ಸರ್ಕಾರಿ ವೈದ್ಯೆ ಸಂಶಯಾಸ್ಪದ ಸಾವು ; ಗೋಡೆಯ ಮೇಲೆ ಸಾವಿನ ಬಗ್ಗೆ ಬರಹ.?

ಜನಸ್ಪಂದನ ನ್ಯೂಸ್, ಗದಗ : ಗದಗ ತಾಲೂಕಿನ ಹುಲಕೋಟಿ (hulkoti) ಗ್ರಾಮದಲ್ಲಿ ಪತಿಯೊಂದಿಗೆ ಜಗಳವಾಡಿದ ವೈದ್ಯೆಯೊಬ್ಬಳು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಸರ್ಕಾರಿ ವೈದ್ಯೆ ಡಾ. ಗೀತಾ ಕೋರಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರು ಹುಲಕೋಟಿ ಗ್ರಾಮದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಡಾ. ಗೀತಾ ಅವರು ಡಾ. ಕುಶಾಲ್‌ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಆದರೆ ಇತ್ತೀಚೆಗೆ ಇಬ್ಬರ ಮಧ್ಯೆ ಕಲಹ ಉಂಟಾಗಿ ಪ್ರತಿನಿತ್ಯ ಜಗಳವಾಡುತ್ತಿದ್ದರು.

ಇದನ್ನು ಓದಿ : ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟು ಆತ್ಮಹತ್ಯೆಗೆ ಶರಣು.!

ಈ ಜಗಳ ಸಾವಿನಲ್ಲಿ ಅಂತ್ಯವಾಗಿದ್ದು, ಮನೆಯಲ್ಲಿ ವೈದ್ಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ. ಆದರೆ ಗೀತಾಳ ಕುಟುಂಬಸ್ಥರು, ಪತಿ ಕುಶಾಲ್‌ ಆಕೆಯನ್ನು ಮರ್ಡರ್ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಇದಕ್ಕೆ ಪುಷ್ಠಿ ನೀಡುವಂತೆ ಗೋಡೆಯ ಮೇಲೆ ಸಾವಿನ ಬಗ್ಗೆ ಬರಹವಿದ್ದು, ಅದನ್ನು ಬರೆದವರು ಯಾರು ಎಂಬ ಮಾಹಿತಿ ತಿಳಿದುಬಂದಿಲ್ಲ.

ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.