ರೈಲು ನಿಲ್ದಾಣದಲ್ಲಿಯೇ ಪತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಪತ್ನಿ : ಹೆಂಡತಿಯ WWF‌ ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅಂತ ಎಲ್ಲರೂ ಹೇಳುತ್ತಾರೆ. ಆದರೆ ಈ ಗಂಡ ಹೆಂಡರ ಜಗಳ ರೈಲು ನಿಲ್ದಾಣದ (Railway Station) ತನಕ ಅಂತ ಹೇಳಿದರೆ ತಪ್ಪಾಗಲಾರದು.

ಸದ್ಯ ಗಂಡ-ಹೆಂಡತಿಯ (Wife-Husband) ಜಗಳದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲು ಸಕತ್‌ ವೈರಲ್‌ ಆಗುತ್ತಿದೆ. ರೈಲು ಫ್ಲಾಟ್‌ ಫಾರಂದಲ್ಲಿಯೇ ಈ ದಂಪತಿಗಳ ಜಗಳ ನೋಡಿದರೆ ನೀವೂ ಎಂದು ಈ ಪರಿ ಜಗಳದ ದೃಶ್ಯ ನಿಮ್ಮ ಜೀವನದಲ್ಲಿಯೇ ಎಂದು ನೋಡಿರಲಾರಿರಿ. ಇದನ್ನು ಓದಿ : ರಶ್ಮಿಕಾ ಮಂದಣ್ಣ ವಿಡಿಯೊ ವೈರಲ್ ; ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಅಭಿಮಾನಿಗಳ ಆಗ್ರಹ.!

ವಿಡಿಯೋದಲ್ಲೇನಿದೆ :

ರೈಲ್ವೆ ನಿಲ್ದಾಣದಲ್ಲಿ ಗಂಡ ತನ್ನ ಹೆಂಡತಿಯ ಭುಜ ತಟ್ಟಿ ಏನೋ ಹೇಳಲು ಪ್ರಯತ್ನಿಸುತ್ತಾನೆ.  ಅಷ್ಟಕ್ಕೆ ರೊಚ್ಚಿಗೆದ್ದ ಹೆಂಡತಿ, ಗಂಡನಿಗೆ ಕಪಾಳಮೋಕ್ಷ ಮಾಡುತ್ತಾಳೆ. ಕಪಾಳಕ್ಕೆ ಹೊಡೆದರು ಸಮಾಧಾನವಾದ ಹೆಂಡತಿ ನಿಜವಾದ WWF ಶುರು ಮಾಡಿಯೇ ಬಿಟ್ಟಿದ್ದಾಳೆ. ಗಂಡನನ್ನು ತನ್ನ ಎರಡು ಕೈಗಳಿಂದ ಹಿಡಿದು ಕೆಳಗೆ ಬೀಳಿಸುತ್ತಾಳೆ. ನಂತರ ತಾನು ರಣಚಂಡಿ ಅವತಾರ ತಾಳಿ ಗಂಡನನ್ನು ಚನ್ನಾಗಿ ಥಳಿಸುತ್ತಾಳೆ.

ಪಾಪ ಗಂಡ ಮಾತ್ರ ಹೆಂಡತಿಯ ಕೈಯಿಂದ ಹೊಡೆತ ತನ್ನುವುದನ್ನು ಬಿಟ್ಟರೇ ಮತ್ತೇನು ಮಾಡಲು ಆದಲೇ ಇಲ್ಲ. ಇನ್ನು ಎಂದಿನಂತೆ ಸುತ್ತ ಮುತ್ತಲಿನ ಸಾರ್ವಜನಿಕರು ಈ ದೃಶ್ಯ ನೋಡತ್ತಾ ನಿಂತರೇ ಹೊರತು ಯಾರು ಧೈರ್ಯ ಮಾಡಿ ಜಗಳ ಬಿಡಿಸಲು ಮುಂದಾಗಲೇ ಇಲ್ಲ. ಹೆಂಡತಿ ಆ ರೇಂಜಿನಲ್ಲಿ (Rang) ಗಂಡನಿಗೆ ಹೊಡೆಯುವುದನ್ನು ಕಂಡು ಸ್ಥಳದಲ್ಲಿದ್ದವರು ಮೂಕವಿಸ್ಮಿತರಾಗಿದ್ದರು.

ಮತ್ತೊಂದೆಡೆ ಕೆಲವರು ಇದನ್ನೆಲ್ಲಾ ರೆಕಾರ್ಡ್ ಮಾಡಿ ಪೋಸ್ಟ್ (Post) ಮಾಡಿದ್ದು ಆಯಿತು. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಇದನ್ನು ಓದಿ : 17 ಸಲ ಇರಿದು ಪತ್ನಿಯ ಬರ್ಬರ ಹತ್ಯೆ ; ಪತಿಗೆ ಕೋರ್ಟ್ ನೀಡಿದ ಶಿಕ್ಷಯೇನು ಗೊತ್ತಾ.?

ಹೆಂಡತಿಯೊಬ್ಬಳು ತನ್ನ ಗಂಡನನ್ನು ಈ ಪರಿ ಥಳಿಸಿದ ರೀತಿಗೆ ನೆಟ್ಟಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪತಿ-ಪತ್ನಿಯರ ನಡುವೆ ಇಂತಹ ಜಗಳವನ್ನ ಹಿಂದೆಂದೂ ನೋಡಿಲ್ಲ ಎಂದು ನೆಟ್ಟಿಗರು ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ.