97 ಸಾವಿರ ಭಾರತೀಯರನ್ನು ಅಮೆರಿಕ ಬಂಧಿಸಿದ್ದೇಕೆ.?

ಜನಸ್ಪಂದನ ನ್ಯೂಸ್, ಡೆಸ್ಕ್‌ : ಗಡಿ ದಾಟಿ ಅಕ್ರಮವಾಗಿ ಅಮೆರಿಕ (America) ಪ್ರವೇಶಿಸುತ್ತಿದ್ದ 96,917 ಮಂದಿ ಭಾರತೀಯರನ್ನು (Indians) ಒಂದು ವರ್ಷದ ಅವಧಿಯಲ್ಲಿ ಬಂಧಿಸಲಾಗಿದೆ ಎಂದು ಯುಎಸ್‌ ಕಸ್ಟಮ್ಸ್‌ & ಬಾರ್ಡರ್‌ ಪ್ರೊಟೆಕ್ಷನ್‌ ದತ್ತಾಂಶವು ತಿಳಿಸಿದೆ. 

2022 ರ ಅಕ್ಟೋಬರ್‌ನಿಂದ 2023 ರ ಸೆಪ್ಟೆಂಬರ್‌ ವರೆಗೆ 90 ಸಾವಿರಕ್ಕೂ ಹೆಚ್ಚು ಜನ ಗಡಿ ದಾಟಿ ಅಕ್ರಮವಾಗಿ ಅಮೆರಿಕವನ್ನು ಪ್ರವೇಶಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಕಾನೂನುಬಾಹಿರವಾಗಿ ಯುಎಸ್ ಗಡಿಯನ್ನು ದಾಟುವಾಗ ಭಾರತೀಯರು ಐದು ಪಟ್ಟು ಹೆಚ್ಚಳವಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಇದನ್ನುಓದಿ : ಸರ್ಕಾರಿ ಮಹಿಳಾ ಅಧಿಕಾರಿಯ ಬರ್ಬರ ಹತ್ಯೆ.! 

2019-20ರಲ್ಲಿ 19,883 ಭಾರತೀಯರನ್ನು ಬಂಧಿಸಲಾಗಿತ್ತು. 2020-21ರಲ್ಲಿ 30,662 ಅರೆಸ್ಟ್‌ ಮಾಡಲಾಗಿದೆ. 2021-22ರಲ್ಲಿ ಈ ಸಂಖ್ಯೆ 63,927 ಆಗಿತ್ತು ಎಂದು ಅಂಕಿಅಂಶಗಳು ತಿಳಿಸಿವೆ.

2022 ರ ಅಕ್ಟೋಬರ್‌ ಮತ್ತು ಸೆಪ್ಟೆಂಬರ್ ನಡುವೆ ಬಂಧಿಸಲಾದ 96,917 ಭಾರತೀಯರಲ್ಲಿ ಹೆಚ್ಚಾಗಿ ಪಂಜಾಬ್ ಮತ್ತು ಗುಜರಾತ್‌ ವಲಸೆ ಬಂದವರೇ ಆಗಿದ್ದಾರೆ. ಕೆನಡಾ ಗಡಿಯಲ್ಲಿ 30,010 ಮಂದಿ ಮತ್ತು 41,770 ಮಂದಿ ಮೆಕ್ಸಿಕೊದ ಗಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ. 

2023 ರ ಆರ್ಥಿಕ ವರ್ಷದಲ್ಲಿ 84,000 ಭಾರತೀಯ ವಯಸ್ಕರು ಅಕ್ರಮವಾಗಿ ಯುಎಸ್ ಅನ್ನು ಪ್ರವೇಶಿಸಿದ್ದಾರೆ. ಬಂಧಿತರಲ್ಲಿ 730 ಅಪ್ರಾಪ್ತ ವಯಸ್ಕರು ಸೇರಿದ್ದಾರೆ. ಇದನ್ನುಓದಿ : ಕೆಟ್ಟ ಕೊಲೆಸ್ಟ್ರಾಲ್ಅನ್ನು ಕಡಿಮೆ ಮಾಡಲು ಅತ್ಯುತ್ತಮ ಆಯ್ಕೆ ಈ ಹಣ್ಣು.! 

ಸೆನೆಟ್‌ನಲ್ಲಿ ಈ ಬಗ್ಗೆ ಮಾತನಾಡಿರುವ ಜೇಮ್ಸ್ ಲ್ಯಾಂಕ್‌ಫೋರ್ಡ್, ಮೆಕ್ಸಿಕೋದಲ್ಲಿನ ಕ್ರಿಮಿನಲ್ ಕಾರ್ಟೆಲ್‌ಗಳು ವಲಸಿಗರಿಗೆ ತರಬೇತಿ ನೀಡುತ್ತಿದ್ದಾರೆ. ದೇಶಕ್ಕೆ ಪ್ರವೇಶಿಸುವಾಗ ಏನು ಹೇಳಬೇಕು, ಎಲ್ಲಿಗೆ ಹೋಗಬೇಕು ಎಂಬ ಬಗ್ಗೆ ತಿಳಿಸಿಕೊಡುತ್ತಿದ್ದಾರೆ. ಅದಕ್ಕಾಗಿ ಹಣವನ್ನೂ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. (ಏಜೇನ್ಸಿಸ್)