ಜನಸ್ಪಂದನ ನ್ಯೂಸ್, ಡೆಸ್ಕ್ : ಎರಡನೇ ತರಗತಿಯ ವಿದ್ಯಾರ್ಥಿನಿಯೋರ್ವಳಿಗೆ ಆ್ಯಸಿಡ್ ಎರಚಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರನ್ನು ಅಮಾನತು ಮಾಡಲಾದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಅಮಾನುಗೊಳಗಾದ ಮುಖ್ಯ ಶಿಕ್ಷಕನನ್ನು ಚಿತ್ರದುರ್ಗ ತಾಲೂಕಿನ ಜೋಡಿಚಿಕ್ಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಂಗಸ್ವಾಮಿ ಎಂದು ಗೊತ್ತಾಗಿದೆ.
ಶೌಚಾಲಯ ತೊಳೆಯಲು ಬಳಸುವ ಆ್ಯಸಿಡ್ ಅನ್ನು ವಿದ್ಯಾರ್ಥಿನಿ ಮೇಲೆ ಎರಚಿದ ಆರೋಪವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರಂಗಸ್ವಾಮಿ ಎದುರಿಸುತ್ತಿದ್ದಾರೆ.
ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ಎರಚಿದ ಆರೋಪದ ಹಿನ್ನಲೆಯಲ್ಲಿ ಮುಖ್ಯಶಿಕ್ಷಕನ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಘಟನೆ ಹಿನ್ನೆಲೆ ಡಿಡಿಪಿಐ ಅವರು ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.
ಇದೇ ದಿ.25 ರಂದು ಚಿತ್ರದುರ್ಗ ತಾಲೂಕಿನ ಜೋಡಿಚಿಕ್ಕೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳೆಲ್ಲರು ಬಂದಿದ್ದರು. ಬಂದ ಮಕ್ಕಳ ಕೈಯಿಂದ ಶಾಲೆಯ ಮುಖ್ಯ ಶಿಕ್ಷಕ ರಂಗಸ್ವಾಮಿ ಶೌಚಾಲಯ ತೊಳೆಯಲು ಸೂಚಿಸಿದ್ದರು ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : ಪ್ರಜ್ಞೆ ತಪ್ಪಿದ ಹಾವಿನ ತುಟಿಗೆ ಬಾಯಿಟ್ಟು ಸಿಪಿಆರ್ ಚಿಕಿತ್ಸೆ ನೀಡಿದ ಪೊಲೀಸ್ ; ವಿಡಿಯೋ ವೈರಲ್.!
ಈ ವೇಳೆ ಎರಡನೆ ತರಗತಿಯಲ್ಲಿ ಓದುತ್ತಿದ್ದ ಸಿಂಚನಾ (8) ಎಂಬ ವಿದ್ಯಾರ್ಥಿನಿ ಅಲ್ಲಿಗೆ ತೆರಳಿದ್ದಾಲೆ. ಆಗ ಮುಖ್ಯ ಶಿಕ್ಷಕ ಕೋಪಗೊಂಡು ಶೌಚಾಲಯ ತೊಳೆಯಲು ಇರಿಸಿದ್ದ ಆಸಿಡ್ ತೆಗೆದುಕೊಂಡು ಎರಚಿದ್ದರು. ಹೀಗಾಗಿ ಸಿಂಚನಾಳ ಬೆನ್ನಿಗೆ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಗಾಯಾಳು ವಿದ್ಯಾರ್ಥಿನಿಯ ತಾಯಿ ಪವಿತ್ರಾ, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಪರಿಣಾಮ ಮುಖ್ಯ ಶಿಕ್ಷಕರನ್ನು ಅಮಾನತ್ತು ಮಾಡಲಾಗಿದೆ.
ಗಾಯಾಳು ವಿದ್ಯಾರ್ಥಿನಿ ಸಿಂಚನಾಳನ್ನು ಈ ವೇಳೆ ಮುಖ್ಯ ಶಿಕ್ಷಕ ರಂಗಸ್ವಾಮಿಯೇ ಜಿಲ್ಲಾಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದರು. ಶೌಚಾಲಯ ಸ್ವಚ್ಛತೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಆಗ ಸಿಂಚನಾ ಅಲ್ಲಿಗೆ ಬಂದಿದ್ದಳು. ಆಗ ಇಲ್ಲಿಂದ ತೆರಳು ಎನ್ನುವಷ್ಟರಲ್ಲಿ ಪಾಕೆಟ್ ಕಟ್ ಮಾಡಿದ ಪುಡಿ ಸಿಂಚನಾಳ ಮೇಲೆ ಬಿದ್ದಿತು. ಇದರಲ್ಲಿ ಯಾವುದೇ ದುರುದ್ದೇಶ ಇರಲಿಲ್ಲ ಎಂದು ಮುಖ್ಯಶಿಕ್ಷಕ ರಂಗಸ್ವಾಮಿ ಅವರು ಹೇಳುತ್ತಿದ್ದಾರೆ. (ಏಜೇನ್ಸಿಸ್)
ಇದನ್ನು ಓದಿ : ಮಹಿಳಾ ವೈದ್ಯೆ ಸಂಶಯಾಸ್ಪದ ಸಾವು ; ಗೋಡೆಯ ಮೇಲೆ ಸಾವಿನ ಬಗ್ಗೆ ಬರಹ.?