ವಿಮಾನದಲ್ಲಿ ಮಹಿಳೆಯ ಖಾಸಗಿ ಅಂಗಗಳನ್ನು ಮುಟ್ಟಿ ಸಹ ಪ್ರಯಾಣಿಕನಿಂದ ಕಿರುಕುಳ ; ದೂರು ದಾಖಲು.!

ಜನಸ್ಪಂದನ ನ್ಯೂಸ್, ಬೆಂಗಳೂರು : ಪಕ್ಕದ ಸೀಟ್​ನಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರು ನಿದ್ರಿಸುತ್ತಿದ್ದ ವೇಳೆ ಅವರ ಖಾಸಗಿ ಅಂಗಗಳನ್ನು ಮುಟ್ಟಿ ಪುರುಷ ಪ್ರಯಾಣಿಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ.

ಇನ್ನೂ ಆತನ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಂಗನಾಥ (50) ಕಿರುಕುಳ ನೀಡಿದ ಸಹ ಪ್ರಯಾಣಿಕ ಎಂದು ತಿಳಿದುಬಂದಿದೆ. ಇದನ್ನು ಓದಿ : ದೂರು ನೀಡಲು ಬಂದ ಮಹಿಳೆಯರ ಮುಂದೆಯೇ ಅರೆಬೆತ್ತಲಾಗಿ ಕುಳಿತ ಪೊಲೀಸ್ ಅಧಿಕಾರಿ ; ವಿಡಿಯೋ ವೈರಲ್.!

ರಾತ್ರಿ ಲುಪ್ತಾನ್ಸ ಏರ್ಲೈನ್ಸ್​​ನ LH 0754 ವಿಮಾನ ಪ್ರಾಂಕ್​ಫರ್ಟ್​​​ನಿಂದ ಬೆಂಗಳೂರಿಗೆ ಆಗಮಿಸುತ್ತಿತ್ತು. ಈ ವಿಮಾನದಲ್ಲಿ ಆಂದ್ರಪ್ರದೇಶದ ತಿರುಪತಿ ಮೂಲದ ಮಹಿಳೆ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು.

ಪ್ರಯಾಣ ಪ್ರಾರಂಭವಾದ 4 ಗಂಟೆ ಬಳಿಕ ಮಹಿಳೆ ನಿದ್ರೆಗೆ ಜಾರಿದ್ದಾರೆ. ರಾತ್ರಿ ಸುಮಾರು 11:45ಕ್ಕೆ ಮಹಿಳೆ ಎಚ್ಚರಗೊಂಡಾಗ ಪಕ್ಕದಲ್ಲಿ ಕುಳಿತಿದ್ದ ರಂಗನಾಥ್​ ಅವರ ಖಾಸಗಿ ಅಂಗವನ್ನು ಮುಟ್ಟುತ್ತಿದ್ದನು. ಮಹಿಳೆ ಆತನ ಕೈಯನ್ನು ತೆಗೆದು ಮತ್ತೆ ನಿದ್ರೆಗೆ ಜಾರಿದರು.

ಬಳಿಕ ಮಧ್ಯರಾತ್ರಿ 12:00 ಗಂಟೆಗೆ ಮಹಿಳೆಗೆ ಎಚ್ಚರವಾದಾಗ ರಂಗನಾಥ ಮತ್ತೆ ಆಕೆಯ ಖಾಸಗಿ ಅಂಗವನ್ನು ಮುಟ್ಟುತ್ತಿದ್ದನು. ಈ ವೇಳೆ ಮಹಿಳೆ ರಂಗನಾಥ್​ ಕೈಯನ್ನು ಎಳೆದು ವಿಮಾನ ಸಿಬ್ಬಂದಿಗಳ ಗಮನಕ್ಕೆ ತಂದಿದ್ದಾರೆ. ಇದನ್ನು ಓದಿ : ಟೀ ಕುಡಿಯಲು ಬಂದ ರೌಡಿ ಶೀಟರ್ ಬರ್ಬರ ಹತ್ಯೆ.!

ಬಳಿಕ ಮಹಿಳೆ ಬೇರೆ ಸೀಟಿನಲ್ಲಿ ಹೋಗಿ ಕುಳಿತರು. ವಿಮಾನದಲ್ಲಿ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ರಂಗನಾಥ್ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.