ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದ ಗ್ಯಾಂಗ್​ಸ್ಟರ್​ನನ್ನು ಹೊಡೆದು ಕೊಂದ ವೈದ್ಯರು.!

ಜನಸ್ಪಂದನ ನ್ಯೂಸ್, ಡೆಸ್ಕ್ : ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ಹೋಗಿದ್ದ ಗ್ಯಾಂಗ್​ಸ್ಟರ್​ನನ್ನು ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಸೇರಿ ಹೊಡೆದು ಹತ್ಯೆ ಮಾಡಿದ ಘಟನೆ ಬಿಹಾರದ ಬೇಗುಸರಾಯ್​ನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ವೈದ್ಯ ಅಜಿತ್ ಪಾಸ್ವಾನ್ ಎಂಬಾತನ ಬಳಿ ಗ್ಯಾಂಗ್​ಸ್ಟರ್ ಚಂದನ್ ಕುಮಾರ್ ಚಿಕಿತ್ಸೆಗೆಂದು ಹೋಗಿದ್ದನು. ಈ ವೇಳೆ ವೈದ್ಯರೊಂದಿಗೆ ವಾಗ್ವಾದ ನಡೆದು ಆತನನ್ನು ವೈದ್ಯರು ಹಾಗೂ ಆಸ್ಪತ್ರೆಯ ಇತರೆ ಸಿಬ್ಬಂದಿ ಸೇರಿ ಹೊಡೆದು ಕೊಂದಿದ್ದಾರೆ ಎಂದು ಎಸ್​ಪಿ ಯೋಗೇಂದ್ರ ಕುಮಾರ್ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

ಹತ್ಯೆಗೆ ಸಂಚು ರೂಪಿಸಿ ಗ್ಯಾಂಗ್​ಸ್ಟರ್​ನನ್ನು ಕೊಲ್ಲಲು ಹರಿತವಾದ ವಸ್ತುಗಳನ್ನು ಬಳಸಿದ್ದರು. ಇದನ್ನು ಓದಿ : ಗೋಕಾಕ : ನಡುರಸ್ತೆಯಲ್ಲೇ ಯುವಕನ ಬರ್ಬರ ಹತ್ಯೆ.!

ಇನ್ನು ಘಟನೆಯ ಬಳಿಕ ಆ ಗ್ಯಾಂಗ್​ಸ್ಟರ್​ನ ಅನುಯಾಯಿಗಳು ಆಸ್ಪತ್ರೆ ಹಾಗೂ ವೈದ್ಯರಿಗೆ ಸಂಬಂಧಿಸಿದ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.

ಡಿಎಸ್​ಪಿ ಅಮಿತ್ ಕುಮಾರ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದ್ದು, ಘಟನೆಯಲ್ಲಿ ಭಾಗಿಯಾಗಿರುವ ವೈದ್ಯರು ಹಾಗೂ ಕಾಂಪೌಂಡರ್​ನನ್ನು ಬಂಧಿಸಲು ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.