ದೂರು ನೀಡಲು ಬಂದ ಮಹಿಳೆಯರ ಮುಂದೆಯೇ ಅರೆಬೆತ್ತಲಾಗಿ ಕುಳಿತ ಪೊಲೀಸ್ ಅಧಿಕಾರಿ ; ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಪೊಲೀಸ್ ಅಧಿಕಾರಿ ಠಾಣೆಯಲ್ಲಿ ದೂರು ಪಡೆಯುವ ವೇಳೆ ಬನಿಯನ್​ ಮತ್ತು ಟವೆಲ್​ ಸುತ್ತಿಕೊಂಡು ಅರೆಬೆತ್ತಲೆ ಸ್ಥಿತಿಯಲ್ಲಿ ಕಂಡುಬಂದಿದ್ದು, ಇಲಾಖೆ ಅವರನ್ನು ಸಸ್ಪೆಂಡ್​ ಮಾಡಿ ತನಿಖೆಗೆ ಆದೇಶಿಸಿದೆ.

ಅಮಾನತಾದವರು ಕೌಶಂಬಿ ಜಿಲ್ಲೆಯ ಕೊಖ್ರಾಜ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಘಿಯಾ ಹೊರಠಾಣೆಯ ಅಧಿಕಾರಿ ರಾಮ್ ನಾರಾಯಣ್ ಸೋಂಕರ್ ಎಂದು ವರದಿಯಾಗಿದೆ.

ಮಹಿಳೆಯರು ಕೌಟುಂಬಿಕ ಕಲಹದ ವಿಚಾರವಾಗಿ ದೂರು ನೀಡಲು ಬಂದ ವೇಳೆ ಈ ಅಧಿಕಾರಿ​ ಸಮವಸ್ತ್ರ ಬಿಟ್ಟು ಬನಿಯನ್​ ಮತ್ತು ಟವೆಲ್​ ಸುತ್ತಿಕೊಂಡು ಕುಳಿತಿದ್ದರು. ಇದನ್ನು ಓದಿ : ಚೆಕ್ ಮೂಲಕ ಲಂಚ ಪಡೆಯುತ್ತಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ.!

ಅಲ್ಲದೇ ಅವರು ಅರೆಬೆತ್ತಲೆಯಲ್ಲಿ ಕುಳಿತು ಮಹಿಳೆಯರ ದೂರು ಆಲಿಸುತ್ತಿದ್ದರು. ಅಧಿಕಾರಿಯ ಅವಸ್ಥೆ ಕಂಡು ಮಹಿಳೆಯರು ಕೂಡ ದಿಗ್ಭ್ರಮೆಗೊಂಡಿದ್ದರು.

ಸದ್ಯ ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವಿಡಿಯೋ ವೈರಲ್​ ಆಗಿದೆ. ಇದನ್ನು ಓದಿ : ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ.!

ಮೇಲಾಧಿಕಾರಿಗಳು ರಾಮ್ ನಾರಾಯಣ್ ವಿರುದ್ಧ ಕ್ರಮ ಜರುಗಿಸಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ಹುದ್ದೆಯಿಂದ ಅಮಾನತು ಮಾಡಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.