ಬೆಳ್ಳಂಬೆಳಗ್ಗೆ ರೈಲ್ವೇ ಟ್ರ್ಯಾಕ್‌ಗೆ ಬಿದ್ದ ಬಸ್ : ನಾಲ್ವರು ಸಾವು, 28 ಮಂದಿಗೆ ಗಾಯ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಸೋಮವಾರ (ದಿ.06) ಮಧ್ಯರಾತ್ರಿ ರಾಜಸ್ಥಾನದ ದೌಸಾ (Rajasthan Dausa) ಜಿಲ್ಲೆಯಲ್ಲಿ‌ ನಿಯಂತ್ರಣ ತಪ್ಪಿದ ಬಸ್‌ವೊಂದು ರೈಲು ಹಳಿಯ (Railway Track) ಮೇಲೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಈ ಅಪಘಾತ ರಾಷ್ಟ್ರೀಯ ಹೆದ್ದಾರಿ 21ರಲ್ಲಿ ಸಂಭವಿಸಿತು. ಪ್ರಯಾಣಿಕರ ಬಸ್ ತಡೆಗೊಡೆಗೆ ಡಿಕ್ಕಿ ಹೊಡೆದು ಕೆಳಗಿನ ರೈಲ್ವೆ ಹಳಿ ಮೇಲೆ ಬಿದ್ದಿದೆ. ಇದರಿಂದಾಗಿ ರೈಲುಗಳ ಸಂಚಾರವೂ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಇಂದು ಸೋಮವಾರ ಮಧ್ಯರಾತ್ರಿ 2:15ಕ್ಕೆ ಮೇಲ್ಸೇತುವೆಯಿಂದ ದೌಸಾದ ರೈಲ್ವೆ ಹಳಿ ಮೇಲೆ ಬಸ್‌ ಬಿದ್ದು, ಈ ದುರಂತ ಸಂಭವಿಸಿದೆ. 30ಕ್ಕೂ ಹೆಚ್ಚು ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಹರಿದ್ವಾರದಿಂದ ಜೈಪುರ ಕಡೆಗೆ ಹೋಗುತ್ತಿದ್ದ ಪ್ಯಾಸೆಂಜರ್ ಬಸ್ (Passenger Bus) ನಿಯಂತ್ರಣ ತಪ್ಪಿ ಕಬ್ಬಿಣದ ರೇಲಿಂಗ್ ಮುರಿದು ಕೆಳಗೆ ಬಿದ್ದಿದೆ. ಇದನ್ನೂ ಓದಿಮದುವೆಯಾಗಿ ಆರೇ ತಿಂಗಳಿಗೆ ಪತಿಗೆ ಡಿವೋರ್ಸ್ ನೀಡಿದ ಪತ್ನಿ : ಕಾರಣ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ.

ಬಸ್ ನೇರವಾಗಿ ಜೈಪುರ ದೆಹಲಿ ರೈಲ್ವೆ ಮಾರ್ಗದ ಹಳಿ ಮೇಲೆ ಬಿದ್ದಿದೆ. ಬಸ್ ರೈಲು ಹಳಿ ಮೇಲೆ ಬಿದ್ದಿರುವ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿದ್ದು, ಪೊಲೀಸರು ಹಾಗೂ ಆಂಬ್ಯುಲೆನ್ಸ್ ವಾಹನಗಳು ಸ್ಥಳಕ್ಕೆ ಧಾವಿಸಿದ್ದವು ಎಂದು ದೌಸಾ ಎಡಿಎಂ ರಾಜ್‌ಕುಮಾರ್ ಕಸ್ವಾ ತಿಳಿಸಿದರು.

ಘಟನೆಯಲ್ಲಿ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಹೆಚ್ಚುವರಿ ತನಿಖೆ ನಡೆಸಲಾಗುತ್ತಿದೆ ಎಂದು ದೌಸಾದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜ್‌ಕುಮಾರ್ ಕಸ್ವಾ ತಿಳಿಸಿದ್ದಾರೆ. ಸಂಬಂಧಪಟ್ಟ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. (ಏಜೇನ್ಸಿಸ್)