ಜನಸ್ಪಂದನ ನ್ಯೂಸ್, ಡೆಸ್ಕ್ : ಸದಾ ಚಿತ್ರವಿಚಿತ್ರ ಉಡುಗೆಗಳಿಂದ ಫೇಮಸ್ ಆಗಿರುವ ಬಾಲಿವುಡ್ ಬೆಡಗಿ ಉರ್ಫಿ ಜಾವೇದ್ ಸಿನಿಮಾಗಳಿಗಿಂತ ಸಾಮಾಜಿಕ ಜಾಲತಾಣದ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ.
ಸದ್ಯ ಅವರ ಹೊಸ ವೇಷ ನೋಡಿ ಕೆಲವರು ರೇಪ್ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ. ಇನ್ನೂ ಬೆದರಿಕೆ ಸಂದೇಶದ ಸ್ಕ್ರೀನ್ಶಾಟ್ಗಳನ್ನು ಅವರು ಹಂಚಿಕೊಂಡಿದ್ದಾರೆ.
ಇದಕ್ಕೆ ಕಾರಣ ಆ ಒಂದು ಡ್ರೆಸ್. ಉರ್ಫಿ ಜಾವೇದ್ ಅವರು ಇತ್ತೀಚೆಗೆ ಹಾಲೋವೀನ್ ಪ್ರಯುಕ್ತ ವಿಶೇಷವಾದ ಬಟ್ಟೆ ಧರಿಸಿದ್ದರು.
ಇದನ್ನು ಓದಿ : ಹೃದಯಾಘಾತದಿಂದ 8 ತಿಂಗಳ ಗರ್ಭಿಣಿ ನಟಿ ಸಾವು.!
‘ಭೂಲ್ ಭುಲಯ್ಯ’ ಸಿನಿಮಾದಲ್ಲಿ ರಾಜ್ಪಾಲ್ ಯಾದವ್ ಅವರು ಮಾಡಿದ್ದ ಚೋಟಾ ಪಂಡಿತ್ ಎಂಬ ಪಾತ್ರದ ರೀತಿಯಲ್ಲಿ ಉರ್ಫಿ ವೇಷ ಹಾಕಿದ್ದಾರೆ.
ಆ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೇಷ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ ಹಾಗಾಗಿ ಸಖತ್ ಟ್ರೋಲ್ ಆಗಿದೆ. ಬರೀ ಟ್ರೋಲ್ ಆಗಿದ್ದರೆ ಉರ್ಫಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.
ಅವರಿಗೆ ಈಗ ರೇಪ್ ಮತ್ತು ಕೊಲೆ ಬೆದರಿಕೆ (Death Threat) ಹಾಕಲಾಗಿದೆ. ಈ ಬಗ್ಗೆ ಸ್ವತಃ ಉರ್ಫಿ ಜಾವೇದ್ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನು ಓದಿ : ವಿದ್ಯಾರ್ಥಿಯನ್ನು ಹತ್ಯೆ ಮಾಡಿದ ಶಿಕ್ಷಕಿಯ ಪ್ರಿಯಕರ.!