್ನಡದ ಮಠವೆಂದೇ ಖ್ಯಾತಿ ಪಡೆದಿದೆ. ಶ್ರೀಗಳ ಒಂದು ಕಠಿಣ ಪರಿಶ್ರಮದಿಂದಲೇ ಇಂದು ನಿಪ್ಪಾಣಿಯಂತ ಮರಾಠಾ ಪ್ರಾಭಲ್ಯದ ಪ್ರದೇಶದಲ್ಲೂ ಕನ್ನಡ ಉಳಿದು ಬೆಳದಿದೆ. ಇದನ್ನೂ ಓದಿ : ಟೀ ಅಥವಾ ಕಾಫಿ ಕುಡಿಯೋಕ್ಕಿಂತ ಎಷ್ಟು ಗಂಟೆ ಮುಂಚೆ ನೀರು ಕುಡಿಯಬೇಕು.? 

ಶ್ರೀಗಳು ರಾಜ್ಯೋತ್ಸವದ ನಿಮಿತ್ಯ ನಡೆಯುವ ಕಾರ್ಯಕ್ರಮದಲ್ಲಿಯೋ ಸಹ ಆ ಭಾಗದ ಅನೇಕ ಕನ್ನಡ ಪ್ರೇಮಿಗಳನ್ನು ಗುರುತಿಸಿ ಸತ್ಕರಿಸುತ್ತಿದ್ದರು. ಶೃಇಗಳು ಯಾವಾಗಲು ಕನ್ನಡಕ್ಕಾಗಿ ಕೈ ಎತ್ತಿದವರಾಗಿದ್ದರು. ಹೀಗಾಗಿಯೇ ಇಂದು ಅವರನ್ನು “ಕನ್ನಡದ ಸ್ವಾಮೀಜಿ” ಎಂದು ಕರೆಯುತ್ತಿದ್ದರು.

ಅನಾರೋಗ್ಯದ ಹಿನ್ನೆಲೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಸ್ವಾಮೀಜಿ ನಿಧನರಾದರು.

ಸ್ವಾಮೀಜಿಗಳ ಅಗಲಿಕೆಯಿಂದ ಭಕ್ತಸಾಗರ ಶೋಕಸಾಗರದಲ್ಲಿ ಮುಳುಗಿದೆ.