ರಾಜ್ಯೋತ್ಸವ ಮುಗಿಸಿ ಹೋಗುತ್ತಿದ್ದಾಗ ಬೈಕ್ ಅಪಘಾತ : ಇಬ್ಬರ ಸಾವು, ಇಬ್ಬರ ಸ್ಥಿತಿ ಗಂಭೀರ.!

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿಯಿಂದ ರಾಜ್ಯೋತ್ಸವ ಮುಗಿಸಿಕೊಂಡು ವಾಪಸ್ಸ ಹೋಗುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಇನ್ನಿಬ್ಬರು ಗಂಭಿರವಾದ ಗಾಯಗಳಾದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು (Kituur) ತಾಲೂಕಿನಲ್ಲಿ ನಡೆದಿದೆ.

ಮೃತ ದುರ್ದೈವಿಗಳನ್ನು ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದ ಲಬೈಕ್ ಹಲಸಿಗರ ಮತ್ತು ಬೆಳಗಾವಿಯ ಬಾಳೇಕುಂದ್ರಿ ಗ್ರಾಮದ ಶ್ರೀನಾಥ ಗುಜನಾಳ‌ ಎಂದು ಗುರುತಿಸಲಾಗಿದೆ. ಇದನ್ನು ಓದಿ : ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ; ಯೆಲ್ಲೋ ಅಲರ್ಟ್​ ಘೋಷಣೆ.!

ಬೆಳಗಾವಿಯಲ್ಲಿ ರಾಜ್ಯೋತ್ಸವ ಮುಗಿಸಿಕೊಂಡು ಬೈಕ್ (Bike) ಮೂಲಕ ತಮ್ಮೂರಿಗೆ ವಾಫಸ್ಸಾಗುತ್ತಿದ್ದಾಗ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂಕೆ‌ ಹುಬ್ಬಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ – 4 ರ ಮೇಲೆ ಘಟನೆ ನಡೆದಿದೆ.

ನಡೆದದಿಷ್ಟು :

ನಿನ್ನೆ (ದಿ.1) ಬೆಳಗಾವಿಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವವನ್ನು ಮುಗಿಕೊಂಡು ಯುವಕರಿಬ್ಬರು ಬೈಕ್ ಮೂಲಕ ತಮ್ಮೂರಿಗೆ ವಾಪಸ್ಸ ಹೋಗುತ್ತಿದ್ದರು. ಹೋಗುವಾಗ ಜಿಲ್ಲೆಯ ಕಿತ್ತೂರು ತಾಲೂಕಿನ ಎಂಕೆ‌ ಹುಬ್ಬಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ – 4 ರ ಮೇಲೆ ದಾಬಾದಲ್ಲಿ ಊಟ ಮುಗಿಸಿಕೊಂಡು ಬರುತ್ತಿದ್ದ ಪಾದಚಾರಿಗಳಿಗೆ ರಭಸದಿಂದ‌ ಬಂದ ಬೈಕ್ ಡಿಕ್ಕಿ ಹೊಡೆದಿದೆ.

ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಒಬ್ಬ ಬೈಕ್ ಸವಾರ ಹಾಗೂ ಮತ್ತೊಬ್ಬ ಪಾದಚಾರಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತು ಧಾರವಾಡದ ಅಲ್ತಾಫ್ ನಾಲಬಂದ, ಕಡತನ ಬಾಗೇವಾಡಿಯ ಅರ್ಜುನ ರಂಗಣ್ಣನವರಗೆ ಗಂಭೀರ ಗಾಯಗಳಾಗಿವೆ. ಇದನ್ನು ಓದಿ : ವೇಷ ರೀಕ್ರಿಯೇಟ್ : ಬಿಗ್ ಬಾಸ್ ಮಾಜಿ ಸ್ಪರ್ಧಿಗೆ ಅತ್ಯಾಚಾರ ಹಾಗೂ ಕೊಲೆ ಬೆದರಿಕೆ.!

ಅಪಘಾತವಾದ ಹಿನ್ನಲೆಯಲ್ಲಿ ಶವಗಳು ಬಿದ್ದ ಸ್ಥಳದಿಂದ 300 ಮೀಟರ್ ದೂರದಲ್ಲಿ ಬೈಕ್ ಪತ್ತೆಯಾಗಿದೆ. ಅಪಘಾತ (Accident) ನಡೆದ ಬಳಿಕವೂ ಇಷ್ಟು ದೂರ ಬೈಕ್‌ ಹೋದುದು ಹೇಗೆ ಎಂಬುದು ಅಚ್ಚರಿಯ ಪ್ರಶ್ನೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.