ಅಶ್ಲೀಲ ವಿಡಿಯೋ ತಯಾರಿಸಿ ಬಿಜೆಪಿ ಕಾರ್ಯಕರ್ತೆಗೆ ಬ್ಲ್ಯಾಕ್ ಮೇಲ್.!

ಜನಸ್ಪಂದನ ನ್ಯೂಸ್, ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಬಿಜೆಪಿ ಕಾರ್ಯಕರ್ತೆಯೊಬ್ಬರ ಅಶ್ಲೀಲ ವಿಡಿಯೋ ತಯಾರಿಸಿ ತಾನೊಬ್ಬ ಖಾಸಗಿ ಚಾನೆಲ್ ವರದಿಗಾರ ಎಂದು ಹೇಳಿಕೊಂಡು ವ್ಯಕ್ತಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.

ಖಾಸಗಿ ಶಾಲಾ ಶಿಕ್ಷಕಿ ಹಾಗೂ ಜಮಖಂಡಿಯ ಬಿಜೆಪಿ ಕಾರ್ಯಕರ್ತೆಯಾಗಿರುವ ಮಹಿಳೆಗೆ ಆರೋಪಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ.

ನಾನು ಖಾಸಗಿ ಚಾನಲ್‌ ವರದಿಗಾರ, ನನ್ನ ಬಳಿ ನಿಮ್ಮ ರಾಸಲೀಲೆ ವಿಡಿಯೊ‌ ಇದೆ, ನೀವು ನನ್ನನ್ನು ಭೇಟಿಯಾಗಿ, ನಾವು‌ ನೀವು ಕೂಡಿ‌ ಸರಿ‌ ಮಾಡಿಕೊಳ್ಳೋಣ. ಸ್ವಲ್ಪ ದುಡ್ಡು ಖರ್ಚಾಗುತ್ತದೆ. ಇದನ್ನು ಓದಿ : ಲವ್, ಸೆಕ್ಸ್, ದೋಖಾ : ಮದುವೆ ಮಂಟಪಕ್ಕೆ ಹೋಗುವಾಗ ಮಾರ್ಗಮಧ್ಯೆ ಎಸ್ಕೇಪ್ ಆದ ಯುವಕ.!

ಒಂದು ವೇಳೆ ಇದಕ್ಕೊಪ್ಪದಿದ್ದರೆ ವಿಡಿಯೋ ವೈರಲ್‌ ಮಾಡಿ ನಿಮ್ಮ ಮಾನ ಮರ್ಯಾದೆ ತೆಗೆಯುತ್ತೇನೆ. ಹಣ ರೆಡಿ ಮಾಡಿಕೊಂಡು ಸರಿ‌ಮಾಡಿಕೊಳ್ಳಿ‌ ಎಂದು ಕರೆ ಮಾಡಿ ಬ್ಲ್ಯಾಕ್ ‌ಮೇಲ್‌ ಮಾಡಿದ್ದಾನೆ ಎನ್ನಲಾಗಿದೆ.

ಬಿಜೆಪಿ ನಾಯಕಿಯ ಭಾವಚಿತ್ರದ ಕಣ್ಣಿಗೆ ಕಪ್ಪು ಪಟ್ಟಿ ಅಂಟಿಸಿ ವಿಡಿಯೋದಲ್ಲಿ ಮಾಡಲಾಗಿದ್ದು, ನಂತರ‌ ಯಾವುದೋ ಪೋರ್ನ್ ‌ವಿಡಿಯೋವನ್ನು ಬ್ಲರ್ ಮಾಡಿ. ಅವರದ್ದೇ ಎಂಬಂತೆ ಬಿಂಬಿಸುವ ವಿಡಿಯೋವನ್ನು ಆರೋಪಿ ತಯಾರಿಸಿದ್ದಾನೆ ಎನ್ನಲಾಗಿದೆ.

ಈ ವಿಡಿಯೋಗೆ ಅಶ್ಲೀಲ ಹಾಡನ್ನೂ ಅಳವಡಿಸಿ ಬ್ಲಾಕ್‌ಮೇಲ್ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಇದನ್ನು ಓದಿ : ಆ್ಯಪ್ ಮೂಲಕ ಲೈವ್ ಸೆಕ್ಸ್ ಶೋ : ಪೊಲೀಸ್ ದಾಳಿ ವೇಳೆಯಲ್ಲೂ ನಡೆಯುತ್ತಿತ್ತು ಲೈವ್ ಶೋ.!

ಘಟನೆ ಸಂಬಂಧ ಅಧ್ಯಕ್ಷೆ ಅಶ್ಲೀಲ ವಿಡಿಯೋ ವೈರಲ್ ಮಾಡಿರುವ ಸಂಬಂಧ ಜಮಖಂಡಿ ‌ನಗರ ಠಾಣೆಗೆ ಆಗಮಿಸಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.