ಕಾಸ್ಮೆಟಿಕ್ ಸರ್ಜರಿ ವೇಳೆ 4 ಬಾರಿ ಹೃದಯಾಘಾತ ; ಮಾಡೆಲ್ ಸಾವು.!

ಜನಸ್ಪಂದನ ನ್ಯೂಸ್, ಡೆಸ್ಕ್ : ನಟಿಯರಲ್ಲಿ ಕೆಲವರು ಸೌಂದರ್ಯ ಹೆಚ್ಚಿಸಿಕೊಳ್ಳಲು ಸರ್ಜರಿ ಮಾಡಿಕೊಳ್ಳುತ್ತಾರೆ. ಮೂಗು, ಕೆನ್ನೆ, ತುಟಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಅಂದ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಇದು ಡೇಂಜರ್. ಹಾಗಿದ್ದರೂ ಈ ಪ್ರಯತ್ನ ಮಾಡುವವರ ಸಂಖ್ಯೆ ಕಡಿಮೆ ಆಗಿಲ್ಲ. ಇದೇ ರೀತಿಯ ಪ್ರಯತ್ನದಲ್ಲಿದ್ದ ಪ್ರಸಿದ್ಧ ಸೆಲೆಬ್ರಿಟಿಯೊಬ್ಬರು ಸಣ್ಣ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ.

ಮೃತಪಟ್ಟವರು ಬ್ರೆಜಿಲ್​​ನ ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್ ಲುವಾನಾ ಆಂಡ್ರೇಡ್ (29) ಎಂದು ವರದಿಯಾಗಿದೆ. ಇದನ್ನು ಓದಿ : ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದ ಗ್ಯಾಂಗ್​ಸ್ಟರ್​ನನ್ನು ಹೊಡೆದು ಕೊಂದ ವೈದ್ಯರು.!

ಕಾಸ್ಮೆಟಿಕ್ ಸರ್ಜರಿ ವೇಳೆ ಲುವಾನಾ ಹೃದಯಾಘಾತಕ್ಕೆ ಒಳಗಾದರು. ಬೆಚ್ಚಿಬೀಳಿಸುವ ವಿಚಾರ ಎಂದರೆ ಶಸ್ತ್ರಚಿಕಿತ್ಸೆ ವೇಳೆ ಲುವಾನಾಗೆ ನಾಲ್ಕು ಬಾರಿ ಹೃದಯಾಘಾತ ಆಗಿತ್ತು ಎಂದು ವರದಿಯಾಗಿದೆ.

ಆಸ್ಪತ್ರೆಯಲ್ಲಿ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ ವೇಳೆ ಲುವಾನಾಗೆ ಉಸಿರಾಟದ ತೊಂದರೆ ಆಗಿದೆ. ಆ ಬಳಿಕ ನಾಲ್ಕು ಬಾರಿ ಹೃದಯಾಘಾತ ಆಗಿದೆ. ಅವರನ್ನು ವೈದ್ಯರು ತಕ್ಷಣ ಐಸಿಯು ವಾರ್ಡ್​ಗೆ ಸ್ಥಳಾಂತರಿಸಿದ್ದಾರೆ. ಆದರೆ ವೈದ್ಯರು ಲುವಾನಾ ಅವರ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ವರದಿಯಿಂದ ತಿಳಿದುಬಂದಿದೆ

ಸರ್ಜನ್ ಡಿಯೋವಾನೆ ರುವಾರೊ ಪ್ರಕಾರ, ಲುವಾನಾ ಆಂಡ್ರೇಡ್ ಆರೋಗ್ಯ ಸ್ಥಿತಿ ಉತ್ತಮವಾಗಿತ್ತು. ಸಾಕಷ್ಟು ಪೂರ್ವ ಶಸ್ತ್ರಚಿಕಿತ್ಸಾ ವಿಧಾನವನ್ನು ಸಹ ನಡೆಸಲಾಗಿತ್ತು. ಹೀಗಿದ್ದೂ ದುರದೃಷ್ಟವಶಾತ್, ಈ ಸಾವು ಸಂಭವಿಸಿದೆ, ಇದು ನಮಗೆ ದುಃಖ ತಂದಿದೆ ಎಂದಿದ್ದಾರೆ. ಈ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ಮಾರಣಾಂತಿಕ ತೊಡಕುಗಳನ್ನು ಉಂಟುಮಾಡಬಹುದು ಎಂದು ಅವರು ಹೇಳಿದರು ಎಂದು ವರದಿಯಿಂದ ತಿಳಿದುಬಂದಿದೆ.