ರಶ್ಮಿಕಾ ಮಂದಣ್ಣ ವಿಡಿಯೊ ವೈರಲ್ ; ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಅಭಿಮಾನಿಗಳ ಆಗ್ರಹ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಬೆಂಗಳೂರು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಹೆಸರಿನಲ್ಲಿ ವಿಡಿಯೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಬೇರೆ ಯುವತಿಯ ವಿಡಿಯೊದೊಂದಿಗೆ ರಶ್ಮಿಕಾ ಮುಖ ಮಾರ್ಫ್‌ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಮಾಡಿದ್ದಾರೆ.

ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಅನೇಕರು ಇದು ಫೇಕ್‌ ಎಂದು ಕರೆಯಲು ಶುರು ಮಾಡಿದರು. ಅಸಲಿಯಾಗಿ ಆ ವಿಡಿಯೊದಲ್ಲಿ ಇರುವುದು ಜಾರಾ ಪಟೇಲ್. ಆದರೆ ಇದರಲ್ಲಿ ಆ ಹುಡುಗಿ ಬಹಳ ಹಾಟ್‌ ಆಗಿ ಕಾಣಿಸಿಕೊಂಡಿದ್ದು, ರಶ್ಮಿಕಾಗೆ ಕಳಂಕ ತರಲು ಈ ರೀತಿ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಬಾಲಿವುಡ್‌ ನಟ ಅಮಿತಾಭ್‌ ಕೂಡ ಸಾಥ್‌ ಕೊಟ್ಟಿದ್ದು, ʻಕಾನೂನಾತ್ಮಕವಾಗಿ ಬಲವಾದ ಪ್ರಕರಣವಾಗಿದೆʼ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿಹಳದಿ ಹಲ್ಲುಗಳಿಗೆ ಉತ್ತಮ ಮನೆ ಮದ್ದುಗಳು.!

ರಶ್ಮಿಕಾ 2022ರಲ್ಲಿ ಗುಡ್‌ಬೈ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ವಿಕಾಸ್ ಬೆಹ್ಲ್ ನಿರ್ದೇಶಿಸಿದ ಈ ಚಿತ್ರದಲ್ಲಿ ನೀನಾ ಗುಪ್ತಾ, ಪಾವೈಲ್ ಗುಲಾಟಿ, ಎಲ್ಲಿ ಅವ್ರಾಮ್, ಸುನಿಲ್ ಗ್ರೋವರ್ ಮತ್ತು ಸಾಹಿಲ್ ಮೆಹ್ತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನಟಿ ಬಿಗ್ ಬಿ ಮಗಳ ಪಾತ್ರವನ್ನು ನಿರ್ವಹಿಸಿದ್ದಾರೆ. ಇದೀಗ ಸಿನಿಮಾಗಿಂತ ನಟಿ ವಿಡಿಯೊ ವಿಚಾರಕ್ಕೆ ಸಖತ್‌ ಸುದ್ದಿಯಲ್ಲಿದ್ದಾರೆ.

ಸೆಲೆಬ್ರೆಟಿಗಳ ಫೋಟೊ, ವಿಡಿಯೊ ಮಾರ್ಪ್‌ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ತೇಲಿ ಬಿಡುವುದು ಇದೇನು ಮೊದಲೇನಲ್ಲ. ಆದರೆ ವೈರಲ್‌ ಆಗಿರುವ ವಿಡಿಯೊದಲ್ಲಿನ ಯುವತಿ ಝರಾ ಪಟೇಲ್ ತಮ್ಮ ಹಾಟ್ ವಿಡಿಯೊಗೆ ರಶ್ಮಿಕಾ ಮಂದಣ್ಣ ಮುಖ ಅಂಟಿಸಿ ವೈರಲ್ ಮಾಡಿದ್ದಾರೆ. ಝರಾ ಪಟೇಲ್ ತುಂಡು ಬಟ್ಟೆಯಲ್ಲಿ ಲಿಫ್ಟ್ ಒಳಗೆ ಪ್ರವೇಶಿಸಿರುವುದನ್ನು ನೋಡಬಹುದು. ಇದನ್ನೂ ಓದಿಬೆಳ್ಳಂಬೆಳಗ್ಗೆ ರೈಲ್ವೇ ಟ್ರ್ಯಾಕ್‌ಗೆ ಬಿದ್ದ ಬಸ್ : ನಾಲ್ವರು ಸಾವು, 28 ಮಂದಿಗೆ ಗಾಯ.!

ಡೀಪ್ ನೆಕ್ ಡ್ರೆಸ್‌ನಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ. ಆದರೆ ಆಕೆಯ ಮುಖವನ್ನು ರಶ್ಮಿಕಾ ಮಂದಣ್ಣ ರೀತಿ ಬದಲಿಸಲಾಗಿದೆ. ರಶ್ಮಿಕಾ ರೀತಿ ಬದಲಿಸಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಕೃಪೆ : ವಿಸ್ತಾರ ನ್ಯೂಸ್.