ಜನಸ್ಪಂದನ ನ್ಯೂಸ್, ಬೈಲಹೊಂಗಲ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಒಕ್ಕುಂದ ಗ್ರಾಮದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಯುವಕ (Young Man) ಸಾವನ್ನಪ್ಪಿರುವ ಘಟನೆ ಶನಿವಾರ ಸಂಜೆ ಸಂಭವಿಸಿದೆ.
ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ ಯುವಕನನ್ನು ಪ್ರಜ್ವಲ್ ಚನಗೌಡ ಮುನೇಪ್ಪನವರ(18) ಎಂದು ಗುರುತಿಸಲಾಗಿದೆ.
ಯುವಕ ಪ್ರಜ್ವಲ್ (Prajwal) ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಧ್ವಜಸ್ಥಂಭ ನೆಡುತ್ತಿದ್ದನೆಂದು ತಿಳಿದು ಬಂದಿದೆ. ಈ ವೇಳೆ ಧ್ವಜಸ್ಥಂಭ ಆಕಸ್ಮಿಕವಾಗಿ ತಂತಿಗೆ ತಗುಲಿದ ಪರಿಣಾಮ ವಿದ್ಯುತ್ ಪ್ರವಹಿಸಿ ಯುವಕ ಸಾವನ್ನಪ್ಪಿರುವುದಾಗಿ ಗೊತ್ತಾಗಿದೆ. ಇದನ್ನೂ ಓದಿ : ವಿಚಿತ್ರ ಮದುವೆ : ತನಗಿಂತ 31 ವರ್ಷ ಚಿಕ್ಕ ವಯಸ್ಸಿನ ಮಗನನ್ನೇ ಮದುವೆಯಾದ ತಾಯಿ.!
ಒಕ್ಕುಂದ ಗ್ರಾಮದ ಬಸ್ ನಿಲ್ದಾಣದ ಮುಂದೆ ಕನ್ನಡ ರಾಜ್ಯೋತ್ಸವ ಆಚರಣೆಗಾಗಿ ಧ್ವಜಸ್ಥಂಭ ನಿರ್ಮಿಸಿ ನವೆಂಬರ್ 1ರಂದು ಧ್ವಜಾರೋಹಣಕ್ಕೆ ಶನಿವಾರ ಸಂಜೆ (Evening) ಗ್ರಾಮದ ಯುವಕರೆಲ್ಲರೂ ಸೇರಿ ಸಿದ್ಧತೆ ನಡೆಸಿದ್ದರು.
ಧ್ವಜಸ್ಥಂಭ ನೆಡುತ್ತದ್ದ ಸ್ಥಳದಲ್ಲಿ ಸರ್ವೀಸ್ ವಿದ್ಯುತ್ ಹಾದು ಹೋಗಿದ್ದು, ಈ ವೇಳೆ ತಂತಿಗೆ ಧ್ವಜಸ್ಥಂಭ ತಾಗಿದೆ. ಧ್ವಜಸ್ಥಂಭಕ್ಕೆ ವಿದ್ಯುತ್ ಹರಿದ ಪರಿಣಾಮ ಕಂಬ ಹಿಡಿದಿದ್ದ ಪ್ರಜ್ವಲ್ಗೆ ಪ್ರವಹಿಸಿದೆ. ಕೂಡಲೇ ಬೈಲಹೊಂಗಲ ತಾಲೂಕಾಸ್ಪತ್ರೆಗೆ ದಾಖಲಿಸಿದರೂ ದುರ್ದೈವಶಾತ್ ಚಿಕಿತ್ಸೆ ಫಲಕಾರಿಯಾಗದೆ ಪ್ರಜ್ವಲ್ ಸಾವನ್ನಪ್ಪಿದ್ದಾನೆ.
ಪ್ರಜ್ವಲ್, ಇತ್ತೀಚೆಗಷ್ಟೇ ಅಗ್ನಿವೀರ್ ಪರೀಕ್ಷೆ ಪಾಸ್ ಆಗಿದ್ದನೆಂದು, ದೈಹಿಕ ಪರೀಕ್ಷೆಗೆ ಹಾಜರಾಗಲು ತಯಾರಿ ನಡೆಸುತ್ತಿದನೆಂದು ಹೇಳಲಾಗುತ್ತಿದೆ. ಆದರೆ ದುರಾದೃಷ್ಟವಶಾತ್ ಈ ಅವಘಡ ಸಂಭವಿಸಿದೆ. ಇದನ್ನೂ ಓದಿ : ಚಳಿಗಾಲ ಶುರುವಾಯ್ತು : ಅಡುಗೆ ಮನೆಯಲ್ಲಿರಲಿ ಈ ಆಹಾರ ಪದಾರ್ಥಗಳು.!
ಮಗನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.