ಮದ್ಯದ ಅಮಲಿನಲ್ಲಿ ಹಾವಿನೊಂದಿಗೆ ಹುಚ್ಚಾಟ ; ಯುವಕ ಸಾವು, ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಮದ್ಯದ ನಶೆಯಲ್ಲಿದ್ದ ಯುವಕನೊಬ್ಬ ಹಾವನ್ನು ಹಿಡಿದುಕೊಂಡು ಅದರೊಂದಿಗೆ ಹುಚ್ಚಾಟ ತೋರಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಐರೌಲೀ ಗ್ರಾಮದ ರೋಹಿತ್‌ ಜೈಸ್ವಾಲ್‌ (22) ಎಂಬ ಯುವಕ ಸಾವಿಗೀಡಾಗಿದ್ದಾನೆ ಎಂದು ವರದಿಯಿಂದ ತಿಳಿದುಬಂದಿದೆ.

ಇನ್ನೂ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಓದಿ : ಮಹಿಳಾ ಪ್ರತಿನಿಧಿಗೆ ಕಿಸ್ ಕೊಡಲು ಯತ್ನಿಸಿದ ವಿದೇಶಾಂಗ ಸಚಿವ ; ವಿಡಿಯೋ ವೈರಲ್.!

ಕುಡಿದ ಮತ್ತಿನಲ್ಲಿ ಹಾವೊಂದನ್ನು ಹಿಡಿದುಕೊಂಡು, ನಾನು ಮಹಾಕಾಲ್ (ಈಶ್ವರ) ನನಗೆ ಕಚ್ಚು ಎಂದು ಕೂಗಾಡುತ್ತಾ, ಹಾವಿಗೆ ಮುತ್ತು ಕೊಡುತ್ತಾ, ಕುತ್ತಿಗೆ ಸುತ್ತಿಕೊಳ್ಳುತ್ತಾ, ಬಳಿಕ ನಾಲಿಗೆಗೆ ಕಚ್ಚಿಸಿಕೊಂಡಿರುವ ದೃಶ್ಯ ವಿಡಿಯೋದಲ್ಲಿದೆ.

ಇನ್ನು ಇವನ ವರ್ತನೆಯಿಂದ ಆಕ್ರೋಶಗೊಂಡ ಹಾವು ನಾಲ್ಕೈದು ಬಾರಿ ಜೈಸ್ವಾಲ್‌ ಗೆ ಕಚ್ಚಿದ ಪರಿಣಾಮ ಆತ ಸಾವನ್ನಪ್ಪಿದ್ದ.

ಈತ ಚಿತ್ರೀಕರಣ ಮಾಡಿಕೊಂಡಿರುವ 4 ನಿಮಿಷ 38 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದನ್ನು ಓದಿ : ರಶ್ಮಿಕಾ ಮಂದಣ್ಣ ವಿಡಿಯೊ ವೈರಲ್ ; ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಅಭಿಮಾನಿಗಳ ಆಗ್ರಹ.!